ಪುಟ:ಶ್ರೀಮದ್ಭಾಗವತವು (ಏಕಾದಸ ದ್ವಾದಶ ಸ್ಕಂದಗಳು) .djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೨ ಶ್ರೀಮದ್ಭಾಗವತದ [ಅಧ್ಯಾ. ೧೦. ಗುಣಗಳನ್ನೂ,ಆ ಮಾಯಾಗುಣಗಳ ಮೂಲಕವಾದ ಕಠ್ಯಗಳನ್ನೂ ದಹಿಸಿ, “ಕೊನೆಗೆ ಕಟ್ಟಿಗೆಯಿಲ್ಲದಿದ್ದಾಗ ಬೆಂಕಿಯು ತನಗೆ ತಾನೇ ನಂದಿಹೋಗುವಂ ತೆ,ಮುಕ್ಕುಪಾಯಭೂತವಾದ ಆ ಬುದ್ದಿಯೂ ತಾನೇ ಶಾಂತವಾಗಿ ಹೋ ಗುವುದು. ಉದ್ದವಾ! ಪ್ರವೃತಿಕರವನ್ನು ತ್ಯಜಿಸಬೇಕೆಂಬ ವಿಚಾರದಲ್ಲಿ ನಿನಗೆ ಒಂದು ಶಂಕೆಯುಂಟಾಗಬಹುದು. ಏನೆಂದರೆ, ಕರಗಳನ್ನು ನಡೆಸು ಇದಕ್ಕೂ, ಆ ಕರ ಫಲಗಳನ್ನನುಭವಿಸುವುದಕ್ಕೂ ಆಶ್ರಯಗಳಾದ ದೇವ ಮನುಷ್ಟಾದ್ಯಾಕಾರಗಳೂ, ಅವುಗಳಿಗೆ ಬೇಕಾದ ದೇಶಕಾಲಗಳೂ, ಕರ ಸಾಧನೋಪಾಯಗಳನ್ನು ಉಪದೇಶಿಸತಕ್ಕ ವೇದಗಳೂ, ಕರ ಫಲಾನುಭವ ವನ್ನು ಮಾಡತಕ್ಕ ಜೀವಾತ್ಮನೂ, ಅವನು ಅನುಭವಿಸತಕ್ಕ ಶಬ್ದಾದಿವಿಷ ಯಗಳೂ, ಇವೆಲ್ಲವೂ ನಾನಾವಿಧಗಳಾಗಿದ್ದರೂ ಅನಿತ್ಯಗಳೆಂದು ಹೇಳು ವುದಕ್ಕಿಲ್ಲ ! ಜೀವಾತ್ಮಗಳಲ್ಲಿ ನಾನಾವಿದ್ದರೂ ಅವು ನಿತ್ಯವೆನಿಸಿರುವಂತೆ ಶವೂಸಿತ್ಯಗಳೆ ! ಮತ್ತು ಉತ್ಪತ್ತಿಯಿದ್ದಾಗಲೇ ವಿನಾಶವು, ದೇಶಕಾ ಲಾರಿಗಳಿಗೆ ಉತ್ಪತ್ತಿಯಿಲ್ಲದುದರಿಂದ ವಿನಾಶವೂ ಇಲ್ಲ. ಆದುದರಿಂದ ಅವು ಸತ್ಯಗಳೇ ಆಗಿರುವುವು. ಇದಲ್ಲದೆ ಆಯಾದೇವಾದ್ಯಾಕಾರಗಳೂ, ಶಬ್ಬಾ ದಿವಿಷಯಗಳೂ ಆಗಾಗ್ಗೆ ಅನಿತ್ಯವೆನಿಸಿದ್ದರೂ, ಅವುಗಳನ್ನು ಅನುಭವಿಸತಕ್ಕ ದೇವನೂ, ಆವನಿಗುಂಟಾಗುವ ದೇಹಪರಂಪರೆಗಳೂ, ವಿಷಯ ಪರಂಪರೆಗೆ ರೂ ನಿತ್ಯವಾಗಿಯೇ ಇರುವುವು. ಕರ ಸಾಧಸಿಗೆ ಉಪಾಯಗಳನ್ನು ನಿರೂಪಿಸತಕ್ಕೆ ಆಗಮಗಳೂ ನಿತ್ಯಗಳೇ ! ಜೀವಗಳು ಸತ್ಯಾದಿ ಗುಣಗಳಿಗೆ ತಕ್ಕಂತೆ ಆಕಾರಭೇದಗಳಿಂದ ಜನಿಸುವುವು. ಆ ಗುಣಗಳಿಗೆ ತಕ್ಕಂತೆ ಅವುಗಳ ಬುದ್ದಿಯೂ, ಬೇರೆಬೇರೆಯಾಗಿ,ಆಯಾ ಸಾಧನಗಳನ್ನೂ, ಅದಕ್ಕೆ ತಕ್ಕ ಫಲಗಳನ್ನೂ, ಆಯಾದೇವತೆಗಳನ್ನೂ ಅವಲಂಬಿಸುವುದರಿಂ ದ ನಾನಾವಿಧವಾಗಿರುವುವು. ಹೀಗಿರುವಾಗ ಪ್ರವೃತ್ತಿಕರಗಳನ್ನು ಬಿಡ ಬೇಕೆಂಬುದೇಕೆ? ಕರ ಸಾಧನೆಯನ್ನೂ , ಅದಕ್ಕೆ ತಕ್ಕ ಫಲಾನುಭವವನ್ನೂ ನನಗೆ ಸಹಜವಾಗಿ ಹೊಂದಿದ ದೇವನು, ತನಗೆ ದುಃಖಕರವೆಂದು ತೋರಿದ

  • ಇದರಿಂದ ಆತ್ಮನಿಗೆ ಮುಕ್ತಿದಶೆಯಲ್ಲಿ, ಆ ಮುಕ್ತಿಗೆ ಉರಾಯಭರವಾಡ ಯಡ್ಡಿಯೂ ಬ೦ತವಾಗುವುದೆಂದು ಗ್ರಹವು,