ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧೨] ಅಯೋಧ್ಯಾಕಾಂಡವು. M ಬರೀ ನೆಲದಮೇಲೆ ಕುಳಿತುಬಿಟ್ಟನು. ಹಾವಾಡಿಗನು ಮಂತ್ರಬಲದಿಂದ ಬರೆದಿ ವ್ಯ ಮಂಡಲದಲ್ಲಿ ಕಟ್ಟುಬಿದ್ದ ವಿಷಸರ್ಪದಂತೆ, ಅತ್ತಿತ್ತ ಚಲಿಸಲಾರದೆ, ಬಿಸಿಬಿಸಿಯಾಗಿ ಉದ್ದವಾದ ನಿಟ್ಟುಸಿರನ್ನು ಬಿಡುತ್ತ, “ಹಾ : ದೈವವೆ ಇದೇನು ವಿಪರೀತವು ?” ಎಂದು ಮನಸ್ಸಿನಲ್ಲಿ ತನ್ನ ಪೌರಾಗ್ಯವನ್ನು ತಾನೇ ನಿಂದಿಸಿಕೊಳ್ಳುತಿದ್ದನು. ಮೇಲೆಮೇಲೆ ಸಂಕಟವನ್ನು ತಡೆಯಲಾರದೆ, ಪುನಃ ಮೂರ್ಛಹೊಂದಿದನು. ತಿರುಗಿ ಬಹುಕಾಲದಮೇಲೆ ಚೇತರಿಸಿ ಕೊಂಡು, ದುಃಖದಿಂದ ತಪಿಸುತ್ತ, ಕೋಪದಿಂದ ಕೆಂಪಾದ ಕಣ್ಣುಳ್ಳವ ನಾಗಿ, ಕೈಕೇಯಿಯನ್ನು ಸುಟ್ಟುಬಿಡುವಂತೆ ಕೂರದೃಷ್ಟಿಯಿಂದ ನೋಡಿ, ಒಂದಾನೊಂದು ಮಾತನ್ನು ಹೇಳುವನು. 'ಎಲೆ ಫುತುಕಿ ! ಇದೇನು ? ನಿನಗೆ ಈ ದುರ್ಬುದ್ದಿಯು ಹುಟ್ಟಿತು ! ಈ ಪಾಪಿಸಿಯೆ ! ನಮ್ಮ ಕಲಕ್ಕೆ ಮೃತ್ಯುವಾದೆಯಲ್ಲಾ! ರಾಮನು ನಿನಗೆ ಮಾಡಿದ ಅಪರಾಧವೇನು? ಅಥವಾ ನಾನು ಮಾಡಿದ ತಪ್ಪೇನು ? ರಾಮನು! ನಿನ್ನನ್ನು ಹೆತ್ತ ತಾ ಯಂತೆ ನೋಡುತಿದ್ದನಲ್ಲವೆ ? ಆತನಲ್ಲಿಯೇ ನೀನು ಈ ವಿಧವಾದ ವಿಪರೀತ ಬುದ್ಧಿಯನ್ನು ತೋರಿಸಬಹುದೆ ? ನಿನಗೆ ಈ ದುರುದ್ಧಿಯುಂಟಾಗುವು ದಕ್ಕೆ ಕಾರಣರಾರು? ಕೊಳ್ಳಿಯಿಂದ ತಲೆಯನ್ನು ತುರಿಸಿಕೊಳ್ಳುವಂತೆ, ನಿನ್ನ ನ್ನು ಕೈಹಿಡಿದು ತಂದುದು, ಮನೆಗೆ ಮಾರಿಯನ್ನು ತಂದಂತಾಯಿತು! ಅಜ್ಯ ತೆಯಿಂದ ಕ್ರೂರವಾದ ವಿಷಸಪ್ಪವನ್ನು ಮನೆಗೆ ತಂದಿಟ್ಟಂತೆ, ನಿನ್ನನ್ನು ರಾಜ ಕನ್ನಿಕೆಯೆಂದು ಭ್ರಾಂತಿಪಟ್ಟು ಕೈಹಿಡಿದೆನಲ್ಲವೆ? ಎಲೆ ಮೂಢ! ಲೋಕದಲ್ಲಿ ರುವ ಪಶುಪಕ್ಷಿಮೃಗಾಹಿಜೀವರಾಶಿಗಳೆಲ್ಲವೂ ನಮ್ಮ ರಾಮನ ಗುಣಕ್ಕೆ ಆನಂದಿಸುತ್ತಿರುವಾಗ, ನಾನು ಯಾವ ತಪ್ಪಿಗಾಗಿ ಅಂತಹ ಪುತ್ರರತ್ನ ವನ್ನು ತೊರೆದುಬಿಡಲಿ ? ಕೌಸಲೈಯನ್ನಾಗಲಿ, ಸುಮಿತ್ರೆಯನ್ನಾಗಲಿ, ರಾಜ್ಯ ಲಕ್ಷ್ಮಿಯನ್ನಾಗಲಿ, ಕೊನೆಗೆ ನನ್ನ ಪ್ರಾಣವನ್ನೇ ಆಗಲಿ ನಾನು ತೊರೆದುಬಿ ಡಬಿನೇಹೊರತು, ಪಿತೃವತ್ಸಲನಾದ ಆ ರಾಮನನ್ನು ಎಂದಿಗೂ ಬಿಟ್ಟಿರ ಲಾರೆನು. ಆ ನನ್ನ ಮುದ್ದು ಮಗನನ್ನು ಕಣ್ಣಾರೆ ಕಾಣುತಿದ್ದಷ್ಟೂ, ನನ್ನ ದೇ ಹವು ಸಂತೋಷದಿಂದ ಉಬ್ಬುತ್ತಿರುವುದು, ಆತನನ್ನು ಕಾಣದಿದ್ದರೆ ನನ್ನ ಪ್ರಾಣವೇ ನಿಲ್ಲದು. ಒಂದುವೇಳೆ ಸೂರನಿಲ್ಲದಿದ್ದರೂ ಲೋಕವು ಬದುಕಿರ