ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

o ಶ್ರೀಮದ್ಭಾಗವತನ [ಅಧ್ಯಾ. ೧೦, ತಕ್ಕವನಾಗಿಯೂ, ಜಿತೇಂದ್ರಿಯನಾಗಿಯೂ ಇರುವ ಆಚಾರನನ್ನಾಶ್ರ ಯಿಸಿ, ಆ ಗುರುವಿನಲ್ಲಿ ಕಾಪಟ್ಯವನ್ನಾಗಲಿ, ಮಾತ್ಸಲ್ಯವನ್ನಾಗಲಿ ತೋರಿ ಸದೆ, ಆತನನ್ನು ಶ್ರದ್ದೆಯಿಂದಲೂ ಉತ್ಸಾಹದಿಂದಲೂ ಸೇವಿಸಬೇಕು. ಅಹಂಕಾರಮಮಕಾರಗಳನ್ನು ನೀಗಿ, ದೊಡ್ಡವರಲ್ಲಿ ಮನಃಪೂರಕವಾದ ಭಕ್ತಿಯನ್ನು ತೋರಿಸುತ್ತ, ಯುಯುಕ್ತವಿಮರ್ಶನಪರನಾಗಿ, ಅಸೂ ಯೆಯಿಲ್ಲದೆ, ಅಸಂಬದ್ಧವಾದ ಹೆಚ್ಚು ಮಾತುಗಳನ್ನಾಡದೆ, ಎಚ್ಚರಿಕೆಯಿಂ ಏರಬೇಕು. ಹೆಂಡಿರು, ಮಕ್ಕಳು, ಮನೆ, ಮಠ, ಬಂಧುಗಳು, ಹಣ, ಕಾಸು, ಮುಂತಾದುವುಗಳಲ್ಲಿ ತನ್ನದೆಂಬ ಮೋಹವನ್ನು ಬಿಟ್ಟು ಉದಾಸೀನಭಾವ ಹಿಂದಿರಬೇಕು. ತನ್ನ ದೆಂದು ಭಾವಿಸಿಕೊಂಡಿದ್ದ ವಸ್ತುವೇ ತನ್ನ ಪತ್ರಾದಿ ಗಳು ಅನುಭವಿಸುವಾಗ ಅವರದಾಗಿರುವಂತೆ, ಹೆಂಡಿರು, ಮಕ್ಕಳು ಮೊದ ತಾದವರು ತನ್ನ ವರಂತೆ ತೋರಿದರೂ, ಅವರನ್ನು ತನ್ನ ವರಲ್ಲದಂತೆಯೇ ಭಾವಿಸಬೇಕು. ಜೀವಾತ್ಮವೆಂಬುದು, ಬುದ್ಧಿ, ಇಂದ್ರಿಯಗಳು, ಮನಸ್ಸು, ಪ್ರಾಣಗಳು, ಇವುಗಳ ಸಂಘಇತರೂಪವಾದ ಸೂಕ್ಷ್ಮದೇಹಕ್ಕಿಂತಲೂ, ಅವುಗಳ ಪರಿಣಾಮರೂಪವಾದ ಸ್ಫೂಲದೇಹಕ್ಕಿಂತಲೂ ಬೇರೆಯಾದುದು. ಆತ್ಮವು ಎಲ್ಲವನ್ನೂ ನೋಡಬಲ್ಲುದು. ದೇಹವಾದರೋ ದೃಷ್ಟಿ ವಿಷಯ ವಾಗತಕ್ಕುದೇ ಹೊರತು ನೋಡಲಾರದು. ಆತ್ಮವು ಸ್ವಯಂಪ್ರಕಾಶ ವುಳ್ಳದು. ದೇಹವು ಹಾಗಲ್ಲ. ದಹನಶಕ್ತಿಯೂ, ಪ್ರಕಾಶಗುಣವೂ ಉಳ್ಳ ಬೆಂಕಿಯು, ಆ ಶಕ್ತಿಯಿಲ್ಲದ ಕಟ್ಟಿಗೆಯಲ್ಲಿ ಅಡಗಿದ್ದರೂ, ಆ ಕಟ್ಟಿಗೆಗಿಂ ತ ತಾನು ಬೇರೆನಿಸಿಕೊಳ್ಳುವಂತೆ, ಆತ್ಮವೂ ದೇಹಕ್ಕಿಂತಲೂ ಭಿನ್ನ ರಾಗಿರುವುದು. ಆದರೆ ದೇಹಕ್ಕಿಂತಲೂ ಆತ್ಮವು ಬೇರೆಯಾಗಿದ್ದ ಪಕ್ಷ ದಲ್ಲಿ, ದೇಹಮೂಲಕಗಳಾದ ಹುಟ್ಟು, ಸಾವು, ಕೃಶ, ಸ್ಕೂಲತೆ, ಮುಂತಾ ದ ವ್ಯವಹಾರಗಳು ಆತ್ಮಕ್ಕುಂಟಾದುದು ಹೇಗೆ? ” ಎಂದು ಕೇಳುವೆಯಾ ? ಕಟ್ಟಿಗೆಯಲ್ಲಿರುವ ಬೆಂಕಿಯು, ಆ ಕಟ್ಟಿಗೆಗೆ ಸಂಭವಿಸುವ ಉತ್ಪತಿ,ವಿನಾಶ, ವಕ್ರತೆ, ಮುಂತಾದ ವಿಕಾರಗಳನ್ನು ತನ್ನಲ್ಲಿ ತೋರಿಸುವಂತೆ, ದೇಹಕ್ಕಿಂ ತಲೂ ಭಿನ್ನನಾದ ಆತ್ಮನೂಕೂಡ, ಆ ದೇಹದಲ್ಲಿದ್ದಾಗ, ಅನಾದಿಯಾಗಿ ಅನುಸರಿಸಿಬಂದ ಅಜ್ಞಾದಿಂದ, ಆ ದೇಹದ ಗುಣಗಳನ್ನೇ ತನ್ನಲ್ಲಿ ಅನುಸಂ