ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨ ಶ್ರೀಮದ್ರಾಮಾಯಣವು (ಸರ್ಗ, ೧೧. ಕೈಕೇಯಿಯು ಭರತನಿಗೆ ರಾಜ್ಯವನ್ನು ಕೊಟ್ಟು) 3 ರಾಮನನ್ನು ಕಾಡಿಗೆ ಕಳುಹಿಸುವಂತೆ ರಾಜನನ್ನು ನಿರ್ಬಂಧಿಸಿದುದು. ಹೀಗೆ ದಶರಥನು ಮನ್ಮಥಬಾಣಗಳಿಗೆ ವಶನಾಗಿ ಮೈತಿಳಿ ಯದ ಕಾಮಾತುರದಿಂದ, ತಾನು ಎಳೆದ ದಾರಿಗೆ ಬರುವಂತಿರುದನ್ನು ತಿ ಳಿದು, ಕೈಕೇಯಿಯು, ರಾಜನನ್ನು ಕುರಿತು ಕ್ರೂರವಾಕ್ಯದಿಂದ ( ಅಯ್ಯೋ ! ಈ ಅನನಯವು ಸಾಕು ! ಈಗ 'ನನಗೆ ಯಾವ ರೋಗವೂ ಇಲ್ಲ! ನಾನು ಧನವನ್ನೂ ಅಪೇಕ್ಷಿಸುವವಳಲ್ಲ ! ನನ್ನನ್ನು ಯಾರೂ ಅವಮಾನಪಡಿಸಲೂ ಇಲ್ಲ ! ನನ್ನ ಕೋರಿಕೆಯೇ ಬೇರೆ ! ಅದು ಈಗಲೇ ಆಗಬೇಕಾಗಿರು ವುದು, ಈಗ ನೀನು ಅದನ್ನು ಮಾಡಿಕೊಡುವುದಾಗಿ ಬರೀಮಾತಿನಿಂದ ಹೇಳಿ Wರೆ ಸಾಲದು, ನಡೆಸಿಕೊಡುವುದಾದರೆ ಈಗಲೇ ಆಣೆಯಿಟ್ಟು ಸತ್ಯವನ್ನು ಬಿ ಮಾಡಬೇಕು. ನೀನು ಮೊದಲು ಸತ್ಯವನ್ನು ಮಾಡಿಕೊಟ್ಟರೆ ಆಮೇಲೆ ತಿಳಿಸುವೆನು.” ಎಂದಳು. ಆಗ ದಶರಥನಿಗೆ ಮನಸ್ಸಿನಲ್ಲಿ ಕೊಂಚಮಟ್ಟಿ, ಗೆ ಆಪ್ಯಾಯನವುಂಟಾಗಲು, ಆಹಾ! ನನಗೆ ಅವಳಲ್ಲಿರುವ ಪ್ರೇಮಾತಿಶಯವ ನ್ನು ಚೆನ್ನಾಗಿ ತಿಳಿದೂ ನಂಬದೆ, ಇವಳು ಸತ್ಯವನ್ನು ಮಾಡಿಕೊಡಬೇಕೆಂದು ಕೇಳುವಳು.” ಎಂದು ಮಂದಹಾಸದಿಂದ ನಕ್ಕು, ತನ್ನ ಕೈಯಿಂದ ಅವಳ ತಲೆಯ ತುರುಬನ್ನು ಹಿಡಿದು, ತನ್ನ ಕಡೆಗೆ ತಿರುಗಿಸಿಕೊಂಡು ಎಲೆ ಗತ್ವಶೀಲೆ ! ನಿನಗಿಂತಲೂ ನನಗೆ ಪ್ರಿಯತಮರಾದವರು ಬೇರೊಬ್ಬರೂ ಇಲ್ಲ. ಇದು ನಿನಗೆ ತಿಳಿಯದ ವಿಷಯವಲ್ಲ. ಹಾಗೆಯೇ ಪುರುಷರಲ್ಲಿ ರಾಮನಿಗಿಂತಲೂ ನನ ಗೆ ಪ್ರಿಯರಾದವರು ಮತ್ತೊಬ್ಬರೂಇಲ್ಲವೆಂಬುದೂ ನಿನಗೆ ಚೆನ್ನಾಗಿ ತಿಳಿದೇ ಇರುವುದು, ನಿನ್ನ ಸೌಭಾಗ್ಯದ ಮದದಿಂದ ನೀನು ಇದನ್ನು ಮರೆತಿದ್ದರೂ ಇರಬಹುದು. ಮುಖ್ಯವಾಗಿ ಯಾರಿಂದಲೂ ಜಯಿಸುವುದಕ್ಕೆ ಅಸಾಧ್ಯನಾಗಿ, ಲೋಕದಲ್ಲಿ ಎಣೆಯಿಲ್ಲದವನಾಗಿ, ಪ್ರಾಣಕ್ಕಿಂತಲೂ ಪೂಜ್ಯನಾಗಿ, ಮಹಾ ತನೆನಿಸಿಕೊಂಡಿರುವ ನನ್ನ ಮುದ್ದು ಮಗನಾದ ರಾಮನಮೇಲೆಯೇ ಅಣೆಯ ಟ್ಟು ನಿನಗೆ ಪ್ರತಿಜ್ಞೆ ಮಾಡಿಕೊಡುವೆನು. ನಿನ್ನ ಮನಸ್ಸಿನ ಕೋರಿಕೆಯನ್ನು ತಿ ಳಿಸು, ಯಾವನನ್ನು ನಿಮಿಷಮಾತ್ರದವರೆಗೆ ಕಾಣದಿದ್ದರೂ ನನ್ನ ಪ್ರಾಣವು ನಿಲ್ಲಲಾರದೇ, ಆರಾಮನ ಮೇಲೆಯೇ ಆಣೆಯಿಟ್ಟು ಹೇಳುವೆನು!ನಿನ್ನ ಕೋರಿಕೆ