ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೯೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪e ಅಧ್ಯಾ. ೯.೨ | ಏಕಾದಶಸ್ಕಂಧನು. ಗಳಿಗೆ ಕಾರ್ ಕಾರಣಾವಸ್ಥೆಗಳೆರಡರಲ್ಲಿಯೂ ತಾನೇ ಮೇರೆಯಾಗಿ, ಅವೆಲ್ಲ ಕೂ ತಾನೇ ನಿಯಾಮಕನಾಗಿಯೂ ಇರುವನು. ಪ್ರಳಯದಶೆಯಲ್ಲಿ ಚಿದ ಚಿತ್ತುಗಳಿಗೆ ನಾಮರೂಪವಿಭಾಗಗಳಿಲ್ಲದೆ, ಎಲ್ಲವೂ ಸೇರಿ ಆ ಭಗವಂತನೋ ಬ್ಬನೇ ಆಗಿರುವುದರಿಂದ, ಆಗ • ಭಗವತೃರೂಪವು ಕೈವಲ್ಯವೆಂಬ ಹೆಸರಿ ನಿಂದ ಕರೆಯಲ್ಪಡುವುದು. ಮತ್ತು ಆಗ ಭಗವಂತನು ಸ್ವಲ್ಪ ಮಾತ್ರವೂ ಜಾಡ್ಯದುಃಖಾದಿಗಳ ಸಂಪರ್ಕವಿಲ್ಲದೆ, ಕೇವಲ ಜ್ಞಾನಾನಂದಸ್ವರೂಪನಾ ಗಿರುವನು. ಆ ಜ್ಞಾನಾನಂದಗಳು ಅವನಿಗೆ ಸಹಜವಾದುವೇ ಹೊರತು ಕರಪ್ರಾಪ್ತವಾದುದಲ್ಲ. ಆ ಭಗವಂತನಿಗೆ ಯಾವಾಗ ಸೃಷ್ಟಿಸಂಕಲ್ಪ ವುಂಟಾಗುವುದೋ, ಆಗ ಕೇವಲಸಂಕಲ್ಪ ಮಾತ್ರದಿಂದಲೇ, ತನಗೆ ಶರೀರ ಭೂತವಾಗಿಯೂ, ಅತಿಸೂಕ್ಷವಾಗಿಯೂ, ತ್ರಿಗುಣಾತ್ಮಿಕವಾಗಿಯೂ ಇರು ವ ಪ್ರಕೃತಿಯ ಗುಣಗಳನ್ನು ಕಲಗಿಸಿ, ಅದನ್ನು ಸ್ವರೂಪಕ್ಕೆ ತಿರುಗುವಂ ತೆ ಪ್ರೇರಿಸುವನು. ಆ ಪ್ರಕೃತಿಯಿಂದ ಆಹಂಕಾರಾತತ್ವಗಳೆಲ್ಲಕ್ಕೂ ಆಧಾರಸೂತ್ರವೆನಿಸಿಕೊಂಡ ಮಹತ್ವವನ್ನು ಮೊದಲು ಸೃಷ್ಟಿಸುವನು. ಈ ಮಹತ್ವವೇ ಅಹಂಕಾರ ಮೊದಲಾಗಿ ಪೃಥಿವಿಯವರೆಗಿನ ತತ್ವಪರಂಪ ರೆಗಳ ಸೃಷ್ಟಿಗೆ ಕಾರಣವೆನಿಸುವುದು. ಆದುದರಿಂದ ಈ ಸ್ಕೂಲವಾದ ಸಮ ಸಪ್ರಪಂಚವೂ ಆ ಮಹತ್ತತ್ವತದಲ್ಲಿಯೇ ನಿರ್ಮಿತವಾಗಿರುವುದು. ಅದ ರಿಂದೇರ್ಪಟ್ಟ ಶರೀರದಿಂದಲೇ ಪುರುಷನು ಸಂಸಾರಬದ್ಧನಾಗುವನು. ಓ ರಾ ಜೇಂದ್ರಾ: ಮೇಲೆ ಹೇಳಿದಂತೆ ಜೇಡರಹುಳುಗಳ ದೃಷ್ಟಾಂತದಿಂದ, ಭಗವಂ ತನು ಪ್ರಪಂಚವನ್ನು ತನ್ನಿಂದಲೇ ಸೃಷ್ಟಿಸಿ, ತಾನೂ ಅದರಲ್ಲಿಯೇ ಸೇರಿ ಕೆಲವುಕಾಲದವರೆಗೆ ವಿಹರಿಸುತ್ತಿದ್ದು, ಕೊನೆಗೆ ಅದನ್ನು ತನ್ನಲ್ಲಿಯೇ ಅಡಗಿ ಸಿಕೊಳ್ಳುವನೆಂಬ ತತ್ವವನ್ನು ಗ್ರಹಿಸಿದೆನು. ಮನುಷ್ಯನು ತನ್ನ ಮನಸ್ಸಿನಲ್ಲಿ ಸ್ನೇಹಭಾವದಿಂದಾಗಲಿ, ದ್ವೇ ಹಬುದ್ದಿಯಿಂದಾಗಲಿ, ಭಯದಿಂದಾಗಲಿ ಯಾವಯಾವುದನ್ನು ನಿಶ್ಚಲ ವಾಗಿ ಧ್ಯಾನಿಸುವನೋ ಆಯಾಸ್ವರೂಪವನ್ನೆ ಕಾಲಕ್ರಮದಿಂದ ತಾ ನೂ ಹೊಂದುವನೆಂಬುದನ್ನು ಕಣಜದ ಹುಳುಗಳ ದೃಷ್ಟಾಂತದಿಂದ ಕಂಡುಕೊಂಡನು. ಕಣಜದ ಹುಳುವು, ತನ್ನ ಆಹಾರಕ್ಕಾಗಿ ಬೇರೆ