ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧೨ || ಅಯೋಧ್ಯಾಕಾಂಡವು. 14 ವವಳಾದರೆ, ಈ ಸಂಕಲ್ಪವನ್ನು ಇಷ್ಟಕ್ಕೇ ನಿಲ್ಲಿಸು : ಎಲೆ ಮಾತುಕಿ: ಎಲೆ ಪಾಸಿನಿ ! ಎಲೆ ನೀಚೆ : ದುಷ್ಟಾರಗಳಿಗಂಜದ ಮಹಾಕ್ಕರೆ ! ನನ್ನ ಕ್ಲಿಯಾ ಗಲಿ, ಅಥವಾ ರಾಮನಲ್ಲಿಯಾಗಲಿ, ಯಾವ ತಪ್ಪನ್ನು ಕಂಡಿರುವೆ ?ನಮ್ಮಿಂದ ನಿನಗುಂಟಾಗತಕ್ಕ ಅನರವೇನು ? ಥರ ಸೂಕ್ಷವನ್ನು ವಿಚಾರಿಸುವುದರಲ್ಲಿ ರಾಮನಿಗಿಂತಲೂ ಭರತನೇನು ಕಡಿಮೆಯಾದವನೆಂದೆಣಿಸಬೇಡ ! ರಾಮನ ನ್ನು ಬಿಟ್ಟು, ಭರತನು ನಿಮಿಷಮಾತ್ರವಾದರೂ ರಾಜ್ಯದಲ್ಲಿ ಸಿಲುವನೆ ? ನಾನು ಕಾಡಿಗೆ ಹೋಗೆಂದು ಹೇಳಿದಾಗ, ಆ ರಾಮನಮುಖವು ಗ್ರಹಣಹಿಡಿದ ಚಂದ್ರನಂತೆ ಬಣ್ಣಗುಂದಿದರೆ, ಅದನ್ನು ನೋಡಿ ನಾನು ಹೇಗೆ ಸಹಿಸಲಿ ? ನಾನು ನನ್ನ ಸೈಜ್ಞೆಯಿಂದಲೇ ರಾಮನಿಗೆ ಪಟ್ಟವನ್ನು ಕಟ್ಟಬೇಕೆಂದು ನಿಶ ಯಿಸಿದವನಲ್ಲ! ಮಂತ್ರಿಗಳೊಡನೆಯೂ, ಮಿತ್ರರೊಡನೆಯೂ ಪುರಜನ ರೊಡನೆಯೂ ಕಲೆತು, ಯುಕ್ತಾಯುಕ್ತಗಳನ್ನು ಚೆನ್ನಾಗಿ ವಿಚಾರಿಸಿ, ಅವರ ಮನಃಪೂರಕವಾದ ಅಭಿಪ್ರಾಯವನ್ನು ತೆಗೆದುಕೊಂಡೇ. ಈ ಕಾವ್ಯವನ್ನು ನಿಶ್ಚಯಿಸಿರುವೆನು. ಹೀಗೆ ಸ್ಥಿರಪಡಿಸಲ್ಪಟ್ಟ ಈ ನನ್ನ ಉದ್ದೇಶವನ್ನು ಈಗ ನಾನು ಹೇಗೆ ಹಿಂತಿರುಗಿಸಲಿ ! ಸುಶಿಕ್ಷಿತವಾದ ತನ್ನ ಸೈನ್ಯವು ಶತ್ರುಗಳಿಂದ ಪರಾಜಿತವಾಗಿ ಹಿಂದಕ್ಕೆ ಓಡಿಹೋಗುತ್ತಿರುವುದನ್ನು ನೋಡಿ, ಕೈಲಾಗದೆ ನಾಚಿಕೆಯಿಂದ ತಲೆಯನ್ನು ತಗ್ಗಿಸಿಕೊಂಡು ಸಂಕಟಪಡುವಂತೆ, ಇದುವರೆಗೆ ನಾನು ನಡೆಸಿರುವ ಪ್ರಯತ್ನಗಳೆಲ್ಲವೂ ವಿಮುಖವಾಗುವುದನ್ನು ನೋಡಿ ನಾನು ಹೇಗೆ ಸಹಿಸಲಿ! ರಾಮಾಭಿಷೇಕಕ್ಕಾಗಿ ನಾನಾದಿಕ್ಕುಗಳಿಂದಲೂ ಕರೆಸಲ್ಪಟ್ಟಿರುವ ರಾಜರು ನನ್ನನ್ನು ಏನೆಂದು ಹೇಳುವರು ! ಅವರೆಲ್ಲ ರೂ ನನ್ನನ್ನು ನೋಡಿ, ಈ ದಶರಥನಿಗೆ ಎಷ್ಟು ವಯಸ್ಸಾದರೇನು ? ಇವನು ಇಷ್ಟು ದಿವಸಗಳವರೆಗೆ ರಾಜ್ಯಾಭಾರಮಾಡಿ ಫಲವೇನು? ಈತನಿಗೆ ಬಾಲ ಯೋಗ್ಯವಾಗ ಚಪಲಬುಟ್ಟಿಯು ಇನ್ನೂ ಬಿಡಲಿಲ್ಲ” ವೆಂದು ಹೀಗಳೆಯುವ ರಲ್ಲವೆ ? ಈಗ ಈ ಉತ್ಸವಕ್ಕಾಗಿ ಗುಣವಂತರಾಗಿಯ, ವಿದ್ಯಾವಂತ ರಾಗಿಯೂ ಇರುವ ಅನೇಕರು ಬಂದುಸೇರಿರುವರು. ಅವರೆಲ್ಲರೂ 4tರಾಮನೆಲ್ಲಿ?” ಎಂದು ಕೇಳಿದರೆ, ನಾನು ಅವರಿಗೆ ಯಾವಪ್ರತ್ಯುತ್ತರ ವನ್ನು ಕೊಡಲಿ ! “ಕೈಕೇಯಿಯ ಮಾತಿಗಾಗಿ ಧರಕ್ಕೆ ಕಟ್ಟುಬಿದ್ದು ರಾ

ಜ .