ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೯೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೪೮4 ಶ್ರೀಮದ್ಭಾಗವತವು [ಅಧ್ಯಾ. ೯ ಕೀಟವನ್ನು ತಂದು ತನ್ನ ಗೂಡಿನಲ್ಲಿಟ್ಟಾಗ, ಆ ಕೀಟವು ಮರಣ ಭಯದಿಂದ ಆ ಕಣಜವನ್ನೇ ಚಿಂತಿಸುತ್ತ, ಕೊನೆಗೆ ತಾನೂ ಆ ಕಣಜದ ರೂ ಪವನ್ನೆ ಹೊಂದುವುದು. ಹೀಗೆಯೇ ಚೇತನನು, ಬ್ರಹ್ಮ ಧ್ಯಾನದಿಂದ ಬ್ರಹ್ಮ ಸಾರೂಪ್ಯವನ್ನು ಹೊಂದಬಹುದೆಂದು ಆ ಕೀಟದ ದೃಷ್ಟಾಂತದಿಂ ದ ಗ್ರಹಿಸಿದೆನು. ಓ ರಾಜೇಂದಾ! ಹೀಗೆ ನಾನು ಆಯಾಗುರುಗಳಿಂದ ಕಲಿತ ವಿಷಯಗಳನ್ನು ತಿಳಿಸಿದೆನಾ ? ಇನ್ನು ನನ್ನ ಸ್ವದೇಹದಿಂದಲೇ ನನಗೆ ತಿಕ್ಷಿತವಾದ ಬುದ್ಧಿಯನ್ನು ತಿಳಿಸುವೆನು ಕೇಳು. ಈ ದೇಹಕ್ಕೆ ಉತ್ಪತಿವಿ ನಾಶಗಳೆರಡೂ ಉಂಟು. ಈ ದೇಹವಿರುವವರೆಗೆ ಮೇಲೆಮೇಲೆ ದುಃಖಾ ಮಭವವೇ ಇದಕ್ಕೆ ಫಲವು ಇದನ್ನು ನೋಡಿ, ನನಗೆ ಈ ದೇಹದಲ್ಲಿ ವಿರಕ್ಕಿ ಯು ಹುಟ್ಟಿತು. ಹಾಗಿದ್ದರೂ ಈ ದೇಹಸಂಬಂಧದಿಂದಲೇ ನಾನು ತತ್ವ ಜನವನ್ನು ಪಡೆದವನಾದುದರಿಂದ, ನನ್ನ ವಿವೇಕಕ್ಕೆ ಈ ದೇಹವೇ ಮೂ ಲವಾಯಿತೆಂಬುದನ್ನೂ ಬಲ್ಲೆನು. ಹೀಗೆ ಈ ಮನುಷ್ಯ ದೇಹವು ನನಗೆ ಉಪ ಕಾರಿಯಾಗಿದ್ದ , ಕೊನೆಗೆ ಇದು ನಾಯಿಮರಿಗಳಿಗೆ ಆಹಾರಯೋಗ್ಯ ವೆಂಬ ನಿಶ್ಚಯದಿಂದ, ಇದರಲ್ಲಿ ಸ್ವಲ್ಪ ಮಾತ್ರವೂ ಅಭಿಮಾನವ ಡದಿರು ವೆನು. ಈ ದೇಹವು ಯಾವಾಗಲೂ ದುಖಹೇತುವೆಂಬುದು ಹೇಗೆಂದು ಕೇಳುವೆಯಾ ! ಮನುಷ್ಯನು ತನ್ನ ದೇಹಕ್ಕೆ ಪ್ರಿಯವನ್ನುಂಟುಮಾಡಬೇ ಕಂಬ ಇಲೆ ಯಿಂದಲೇ, ಹೆಂಡ, ಮಕ್ರರು, ಬಂಧುಗಳು, ಮಿತ್ರರು ಮೊದಲಾದ ಪರಿವಾರಗಳೆಲ್ಲವನ್ನೂ ಸಂಪಾದಿಸಿಸಿಕೊಂಡು, ಅವರನ್ನೆಲ್ಲಾ ಕಷ್ಟಪಟ್ಟು ಪೋಷಿಸುವನು. ಎಷ್ಟೇ ಶ್ರಮಪಟ್ಟು ಹಣವನ್ನೂ ಸಂಗ್ರಹಿ ಸಿಡುವನು. ಸಾಯುವ ಕಾಲಕ ಇವೆಲವನೂ ಬಿಡಲಾರದೆ ಮಹಾಸಂಕಟ ದಿಂದ ಸಾಯುವನು. ಸತ್ತ ಮೇಲೆಯಾದರೂ ಸುಖವುಂಟೆ ? ಅದೂ ಇಲ್ಲ. ಹೇಗೆಂದರೆ, ಮರಗಿಡಗಳು ಕಾಲಕ್ರಮದಿಂದ ಒಣಗಿಹೋದರೂ, ತಮ್ಮಂತೆ ಬೇರೆ ಗಿಡಗಳನ್ನು ಹುಟ್ಟಿಸುವುದಕ್ಕಾಗಿ, ನೆಲದಮೇಲೆ ಬೀಜಗಳನ್ನು ಚೆಲ್ಲಿಡು ವತ, ಮನುಷ್ಯನೂಕೂಡ ಮುಂದೆ ದೇಹಾಂತರಪ್ರಾಪ್ತಿಗೆ ಕಾರಣವಾದ ಕರಬೀಜವನ್ನು ಹುಟ್ಟಿಸಿಯೇ, ಆಮೇಲೆ ಪೂರೈದೇಹವನ್ನು ನೀಗುವನು.