ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧೨] ಅಯೋಧ್ಯಾಕಾಂಡವು. ೫೯ ಇಕ್ಷಾಕುವಂಶದಲ್ಲಿ, ಇಂತಹ ಅನ್ಯಾಯಕ್ಕೆ ಅವಕಾಶಕೊಡಬಹುದೆ?ಈ ನಿನ್ನ ವಿಪರೀತಬುದ್ದಿಯು ನಮ್ಮ ವಂಶದ ಅನರ್ಥಕ್ಕಾಗಿಯೇ ಹೊರತು ಬೇರೆಯಲ್ಲ? ಎಲೆ ! ಪ್ರಿಯೆ! ಅದೆಲ್ಲವೂ ಹಾಗಿರಲಿ! ನೀನು ಇದುವರೆಗೆ ನನ್ನ ವಿಷಯದಲ್ಲಿ ಅನುಚಿತವನ್ನಾಗಲಿ, ಅಪ್ರಿಯವನ್ನಾಗಲಿ ನಡೆಸಿದುದಿಲ್ಲ. ಆದುದರಿಂದ ನೀನು ಹೇಳುವ ಮಾತಿನಲ್ಲಿ ನನಗೆ ಈಗಲೂ ನಂಬಿಕೆಯೇ ಹುಟ್ಟಿಲ್ಲ! ನಿನಗೆ ರಾಮನೂ, ಮಹಾತ್ಮನಾದ ಭರತನೂ, ಇವರಿಬ್ಬರೂ ಸಮಾನವಾದ ಪ್ರೀ ತಿಗೆ ಪಾತ್ರರಲ್ಲವೆ? ಈ ಮಾತನ್ನು ನಾನು ನಿನ್ನ ಬಾಯಿಂದಲೇ ಅನೇಕಾವ್ಯ ಆ ಕೇಳಿರುವೆನು. ಎಲೆ ದೇವಿ! ಇದೇನಾಶ ರವ' ಧರಾತ್ಯನಾಗಿ, ಮಹಾ ಯಶಸ್ವಿಯೆಂದು ಖ್ಯಾತಿಗೊಂಡಿರುವ ಆ ರಾಮನನ್ನು ..ಅಬ್ಬಾ! ಒಂದಲ್ಲ, ಎರೆ ಡಲ್ಲ-ಹದಿನಾಲ್ಕು ವರ್ಷಗಳವರೆಗೆ ಕಾಡಿನಲ್ಲಿರಿಸುವುದು ನಿನಗೆ ಹೇಗೆ ತಾನೇ ಸಮ್ಮತವಾಯಿತು : ಲೋಕದಲ್ಲಿ ಧರ ಮೂರ್ತಿಯೆನಿಸಿಕೊಂಡು, ಬಹುಸು ಕುಮಾರವಾದ ಮೈಯ್ಯುಳ್ಳ ಆರಾಮನನ್ನು ,ಮಹಾಭಯಂಕರವಾದ ಕಾಡಿನ ಕ್ಲಿರಿಸಬೇಕೆಂದು ಹೇಳುವುದಕ್ಕೆ ನಿನಗೆ!ಹೇಗೆ ಬಾಯಿ ಬಂತು?ಒಂದುವೇಳೆ ಆತ ನ ಧರಬುದ್ದಿಗಾಗಲಿ, ಆತನ ದೇಹದ ಸೌಕುಮಾರಕ್ಕಾಗಲಿ, ನಿನ್ನ ಮನಸ್ಸು ಕರಗದೆ ಇದ್ದರೂ ಇರಲಿ: ಆತನು ನಿನಗೆ ಎಡೆಬಿಡದೆ ಶುಕ್ರೂಷೆಮಾಡುತಿದ್ದ ವನಲ್ಲವೇ?ಅದನ್ನಾ ದರೂ ಸ್ಮರಿಸಬಾರದೆ?ಲೋಕಾಭಿವರಾನೆನಿಸಿಕೊಂಡಿರುವ ಆರಾಮನನ್ನು ಕಾಡಿಗೆ ಕಳುಹಿಸಬೇಕೆಂದು ಹೇಳುವೆಯಲ್ಲಾ ನಿನ್ನ ಹೊಟ್ಟೆ ಯಲ್ಲಿ ಹುಟ್ಟಿದ ಭರತನಿಗಿಂತಲೂ ರಾಮನು ನಿನ್ನನ್ನು ಹೆಚ್ಚಾಗಿ ಶುಕ್ರೂಷೆ ಮಾಡುತಿದ್ದವರಲ್ಲವೆ ? ಹೀಗಿರುವಾಗ ರಾಮನಿಗಿಂತಲೂ ಭರತನಲ್ಲಿ ನನಗೆ ಯಾವವಿಶೇಷವೂ ಕಾಣಲಿಲ್ಲ. ರಾಮನು ಎಡೆಬಿಡದೆ ನಿನಗೆ ಶುಕ್ರೂಷೆಮಾಡು ತಿದ್ದುದು ಮಾತ್ರವೇ ಅಲ್ಲ.ಆ ರಾಮನಿಗಿಂತಲೂ ನಿವೃತ್ತಿ ಹೆಚ್ಚು ಗೌರವವನ್ನೂ ಭಕ್ತಿವಿಶ್ವಾಸಗಳನ್ನೂ ತೋರಿಸುತ್ತಿದ್ದವರು ಬೇರೆ ಯಾರುಂಟು? ಹೇಳಿದ ಕೆಲ ಸಗಳನ್ನು ಆಗಾಗಲೇ ನಡೆಸುತ್ತಿದ್ದ ಕಾರೊತ್ಸಾಹವು ಅವನಲ್ಲಿರುವಂತೆ ಮ ತಾರಕಿರುವುದು ? ಈ ವಿಧವಾದ ಶುಕ್ರೂಷೆಗಳೆಲ್ಲವನ್ನೂ ಪುರುಷಶ್ರೇಷ ನಾದ ರಾಮನಿಗಿಂತಲೂ ಅಧಿಕವಾಗಿ ನಿನಗೆ ನಡೆಸಿದವರಾರು ?ಇಲ್ಲಿ ಎಷ್ಟೋ ಸಾವಿರಮಂದಿ ಸ್ತ್ರೀಯರಿರುವರು! ಅನುಜೀವಿಗಳಾದ ಅನೇಕ ಕೃತ್ಯರಿರುವರ »!