ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಥ್, ೧೦.] ಏಕಾದಶಕ್ಕಂಧನ. wo ಧಿಸುವನೇಹೊರತು, ವಾಸ್ತವದಲ್ಲಿ ಈ ಗುಣಭೇದಗಳು ಅಮ್ಮನಿಗೆ ಸಂಬಂಧಿಸಿದುವಲ್ಲ ಜೀವನು ಪ್ರವೇಶಿಸತಕ್ಕ ದೇಹವೆಂಬುದು, ಪ್ರಕೃತಿ ಹರಿ ಣಾಮರೂಪಗಳಾದ ಪೃಥಿವಿ ಮೊದಲಾದುವುಗಳಿಂದ ನಿರ್ಮಿತವಾಗಿರುವ ದು, ಕೇವಲಜ್ಞಾನಸ್ವರೂಪನಾದ ದೇವನು, ತನಗೆ ಈ ದೇಹಸಂಬಂಧ ವಿದ್ದಾಗ ಆ ದೇಹಗುಣಗಳನ್ನೇ ತನ್ನಲ್ಲಿ ಆರೋಪಿಸಿಕೊಳ್ಳುವನು. ಮತ್ತು ಆದೇಹವೇ ಅವನಿಗೆ ಸಂಸಾರಬಂಧಕ್ಕೂ ಮೂಲವಾಗುವುದೆಂದು ತಿಳಿ ! ಆ ಸಂಸಾರಬಂಧವನ್ನು ಬಿಡಿಸುವುದಕ್ಕೆ ಪರಮಾಪಾಸನವು ಹೊರತು ಬೇರೆ ಉಪಾಯವಿಲ್ಲ. ಆದುದರಿಂದ ಸಂಸಾರಬಂಧದಿಂದ ಬಿಡುಗಡೆ ಹೊಂದಬೇಕೆಂದಿರುವವನು, ಅಚಾತ್ಯನಮಲಕವಾಗಿ ವೇದಾಂತ ವಿಚಾರವನ್ನು ತಿಳಿದು, ಅದರಿಂದ ತನ್ನ ಆತ್ಮನ, ಮತ್ತು ಆ ಆತ್ಮನಿಗೂ ಅಂತರಾತ್ಮನಾದ ಪರಮಪುರುಷನ ಸ್ವರೂಪವನ್ನು ತಿಳಿದು,ದೇಹದಲ್ಲಿಯೂ, ದೇಹಾನುಬಂಧಿಗಳಾದ ಹೆಂಡಿರುಮಕ್ಕಳಲ್ಲಿಯೂ ಮಮತೆಯನ: ಕ್ರಮ ಕ್ರಮವಾಗಿ ತಗ್ಗಿ ಸುತ್ತಬರಬೇಕು. ಈ ನಡುವೆ ಹುಲ್ಲುಕಡ್ಡಿ ಯನ್ನಿಟ್ಟು,ಚಕ್ಕು ಮುಕ್ಕಿಕಲ್ಲು (ಆರಣಿಶಿಲೆ ) ಗಳನ್ನು ಹೊಡೆಯುವುದರಿಂದಲ್ಲವೇ ಬೆಂಕಿಯು ಹುಟ್ಟುವುದು ? ವೇದಾಂತವಿದ್ಯೆಯನ್ನು ಸಂಪಾದಿಸಬೇಕಾದುದೂ ಹೀಗೆ ಯೇ ! ಆಚಾರನೇ ಮೇಲಿನ ಕಲ್ಲು ! ಶಿಷ್ಯನೇ ಕಳಗಿನ ಕಲ್ಲು ! ಇವ ರಿಬ್ಬರಲ್ಲಿ ನಡೆಯುವ ವೇದಾಂತಾರ್ಥವಿಚಾರವೇ ಆ ಅರಣಿಗಳನಡುವ ಇಟ್ಟ ಕಾಹವು. ಆ ವಿಚಾರದಿಂದ ಪಡೆದ ಬ್ರಹ್ಮ ಜ್ಞಾನವನ್ನೇ ಆ ಅರಳ ಶಿಲೆಗಳಿಂದ ಹುಟ್ಟುವ ಪರಿಶುದ್ಧವಾದ ಅಗ್ರಿ ಯಂತೆ ತಿಳಿಯಬೇಕು. ಹೀಗೆ ಸಂಪಾದಿಸಿದ ಜ್ಞಾನವೇ ಮಾಯಾಗುಣಜನ್ಯವಾದ ಸಂಸಾರ ವನ್ನು ನೀಗಿಸತಕ್ಕುದೆಂದು ತಿಳಿ! ಮತ್ತು ಅಗ್ನಿ ಯು, ತನಗೆ ಸನ್ನಿಹಿತವಾದು ದನ್ನೆಲ್ಲಾ ದಹಿಸುವಂತೆ, ಹಿಂದೆ ಹೇಳಿದಂತೆ 'ಸಂಪಾದಿಸಿದ ವಿದ್ಯೆಯು, ತನಗೆ ಸಂಸಾರವನ್ನು ಕಟ್ಟಿಡುವುದಕ್ಕೆ ಕಾರಣವೆನಿಸಿಕೊಂಡ ಮಾಯಾ

  • ಇಲ್ಲಿ ಆಚಾರ: ಈಶ್ವರೂಪಂ. ಅಂತೇವಾಶ್ಯುತ್ತರರೂಪಂ, ವಿದ್ಯಾ ಸಂಧಿ: ಪ್ರಸನn••ಸಂಧಿ ನಂ?' ಎಂಖ ಶುರಕ್ಕೆ ಅನುಗತವಾಗಿ ಹೇಳಿರುವಂತೆ Jಯಬೇಕು.