ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪೮ ಶ್ರೀಮದ್ರಾಮಾಯಣವು. [ಸರ್ಗ ೧೦, ಗಳಾದ ಸಾಮಗ್ರಿಗಳಿಂದ ಈತನ ಮನಸ್ಸಿನಲ್ಲಿ ಕಾಮವಿಕಾರವು ಅಂಕುರಿಸಿ ತು, ಅಲ್ಲಿಗೆ ಬಂದು ಕೈಕೇಯಿಯನ್ನು ಕಾಣದೆ ಹೋಗಲು, ಆ ಕಾಮಾತು ರವು ಮತ್ತಷ್ಟು ಹೆಚ್ಚಿತು. ಇದರಮೇಲೆ ಅದು ರತಿಕೇಳಿಗೆ ಉಚಿತಕಾಲವೂ ಆಗಿದ್ದುದರಿಂದ, ವಿಶೇಷಕಾಮಪೀಡಿತನಾಗಿ, ಹಾಸಿಗೆಯಮೇಲೆ ತನ್ನ ಪ್ರಿಯೆ ಯಿಲ್ಲದುದನ್ನು ಕಂಡು, ಆಶಾಭಂಗದಿಂದ ದುಃಖಿತನಾಗಿದ್ದನು. ಇದುವರೆಗೆ ಹಿಂದೆ ಯಾವಾಗಲೂ ಕೈಕೇಯಿಯು ಅಷ್ಟು ಹೊತ್ತಿನಲ್ಲಿ ಹಾಸಿಗೆಯನ್ನು ಬಿಟ್ಟು ಹೋದವಳಲ್ಲ! ದಶರಥನೂಕೂಡ ಹಿಂದೆ ಯಾವಾಗಲೂ ಹೀಗೆ ಶೂನ್ಯ ವಾದ ಅಂತಃಪುರವನ್ನು ನೋಡಿದವನಲ್ಲ. ಅದೆಲ್ಲವೂ ಈಗ ವಿಪರೀತವಾಗಿದ್ದು ದರಿಂದ, ಅವನ ಮನಸ್ಸಿನಲ್ಲಿ ವಿಶೇಷವಾದ ಕಳವಳವು ಹುಟ್ಟಿತು. ದಶರಥನು ಇದುವರೆಗೆ ಕೈಕೇಯಿಯಲ್ಲಿ,ಸ್ವಾರಪರತೆ, ಕೋಪ, ಅವಿವೇಕ, ಮುಂತಾದ ದುರ್ಗುಣಗಳೊಂದನ್ನೂ ಕಂಡವನಲ್ಲ. ಈಗ ಅವಳಿಗೆ ಹೀಗೆ ವಿಪರೀತಬು ಡ್ಡಿಯು ಹುಟ್ಟಿರುವುದನ್ನು ಹೇಗೆ ಬಲ್ಲನು ? ಅವನಿಗೆ ಕೈಕೇಯಿಯು ಕೋಪ ಗೊಂಡು ಅಂತಃಪುರವನ್ನು ಬಿಟ್ಟು ಹೋಗಿರುವಳೆಂಬ ಶಂಕೆಯು ಸ್ವಲ್ಪವೂ ಇರಲಿಲ್ಲ. ಆದುದರಿಂದ ಎಂದಿನಂತೆ ಅವನು ಅಲ್ಲಿದ್ದ ಪ್ರತಿಹಾರಿಗಳನ್ನು ನೋ ಡಿ ಕೈಕೇಯಿಯೆಲ್ಲಿ?” ಎಂದು ವಿಚಾರಿಸಿದನು. ಅಲ್ಲಿದ್ದ ಪ್ರತಿಹಾರಿಯು ಈ ಮಾತಿಗೆ ಒಡನೆಯೇ ಪ್ರತ್ಯುತ್ತರವನ್ನು ಕೊಡುವುದಕ್ಕೆ ಹಿಂಜರಿದು, ಭಯ ದಿಂದ ಗಡಗಡನೆ ನಡುಗುತ್ತ,ಕೈಮುಗಿದು,ಕೊನೆಗೆ ರಾಜನನ್ನು ಕುರಿತು, (ವ ಲೈ ಮಹಾರಾಜನ ! ದೇವಿಯು ಯಾವ ಕಾರಣದಿಂದಲೋ ಬಹಳ ಕೋಪ ಗೊಂಡು ಕೋಪಗೃಹದಲ್ಲಿ ಹೋಗಿ ಸೇರಿರುವಳು ” ಎಂದು ವಿನಯದಿಂದ ವಿಜ್ಞಾಪಿಸಿದಳು. ಇದನ್ನು ಕೇಳಿದೊಡನೆ ರಾಜನು ಬೆರಬಿದ್ದು 11 ಹಾ ! ಕೋಪಕ್ಕೆ ಕಾರಣವೇನು?” ಎಂದು ಕೇಳುತ್ತ, ಹಾಗೆಯೇ ದಿಗ್ತಾ ತನಾಗಿದ್ದನು. ಇಂದ್ರಿಯಗಳೆಲ್ಲವೂ ಪರವಶವಾಗಲು, ಒಡನೆಯೇ ಅವಳಿದ ಸ್ಥಳಕ್ಕೆ ಬಂದನು. ಅಲ್ಲಿ ರಾಜಮಹಿಷಿಯಾದ ಕೈಕೇಯಿಯು, ತನಗೆ ಯೋಗ್ಯ ವಲ್ಲದ ಬರೀ ನೆಲದಮೇಲೆ ಬಿದ್ದು ಮಲಗಿದ್ದಳು. ಅವಳ ದುರವಸ್ಥೆ ಯನ್ನು ನೋಡಿದಾಗ ರಾಜನಿಗೆ ಬಹಳ ಮರುಕವುಂಟಾಯಿತು. ಆತನ ಮುಖವೆಲ್ಲವೂ ದುಖಾಗ್ನಿಯಿಂದ ಬೆಂದುಹೋದಂತೆ ವಿವರ್ಣವಾಯಿತು.