ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬೦ ಶ್ರೀಮದ್ರಾಮಾಯಣವು { ಸರ್ಗ ೧೨. ಇವರಲ್ಲಿ ಒಬ್ಬರಾದರೂಅಸೂಯೆಯಿಂದ ಅವನನ್ನು ನಿಂದಿಸಿದವರಿಲ್ಲ.ರಾಮನು ನಿಷ್ಕಪಟವಾದಮನಸ್ಸುಳ್ಳವನು!ಸಮಸ್ಯಭೂತಗಳನ್ನೂ ಪ್ರಿಯವಾಕ್ಯಗಳಿಂ ದ ಲಾಲಿಸುವನು.ತನ್ನ ದೇಶದ ಪ್ರಜೆಗಳೆಲ್ಲರನ್ನೂ ಅಭೀಷ್ಟದ ನಾದಿಗಳಿಂದ ಸಂತೋಷಪಡಿಸಿ, ಅವರ ಮನಸ್ಸನ್ನು ಆಕರಿಸಿಕೊಂಡಿರುವನು. ಸತ್ಯ ಒಂದಲೇಸಮಸ್ಯಪುಣ್ಯಲೋಕಗಳನ್ನೂ ತನಗೆ ಈಡುಮಾಡಿಕೊಂಡಿರುವನು. ದಾನದಿಂದ ದರಿದ್ರರೆಲ್ಲರನ್ನೂ ವಶಪಡಿಸಿಕೊಂಡಿರುವನು. ಶುಕ್ರೂಷೆಯಿಂದ ಸಮಸ್ಯಗುರುಜನಗಳನ್ನೂ ಸ್ವಾಧೀನಪಡಿಸಿಕೊಂಡಿರುವನು. ಯುದ್ಧದಲ್ಲಿ ತನಗಿದಿರಾಗಿ ಬಂದ ಹಗೆಗಳೆಲ್ಲರನ್ನೂ ತನ್ನ ಧನುಸ್ಸಿನಿಂದ ಸಾಧಿಸಿಕೊಳ್ಳು ವನು. ಹೀಗೆ ಕ್ಷತ್ರಿಯಜಾತಿಯೋಗ್ಯವಾದ ಭುಜಫೀರವೊಂದುಮಾ ತ್ರವೇ ಅಲ್ಲದೆ, ಸತ್ಯ ದಾನ ದಯಾದಿ ಗುಣಗಳಿಂದ ಸಮಸ್ತಲೋಕವನ್ನೂ ತನಗೆ ಈಡಾಗಿಮಾಡಿಕೊಳ್ಳತಕ್ಕೆ ಅದ್ಭುತವಾದ ಒಂದು ಮಹಾಪೀರವೂ ಉಂಟು. ಸಮಸ್ತಗುಣಗಳಲ್ಲಿಯೂ ಮೇಲೆನಿಸಿಕೊಂಡ ಸತ್ಯವೂ, ಪರಲೋಕ ಸಾಧಕವಾದ ದಾನವೂ, ಇಂದ್ರಿಯನಿಗ್ರಾಹಕವಾದ ತಪಸ್ಕೂ, ಲೋಕದ ಜನರ ಪ್ರೀತಿಯನ್ನು ಸಂಪಾದಿಸುವುದಕ್ಕೆ ಸಾಧನವಾದ ತ್ಯಾಗವೂ, ಸಮಸ್ತ ಜನರಲ್ಲಿಯೂ ಸೌಹಾರವೂ, ಬಾಹ್ಯಾಭ್ಯಂತರಶುದ್ಧಿಯೂ, ಪರರ ಮನ ಸ್ಪನ್ನು ಅನುವರ್ತಿಸತಕ್ಕ ಋಜುಸ್ವಭಾವವೂ, ತತ್ತ್ವಜ್ಞಾನವೂ, ಗುರುತು ಶೂನೆಯೂ, ಇವೇ ಮೊದಲಾದ ಸದ್ಗುಣಗಳೆಲ್ಲವೂ ಎಡೆಬಿಡದೆ ರಾಮ ನಲ್ಲಿ ನೆಲೆಗೊಂಡಿರುವುವು. ಹೀಗೆ ಋಜುಸ್ವಭಾವವುಳ್ಳವನಾಗಿ, ದೇವತೆಗಳಿಗೆ ಸಮಾನನಾಗಿ,ಮಹರ್ಷಿಗಳಂತೆ ದಿವ್ಯತೇಜಸ್ಸುಳ್ಳ ರಾಮನನ್ನು ಕಾಡಿಗೆ ಕಳು ಹಿಸಿಬಿಡಬೇಕೆಂಬ ಈ ಪಾಪಬುದ್ಧಿಯು ನಿನಗೆ ಹೇಗೆತಾನೇ ಉಂಟಾಯಿತು?

  • ಪೂರದಲ್ಲಿ ಚೋಳರಾಜನು ಮಧ್ಯಮವೀಧಿಭಟ್ಟಾರಕರೆಂಬವರನ್ನು ಕುರಿತು “ಆತ್ಮಾನಂ ಮಾನುಷಂ ಮನೈ” ಎಂದು ಹೇಳುತ್ತಿದ್ದ ರಾಮನು,ಜಟಾಯುವಿಗೆ ಶಸ್ತ್ರ ಲೋಕಗಳನ್ನು ಕೊಟ್ಟುದು ಹೇಗೆ” ಎಂದು ಆಕ್ಷೇಪಿಸಲು, ಅದಕ್ಕಾಭಟ್ಟಾರಕರು “ಸತ್ಯೇನ ಲೋರ್ಕಾ ಜಯತಿ” ಆತನು ತನ್ನ ಸತ್ಯದಿಂದಲೇ ಸಮಸ್ತ ಶಕ್ಯಲೋಕಗ ಇನ್ನೂ ತನಗೆ ಈಡುಮಾಡಿಕೊಂಡಿರುವನೆಂದು ಸಮಾಧಾನಕೇಳಿ, ದೊಡ್ಡ ಬಹುಮಾನ ವನ್ನು ಪಡೆದುದಾಗಿ ಮಕ್ಕವುಂಟು.