ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩೬ ಶ್ರೀಮದ್ರಾಮಯಯನ (ಸರ್ಗ. ೧೨, ಮನನ್ನು ನಾನು ಕಾಡಿಗೆಕಳುಹಿಸಿದೆ”ನೆಂದರೆ, ಅವರೆಲ್ಲರೂ ಅದನ್ನು ನಿಜವೆಂ ದು ನಂಬುವರೆ? ಅದೂ ಹೋಗಲಿ! ಕೌಸಲ್ಯಯು ನನ್ನನ್ನು ನೋಡಿ ಏನೆಂದು ಹೇಳುವಳು? ಇಷ್ಟು ಆಪಕಾರವನ್ನು ಮಾಡಿದಮೇಲೆ, ನಾನು ಅವಳಿಗೆ ಏನೆಂದು ಪ್ರತ್ಯುತ್ತರವನ್ನು ಕೊಡಬಲ್ಲೆನು?ಕೌಸಲ್ಯಯು ಯಾವಾಗಲೂ ನನಗೆ ಪ್ರಿ ಯವನ್ನೇ ಕೋರತಕ್ಕವಳು! ರಾಮನಲ್ಲಿ ಅವಳಿಗಿರತಕ್ಕ ಪ್ರೇಮಾತಿಶಯವೋ ಆತ್ಮಿಷ್ಟಲ್ಲ! ಅವಳು ನನಗೆ ಉಪಚಾರಮಾಡತಕ್ಕ ಕಾಲಗಳಲ್ಲಿ ದಾಸಿಯಂತೆ ಉಪಚರಿಸುವಳು! ಡ್ಯೂತಾದಿವಿನೋದಕಾಲಗಳಲ್ಲಿ ಪ್ರಿಯಸಖಿಯಂತೆ ಸಲಿ ಗೆಯಿಂದಿರುವಳು ! ನನ್ನ ಶ್ರೇಯಃಕಾರಿಗಳಲ್ಲಿ ಒಡಹುಟ್ಟಿದವಳಂತೆ ಅತ್ಯು ತ್ಸಾಹವನ್ನು ತೋರಿಸುತ್ತಿರುವಳು' ನನ್ನ ದೇಹಪೋಷಣೆಯ ವಿಷಯದಲ್ಲಿ ಹೆತ್ತ ತಾಯಂತೆ ಅಕ್ಕರೆಯಿಟ್ಟು ನಡೆಸುವಳು. ತಾನು ಪಟ್ಟದರಾಣಿಯೆಂಬ ಗತ್ವವನ್ನು ಒಂದುದಿನವಾದರೂ ತೋರಿಸಿಕೊಂಡವಳಲ್ಲ. ಅಯ್ಯೋ ! ಅವಳಿಂದ ನಾನು ಇಷ್ಟು ಮಹೋಪಕಾರಗಳನ್ನು ಹೊಂಯಿದ್ದರೂ, ಅದಕ್ಕೆ ತಕ್ಕಂತೆ ನಾನು ಅವಳನ್ನು ಒಂದುದಿನವಾದರೂ ಸತ್ಕರಿಸಲಿಲ್ಲ. ಮಹಾಪಾಪಿ ನಿಯಾದ ನಿನ್ನ ಕೋಪಕ್ಕೆ ಹೆದರಿ, ನ್ಯಾಯವಾಗಿ ಸತ್ಕಾರಾರ್ಹಳಾದ ಅವಳ ನ್ಯೂ ಸತ್ಕರಿಸದೆ ಹೋದೆನು. ವ್ಯಾಧಿಗ್ರಸ್ತನಾದ ಮನುಷ್ಯನು, ಬಾಯ ಚಾ ಪಲ್ಯಕ್ಕಾಗಿ ಸಿಕ್ಕಿದುದನ್ನೆಲ್ಲಾ ತಿಂದು, ಅಪಥ್ಯವನ್ನು ಮಾಡಿ, ಆಮೇಲೆ ಮತ್ತೆ ಷ್ಟು ರೋಗಬಾಧೆಯಿಂದ ನರಳುವಂತೆ, ನಾನು ನಿನ್ನ ಕೂರಸ್ವಭಾವವನ್ನರಿ ಯದೆ,ಇದುವರೆಗೆ ನಿನ್ನನ್ನು ಪುರಸ್ಕರಿಸುತಿದ್ದೆನು. ಈಗ ಅದನ್ನು ನೆನೆಸಿಕೊಂಡು ಪಶ್ಚಾತ್ತಾಪಪಡಬೇಕಾಗಿದೆ. ನಾನು ರಾಮಾಭಿಷೇಕಕ್ಕಾಗಿ ಇದುವರೆಗೆ ಬೇ ಕಾದ ಸನ್ನಾಹಗಳೆಲ್ಲವನ್ನೂ ಮಾಡಿರುವೆನು. ಈಗ ಅದನ್ನು ತಪ್ಪಿಸಿ, ರಾಮನ ನ್ನು ಕಾಡಿಗೆ ಕಳುಹಿಸಿಬಿಟ್ಟರೆ, ನನ್ನಲ್ಲಿ ಸುಮಿತ್ರೆಗೆತಾನೇ ಹೇಗೆ ನಂಬಿಕೆ ಹು ಟ್ಯುವುದು? ಅವಳು ನನ್ನ ಈ ಚಪಲಬುಟ್ಟಿಯನ್ನು ನೋಡಿ, ತನ್ನ ಮಕ್ಕಳಾದ ಲಕ್ಷಣಶತ್ರುಘ್ನು ರಿಗೂ ಯಾವಕಾಲಕ್ಕೆ ಏನಪಾಯವುಂಟಾಗಬಹುದೋ ಎಂಬ ಶಂಕೆಯಿಂದ ಭಯಪಡುವಳಲ್ಲವೆ! ಅತ್ತಲಾಗಿ ರಾಮನು ಅಯೋಧ್ಯೆಯ ನ್ನು ಬಿಟ್ಟು ಹೊರಟಕೂಡಲೆ,ಇತ್ತಲಾಗಿ ನನ್ನ ಪ್ರಾಣವು ದೇಹವನ್ನು ಬಿಟ್ಟು ಹೊರಡುವುದೇನೋ ಸಿದ್ದವು! ಈ ಎರಡು ದುಃಖವಾರೆಗಳೂ ಸೀತೆಗೆ ಏಕ