ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1೬೪ . ಶ್ರೀಮದ್ರಾಮಾಯಣವು [ಸರ್ಗ ೧೨, ಪಟ್ಟವನ್ನು ಕಟ್ಟಬೇಕೆಂಬ ಕರಕಠೋರವಾದ ಈ ಎರಡುವರಗಳನ್ನೇ ಕೇ ಳುತಿದ್ದಳು ಕೈಕೇಯಿಯ ಮಾತನ್ನು ಕೇಳಿ ದಶರಥನಿಗೆ ಸ್ವಲ್ಪ ಹೊತ್ತಿನವ ರೆಗೆ ಏನೂ ತೋರಲಿಲ್ಲ. ಕೂರವಾಕ್ಯವನ್ನಾಡಿದ ಆಕೆಯನ್ನು ರೆಪ್ಪೆ ಮು ಚೈದೆ ಕೂರದೃಷ್ಟಿಯಿಂದ ನೋಡುತಿದ್ದನು. ಸಿಡಿಲಿನಂತೆ ಮಹಾಕೂರ ವಾಗಿಯೂ, ಮನಸ್ಸಿಗೆ ಸಂಕಟಕರವಾಗಿಯೂ, ದುಃಖಪ್ರಚುರವಾಗಿಯೂ ಇರುವ ಆ ಕೈಕೇಯಿಯ ಮಾತನ್ನು ಕೇಳಿದಮೇಲೆ, ದಶರಥನ ಮನಸ್ಸು ಒಂ ದು ಸ್ತಿಮಿತದಲ್ಲಿಲಿಲ್ಲ. ಕೈಕೇಯಿಯು ತನ್ನ ದುರುದ್ದೇಶವನ್ನು ಬಿಡದೆ ಅಣೆ ಯಿಟ್ಟು ಶಪಥಮಾಡಿದುದನ್ನು ಮನಸ್ಸಿನಲ್ಲಿ ನೆನೆಸಿಕೊಂಡಹಾಗೆಲ್ಲಾ ಸಂಕ ಟವನ್ನು ತಡೆಯಲಾಗದೆ, ಹಾ ರಾಮಾ ! ” ಎಂದು ಗಟ್ಟಿಯಾಗಿ ಕೂಗಿ, ಉದ್ದವಾದ ನಿಟ್ಟುಸಿರನ್ನು ಬಿಟ್ಟು, ಬುಡವನ್ನು ಕಡಿದ ಮರದಂತೆ ಹಾಗೆ ಯೇ ಪ್ರಜ್ಞೆ ತಪ್ಪಿ ಕೆಳಕ್ಕೆ ಬಿದ್ದನು. ಆಮೇಲೆ ಮೆಲ್ಲಗೆ ಚೆ: ತರಿಸಿಕೊಂಡರೂ, ಹುಚ್ಚನಂತೆ ಬುದ್ಧಿಶೂನ್ಯನಾಗಿ, ಸನ್ನಿ ಪಾತಹಿಡಿದವನಂತೆ ಪ್ರಜ್ಞೆಯಿ ಲ್ಲದವನಾಗಿ, ಮಂತ್ರಬಲದಿಂದ ಕಟ್ಟಲ್ಪಟ್ಟ ಹಾವಿನಂತೆ ಶಕ್ತಿಗುಂದಿ ದವನಾಗಿಯೂ ಇದ್ದನು. ಕೊನೆಗೆ ಕೈಕೇಯಿಯನ್ನು ನೋಡಿ, ಬಹುಪೈನ್ಯವ ನ್ನು ತೋರಿಸುತ್ತ,ಕುಗ್ಗಿದ ಸ್ವರದಿಂದ ಒಂದನೊಂದು ಮಾತನ್ನು ಹೇಳು ವನು. 'ಎಲೆ ಕೈಕೇಯಿ ! ನಿನಗೆ ಈ ದುರಾಲೋಚನೆಯನ್ನು ಯಾರು ಹೇಳಿ ಕೊಟ್ಟರು! ಮಹಾನಕ್ಕೆ ಕಾರಣವಾದ ಈ ವ್ಯವಸಾಯವನ್ನು ಶ್ರೇಯ ಸ್ವರವೆಂದು ನಿನಗೆ ದುರ್ಬೋಧನೆಮಾಡಿದವರಾರು ? ಪಿಶಾಚಗ್ರಳಂತೆ ನಾಚಿಕೆಯಿಲ್ಲದೆ, ಪತಿಯಾದ ನನ್ನೊಡನೆಯೇ ಹೀಗೆ ಕೋರವಾಕ್ಯವನ್ನಾಡು ವೆಯಲ್ಲಾ! ಹಿಂದೆ ಯಾವಾಗಲೂ ನಾನು ನಿನ್ನಲ್ಲಿ ಈ ದುರ್ಬುದ್ದಿಯನ್ನು ನೋಡಿರಲಿಲ್ಲ ! ಎಲ್ಲವೂ ಈಗ ವಿಪರೀತವಾಗಿ ಕಾಣುತ್ತಿದೆ! ಭರತನಿಗೆ ರಾಜ್ಯವನ್ನು ಕೊಟ್ಟು, ರಾಮನನ್ನು ಕಾಡಿಗೆ ಕಳುಹಿಸಬೇಕೆಂದು ಕೇಳುವೆ ಯಲ್ಲವೆ ? ಯಾವ ಕಾರಣಕ್ಕಾಗಿ ನೀನು ಹೀಗೆ ಭಯಪಡುವೆ ? ಈಗ ನಿನಗೆ ಹುಟ್ಟಿರುವ ಈ ದುರ್ಬುದ್ಧಿಯು ನಿಜವಾಗಿದ್ದರೂ ಅಥವಾ ಸುಳ್ಳಾಗಿದ್ದರೂ, ಅದನ್ನು ಇಷ್ಟಕ್ಕೇ ಬಿಟ್ಟುಬಿಡು! ನೀನು ಪತಿಯಾದ ನನಗೂ, ಪ್ರಜೆಗಳಿಗೂ ನಿನ್ನ ಹೊಟ್ಟೆಯಲ್ಲಿ ಹುಟ್ಟಿದ ಭರತನಿಗೂ,ನಿಜವಾಗಿ ಶ್ರೇಯಸ್ಸನ್ನು ಕೋರು