ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೨ } ಅಯೋಧ್ಯಾಕಾಂಡವು, ILL ವಾದ ಗತಿಯನ್ನು ಪಡೆದನು. *ಸಮುದ್ರವೂಕೂಡ ಕೊಟ್ಟ ಭಾಷಗೆ ಕಟ್ಟು ಬಿದ್ದು, ಈಗಲೂ ತನ್ನ ಎಲ್ಲೆಯನ್ನು ತಾನು ದಾಟಿಹೋಗಲಾರದೆ ನಿಂತಿರು ವುದು.ಎಲೈ ರಾಜನೆ! ಹಿಂದೆ ನಡೆದುದನ್ನು ಚೆನ್ನಾಗಿ ಜ್ಞಾಪಿಸಿಕೊಂಡು, ಟೈಮಾತನ್ನು ನಡಸು, ಆಡಿದಮಾತಿಗೆ ತಪ್ಪಬೇಡ'ನೀನು ಸತ್ಯಧರಗಳನ್ನಾ ದರೂ ಬಿಟ್ಟು, ರಾಮನಿಗೆ ರಾಜ್ಯಾಭಿಷೇಕವನ್ನು ಮಾಡಿ, ಕೌಸಲ್ಯಯೊಡ ಗೂಡಿ ನಿತ್ಯಭೋಗಗಳನ್ನು ಅನುಭವಿಸಬೇಕೆಂದು ಉದ್ದೇಶಿಸಿರುವಹಾಗೆ ತೋರುವುದು. ಈ ವಿಧವಾದ ದುರ್ಬುದ್ಧಿಯು ನಿನಗೆ ಹುಟ್ಟಬಹುದೆ? ಈಗ ನಾನು ಕೇಳಿಕೊಳ್ಳುವುದು ಥರವಾಗಿದ್ದರೂ, ಅಧರವಾಗಿದ್ದರೂ, ಅಥವಾ ನಿಜವಾಗಿದ್ದರೂ, ಸುಳ್ಳಾಗಿದ್ದರೂ, ನೀನು ಈಗ ಸ್ವಲ್ಪ ಹಿಂದೆ ಸತ್ಯಮಾಡಿ ಕೊಟ್ಟಂತೆ ನಡೆಯುವುದಕ್ಕೆ ತಡೆಯೇನಿದೆ : ಎಲೈ ರಾಜನೆ ! ಸುಮ್ಮನೆ ಉತ್ತರಪ್ರತ್ಯುತ್ತರಗಳನ್ನು ಬಳಸುವುದರಿಂದ ಪ್ರಯೋಜನವಿಲ್ಲ ! ರಾಮ ಸಿಗೆ ಸೀನು ಪಟ್ಟಾಭಿಷೇಕವನ್ನು ಮಾಡಿದ ಪಕ್ಷದಲ್ಲಿ, ಆಕ್ಷಣವೇ ನಾನು ನಿನ್ನ ಕಣ್ಣಿಟರಿಗೆ ವಿಷವನ್ನು ಕುಡಿದು ಪ್ರಾಣಬಿಡುವೆನು. ಇದು ಸತ್ಯವು! ರಾಮನ ತಾಯಿಗೆ ಪ್ರಜೆಗಳೆಲ್ಲರೂಕೈಮುಗಿದು ಸೇವೆಮಾಡುವುದನ್ನು ನೋಡುತ್ತಾ ನು ಬದುಕಿರುವುದಕ್ಕಿಂತ ಸಾಯುವುದೇ ಮೇಲು.ಒಂದು ದಿವಸವಾದರೂ ಆ ವಳ ಉಚ್ಚ ಸ್ಥಿತಿಯನ್ನು ನೋಡಿ ನಾನು ಸಹಿಸಲಾರೆನು!ಇದೋ! ಶಪಥಮಾ ಡಿ ಹೇಳುವೆನು! ಭರತನಮೇಲೆ ಯೂ, ನನ್ನ ಮೇಲೆಯೂ ಆಣೆಯಿಟ್ಟು ಸತ್ಯ ಮಾಡುವೆನು. ರಾಮನನ್ನು ಕಾಡಿಗೆ ಕಳುಹಿಸುವುದಕ್ಕಿಂತಲೂ,ನನಗೆ ತೃಪ್ತಿ ಕರವಾದ ಕಾರವು ಬೇರೊಂದಿಲ್ಲ!” ಹೀಗೆಂದು ಹೇಳಿ ಕೈಕೇಯಿಯು ಸುಮ್ಮನಾದಳು. ದಶರಥನು ಮಾತಾಡಿಸಿಕೊಂಡುಬಂದರೂ ಅವನಿಗೆ ಪ್ರತ್ಯುತ್ತರವನ್ನೆ ಕೊಡಲಿಲ್ಲ. ರಾಮನನ್ನು ಕಾಡಿಗೆ ಕಳುಹಿಸಿ, ಭರತನಿಗೆ ಕಣ್ಣುಗಳನ್ನು ಕೊಡಬೇಕೆಂದು ಯಾಚಿಸಲು, ಆ ರಾಜನು ತನ್ನ ಕಣ್ಣುಗಳನ್ನ ಕಿತ್ತುಕೊಟ್ಟನೆಂದು ಕಥೆಯು,

  • ಈರದಲ್ಲಿ ದೇವತೆಗಳು ಸಮುದ್ರರಾಜನನ್ನು ಕುರಿತು “ನೀನು ನಿನ್ನ ಎಳ್ಳೆ ಕಟ್ಟನ್ನು ದಾಟಿ ಬಾರದಂತೆ ಅಭಯವನ್ನು ಕೊಡಬೇಕು” ಎಂದು ಪ್ರಾಸಲು, ಹಾಗೆ ಯೇ ಆಗಲೆಂದು ಸಮುದ್ರವು ಅವರಿಗೆ ಪ್ರತಿಜ್ಞೆ ಮಾಡಿಕೊಟ್ಟು ದಾಗಿ ಪೂರೈಕಥೆಯು