ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿ ಜ್ಞಾ ಪ ನೆ. ಮಹನೀಯರೆ ! ಭಗವದನುಗ್ರಹದಿಂದ ನಾನು ಆರಂಭಿಸಿದ ರಾಮಾಯಣ ಭಾಗವತ ಗ್ರಂಥಗಳೆರಡೂ ನಿರ್ವಿಸ್ಸು ವಾಗಿ ಪೂರ್ತಿಹೊಂದಿದುವು. ಈ ಗ್ರಂಥ ವನ್ನು ಬರೆಯುವುದಕ್ಕೆ ಆರಂಭಿಸಿ, ಈಗ ಏಳುವರ್ಷಗಳಾದುವು. ನಮ್ಮ ರಾಮಾಯಣವು ಸರಜನಾನಂದಕರವೆಂಬುದನ್ನು ಸೂಚಿಸುವಂತೆ, ಅದು, ಕಳೆದ ಆನಂದಸಂವತ್ಸರದಲ್ಲಿ ಪೂರ್ತಿಹೊಂದಿತು. ನಮ್ಮ ಭಾಗವತವು ಸರಾ ರಸಿದ್ಧಿಪ್ರದವೆಂಬುದನ್ನು ಸೂಚಿಸುವಂತೆ ಈ ಸಿದ್ದಾರಿ ವರ್ಷದಲ್ಲಿ ಸಂಪೂ ರ್ಣವಾಯಿತು. ಈ ಕಾವ್ಯವನ್ನಾರಂಭಿಸಿದುದುಮೊದಲು, ಈ ಏಳು ವರ್ಷಗಳಲ್ಲಿ ಈ ಗ್ರಂಥಪ್ರಚಾರದಿಂದ ನನಗೆ ತಿಳಿದುಬಂದ ಅನುಭವ ವನ್ನೂ , ಇದರ ಪುರೋವೃದ್ಧಿಯನ್ನೂ ತಿಳಿಸುವುದು ನನಗೆ ಬಹಳ ಸಂತೋ ಷಕರವಾಗಿದೆ. ಮುಖ್ಯವಾಗಿ ಈ ನಮ್ಮ ಪ್ರಯತ್ನವು ಕೊನೆಮುಟ್ಟುವು ದಕ್ಕೆ, ಚಂದಾದಾರರ ಪ್ರೋತ್ಸಾಹವೇ ಮುಖ್ಯಸಾಧನವಾಯಿತೆಂಬುದರಲ್ಲಿ ಸಂದೇಹವಿಲ್ಲ. ನಾನು ರಾಮಾಯಣವನ್ನಾರಂಭಿಸಿದಾಗ, ಮೊದಲು ಆದ ರಲ್ಲಿ ಬಾಲಕಾಂಡವನ್ನು ಮಾತ್ರ 'ಒಂದು ಸಂಚಿಕೆಯಾಗಿ ಪ್ರಕಟಿಸಿ, ಅದಕ್ಕೆ ತಕ್ಕಷ್ಟು ಚಂದಾದಾರರ ಪೊತ್ಸಾಹವು ಲಭಿಸದಿದ್ದರೆ, ಆ ರಲ್ಲಿಯೇ ಆ ಪ್ರಯತ್ನವನ್ನು ನಿಲ್ಲಿಸಿಬಿಡುವುದಾಗಿ ಉದ್ದೇಶಸಿದ್ದೆನು. ಕೊನೆಕೊನೆಗೆ, ಚಂದಾದಾರರ ಸಂಖ್ಯೆಯು ಹೆಚ್ಚು ಇಬಂದು, ಕೇಳಿದ ವರಿಗೆ ಸಕಾಲಕ್ಕೆ ಪುಸ್ತಕಗಳನ್ನೊದಗಿಸುವುದೇ ಅಸಾಧ್ಯವಾಗುತ್ತ ಬಂ ದಿತು. ಇದುವರೆಗೆ ರಾಮಾಯಣದಲ್ಲಿ ಅನೇಕಮುದ್ರಣಗಳಾಗಿ, ಸಾವಿ ರಾರು ಪುಸ್ತಕಗಳು ಪ್ರಚಾರದಲ್ಲಿವೆ. ಈ ನಮ್ಮ ಭರತಖಂಡದಲ್ಲಿ, ಕರ್ಣಾ ಟಭಾಷೆಯ ಸಂಪರ್ಕವುಳ್ಳ ಪ್ರದೇಶಗಳಲ್ಲಿ, ಮೂಲೆಮೂಲೆಯಲ್ಲಿರುವ ಒಂದೊಂದುಗ್ರಾಮಕ್ಕೂ, ನಮ್ಮ ಪುಸ್ತಕವು ಮುಟ್ಟಿದೆಯೆಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಮೈಸೂರುದೇಶದಲ್ಲಿ ಮಾತ್ರವಲ್ಲದೆ, ಕೂ ಡಗು, ಹೈದರಾಬಾದು, ದಕ್ಷಿಣೋತ್ತರಕನ್ನಡದೇಶಗಳು, ಬೆಳಗಾಂ,