ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧೦.] ಅಯೋಧ್ಯಾಕಾಂಡವು. ೩೫ಕ್ಕೆ ನಾನು ಪ್ರವರ್ತಿಸತಕ್ಕವನಲ್ಲ. ಜೀವವನ್ನಾದರೂ ಒತ್ತೆಯಿಟ್ಟು, ನಿನ್ನ ಇಷ್ಟವನ್ನು ನಡೆಸಿಕೊಡುವೆನು. ಪ್ರಾಣಕ್ಕಿಂತಲೂ ನೀನು ನನಗೆ ಪ್ರಿಯಳ ಲ್ಲವೆ? ನಿನ್ನ ಮನಸ್ಸಿನಲ್ಲಿರುವುದನ್ನು ಹೇಳು! ನೀನು ಪ್ರೇಮಪಾಶದಿಂದ ನನ್ನ ನ್ನು ಬಲವಾಗಿ ಕಟ್ಟಿಹಾಕಿರುವೆ ಈ ಶಕ್ತಿಯು ನಿನ್ನಲ್ಲಿರುವುದನ್ನು ನೀನು ಚೆನ್ನಾಗಿ ತಿಳಿದೂ, ಹೀಗೆ ನನ್ನಲ್ಲಿ ಸಂದೇಹಪಡುವುದುಂಟೆ? ಇದು ಸ ರಿಯಲ್ಲ! ನಿನ್ನ ಇಷ್ಯವನ್ನು ಹೇಳು! ನಡೆಸಿ ಕೊಡುವೆನು. ಇದರಲ್ಲಿ ಸಂದೇಹ ವಿಲ್ಲ. ನನ್ನ ಪುಣ್ಯದಮೇಲೆ ಆಣೆಯಿಟ್ಟು ನಿನಗೆ ಶಪಥಮಾಡಿ ಕೊಡುವೆನು. ಸೂರನ ರಥಚಕ್ರವು ಎಷ್ಟು ದೂರದವರೆಗೆ ಹೋಗಿ ತಿರುಗುವುದೋ, ಅಲ್ಲಿನ ವರೆಗಿರುವ ಸಮಸ್ತಭೂಮಂಡಲವೂ ನನ್ನ ಅಧೀನವಾಗಿರುವುದು. ಅಲ್ಲಿನವ ರೆಗೆ ನನ್ನ ಆಜ್ಞಾಚಕ್ರವು ತಡೆಯಿಲ್ಲದೆ ಸುತ್ತುತ್ತಿರುವುದು ! ಆದುದರಿಂದ ನನ್ನ ಆಧೀನದಲ್ಲಿ, ಪೂಲ್ವದೇಶಗಳೂ, ಸಿಂಧು ಸೌವೀರ ಸೌರಾಷ್ಟ್ರದಕ್ಷಿಣಾ ಪಥಗಳಂಬ ಅನೇಕದೇಶಗಳೂ, ಅಂಗ ವಂಗ ಕಳಿಂಗ ಮಗಧ ಮತ್ತ್ವ ಕಾ ಈ ಕೋಸಲಗಳೆಂಬ ದೇಶಗಳೂ ಅನೇಕವಾಗಿರುವುವು. ಇವೆಲ್ಲವೂ ಧನ ಧಾನ್ಯಪಶುಸಮೃದ್ಯಗಳಾಗಿರುವುವು. ಇವುಗಳಲ್ಲಿ ನಿನ್ನ ಮನಸ್ಸಿಗೆ ತೋರಿದು ದನ್ನು ಕೇಳು ! ವ್ಯಕ್ತವಾಗಿ ಆಯಾಸಪಡುವುದೇಕೆ ? ಭಯಪಡಬೇಡ ! ಎಲೆ ಮಂಗಳಾಂಗಿ ! ಏಳು ಏಳು ! ಈಗ ನಿನಗೆ ಉಂಟಾಗಿರುವ ಭಯಕ್ಕೆ ಕಾರಣ ವೇನು ? ಸೂರನು ಮಂಜನ್ನೊಡಿಸುವಂತೆ, ಈಗಲೇ ಅದನ್ನು ನಿರೂಲ ಮಾಡುವೆನು.” ಎಂದನು. ಹೀಗೆ ಅನುನಯದಿಂದ ಸಮಾಧಾನಪಡಿಸುತ್ತಿ ರುವ ರಾಜನ ಮಾತನ್ನು ಕೇಳಿ, ಆ ಕೈಕೇಯಿಯು, ಮೊದಲೇ ತನ್ನ ದುರ ವಸ್ಥೆಯನ್ನು ನೋಡಿ ಸಂಕಟಪಡುತ್ತಿರುವ ಆತನನ್ನು ಮತ್ತಷ್ಟು ಸಂಕಟಪ ಡಿಸುವುದಕ್ಕಾಗಿ, ಅತಿಕ್ರೂರವಾದ ತನ್ನ ವಾಗ್ದಾಣಗಳನ್ನು ಪ್ರಯೋಗಿ ಸುವುದಕ್ಕೆ ಉಪಕ್ರಮಿಸಿದಳು. ಇಲ್ಲಿಗೆ ಹತ್ತನೆಯಸರ್ಗವು,