ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ಶ್ರೀಮದ್ರಾಮಾಯಣವು : [ಸರ್ಗ ೧೧, ರೆಗೆ ನಿನ್ನ ಮಗನಮೇಲೆಯೂ, ನಿನ್ನ ಪುಣ್ಯದಮೇಲೆಯೂ, ನಿನ್ನ ಪ್ರಾಣದ ಮೇಲೆಯೂ,ಕ್ರಮವಾಗಿ ಆಣೆಯಿಟ್ಟು, ನನ್ನ ಮಾತನ್ನು ನಡೆಸಿಕೊಡುವು ದಾಗಿ ಒಪ್ಪಿರುವೆ ! ಅಗ್ರಿ ಮೊದಲಾದ ಮೂವತ್ತುಮೂರುಕೋಟಿ ದೇವತೆಗಳೂ ಅದನ್ನು ಕೇಳಿರಲಿ ! ಚಂದ್ರಸೂರರೂ, ಆಕಾಶವೂ, ಇತರ ಗ್ರಹಗಳೂ, ಆಹೋರಾತ್ರಿಗಳೂ, ಹತ್ತು ದಿಕ್ಕುಗಳೂ, ಸ್ವರ ಲೋಕವೂ, ಭೂಮಿಯೂ, ಗಂಧಶ್ವರೂ, ರಾಕ್ಷಸರೂ, ರಾತ್ರಿಯಲ್ಲಿ ಸಂಚಾರಮಾಡತ ಈ ಸಮಭೂತಗಳೂ, ಈ ಮನೆಯಲ್ಲಿರುವ ಗೃಹದೇವತೆಗಳೂ, ಇನ್ನೂ ಉಳಿದ ಇತರಭೂತಗಳೆಲ್ಲವೂ ಈಗ ನೀನು ನನಗೆ ಮಾಡಿಕೊಟ್ಟಿರುವ ಪ್ರತಿ ಜ್ಞೆಗೆ ಸಾಕ್ಷಿಗಳಾಗಿರಲಿ : ಎಲೈ ದೇವತೆಗಳಿರಾ : ನೀವೆಲ್ಲರೂ ಕೇಳಿರಿ ! ಸತ್ಯ ಸಂಥನಾಗಿ, ಮಹಾತೇಜಸ್ವಿಯಾಗಿ, ಸಮಸ್ತಧರಗಳನ್ನೂ ಬಲ್ಲವನಾಗಿ, ಪ್ರಮಾದರಹಿತನಾಗಿರುವ ಈ ನನ್ನ ಪತಿಯು, ನನಗೆ ವರವನ್ನು ಕೊಡುವು ದಾಗಿ ಪ್ರತಿಜ್ಞೆ ಮಾಡಿಕೊಟ್ಟಿರುವನು. ಇದಕ್ಕೆ ನೀವೆಲ್ಲರೂ ಸಾಕ್ಷೀಭೂತ ರಾಗಿರಬೇಕು.” ಎಂದು ಉದ್ಯೋಷಿಸಿ, ತಾನು ಅಬಲೆಯಾಗಿದ್ದರೂ ಮಹಾ ಧನುರ್ಧಾರಿಯಾದ ದಶರಥನನ್ನು ಧರಪಾಶಕ್ಕೆ ಕಟ್ಟುಬೀಳಿಸಿಕೊಂಡಳು. ನಡುನಡುವೆ ಆತನ ಸತ್ಯಸಂಧತೆಯನ್ನು ಶ್ಲಾಘಿಸುತ್ತಾ ಆತನನ್ನು ಉಬ್ಬಿಸು ತಿದ್ದಳು. ಅವನು ಕಾಮಪರವಶನಾಗಿ ಮುಂದುಗಾಣದಿರುವಸಮಯದಲ್ಲಿ ಅವನನ್ನು ನೋಡಿ, “ಎಲೆ ಆರನೆ!ಪೂತ್ವದಲ್ಲಿ ದೇವಾಸುರಯುದ್ಧದಲ್ಲಿ ಜರು ಗಿದ ವೃತ್ತಾಂತಗಳೆಲ್ಲವನ್ನೂ ನೀನು ಮೊದಲು ನಿನ್ನ ಸ್ಮರಣೆಗೆ ತಂದುಕೊಳ್ಳು ವನಾಗು! ಆ ಯುದ್ಧವು ನಡೆಯುತ್ತಿರುವಾಗ, ನಡುವೆ ನಿನ್ನ ಹಗೆಯಾದ ಶಂ ಬರಾಸುರನು,ನಿನ್ನನ್ನು ಮೂರ್ಛಬೀಳಿಸಿ, ಸಂಪೂರ್ಣವಾಗಿ ನಿನ್ನನ್ನು ಕೊಲ್ಲ ದಿದ್ದರೂ, ಮೃತಪ್ರಾಯವನ್ನಾಗಿಯೇ ಮಾಡಿದ್ದನು.ಆಸಮಯದಲ್ಲಿ ನಾನು ನಿನ್ನನ್ನು ಪ್ರಯತ್ನದಿಂದ ರಕ್ಷಿಸಿ ತಂದೆನು. ಆಗ ನೀನು ನನ್ನ ಸಾಮ ಕ್ಯಕ್ಕೆ ಮೆಚ್ಚಿ ಎರಡುವರಗಳನ್ನು ಕೊಟ್ಟಿರುವೆ. ಅವುಗಳನ್ನು ನಾನು ಇದು ವರೆಗೆ ನಿಕ್ಷೇಪದಂತೆ ಬಚ್ಚಿಟ್ಟಿದ್ದನು. ಈಗ ಅವುಗಳನ್ನು ಉಪಯೋಗಿಸಿಕೊ ಳ್ಳುವುದಕ್ಕೆ ತಕ್ಕ ಸಮಯವು ಬಂದೊದಗಿರುವುದು. ತನ್ನಲ್ಲಿ ಕೊಟ್ಟ ಸ್ವತ್ತ ನ್ನು ಕಾಪಾಡಿಟ್ಟು, ಕೇಳಿದಾಗ ಅವರವರಿಗೆ ಕೊಡಬೇಕಾದುದು ರಾಜನ