ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬೮ ಶ್ರೀಮದ್ರಾಮಾಯನನ ಸರ್ಗ, ೧೨. ಡಿದ ಪಾಪದ ಫಲದಿಂದಲೇ,ನಾನು ಅಪ್ರತೀಕಾರಾರ್ಹವಾದ ಇಂತಹ ಮ ಹಾದುಃಖವನ್ನು ಅನುಭವಿಸಬೇಕಾಗಿ ಬಂದಿರುವುದು. ಎಲೆ ಫಾತುಕಿ! ಲೋ ಕಕಂಟಕೆಯಾದ, ಮಹಾಪಾಪಿಸಿಯಾದ, ನಿನ್ನನ್ನು ಬಹುಕಾಲದಿಂದ ಇದು ವರೆಗೆ ಕಾಪಾಡಿಟ್ಟ ಮಹಾಪಾತಕವೊಂದು ನನಗೆ ಬಂದೊದಗಿದೆ ! ಸಿನ ದು ಸೃಭಾವವನ್ನು ತಿಳಿಯದೆ, ಅಜ್ಞಾನದಿಂದ ನಾನು, ನೇಣುಹಾಕಿಕೊಳ್ಳುವ ಹಗ್ಗವನ್ನು ಕಾಪಾಡಿಟ್ಟಂತೆ,ಬಹುಪ್ರೇಮದಿಂದ ನಿನ್ನನ್ನು ಕೆರಳಿನಲ್ಲಿ ಕಟ್ಟೆ ಕೊಂಡು ಲಾಲಿಸುತಿದ್ದೆನು. ಕೊನೆಗೆ ನೀನೇ ನನಗೆ ಆ ಕಂಠಪಾಶದಂತೆ ಮೈ ತ್ಯುಹೇತುವಾದೆಯಲ್ಲಾ? ಅಯ್ಯೋ! ಮೃತ್ಯುದೇವತೆಯೆಂಬುದನ್ನರಿಯದೆ ನಾ ನು ನಿನ್ನೊಡನೆ ಇದುವರೆಗೆ ರವಿಸುತಿದ್ದೆನಲ್ಲಾ! ನಾನು ನಿನ್ನ ಅಂಗಸ್ಪರ್ಶವ ನ್ನು ಮಾಡಿದುದುಕೂಡ, ಸಣ್ಣ ಮಗುವು ಯಾರೂ ಇಲ್ಲದವೇಳೆಯ ಕ್ಲಿ,ಅಜ್ಞಾನದಿಂದ ಕೃಷ್ಣಸರ್ಪವನ್ನು ಕೈಯಿಂದ ಮುಟ್ಟಿದಂತಾಯಿತು! ಮ ಹಾತ್ಮನಾದ ರಾಮನು, ಮಹಾಪಾಪಿಯಾದ ನನ್ನ ಹೊಟ್ಟೆಯಲ್ಲಿ ಹುಟ್ಟಿದು ದರಿಂದ, ನಾನು ಬದುಕಿರುವಾಗಲೇ ತಂದೆಯಿಲ್ಲದ ತಬ್ಬಲಿಯಂತಾದನು. ದುರಾತ್ಮನಾದ ನನ್ನನ್ನು ನೋಡಿದವರೆಲ್ಲರೂ ದಶರಥನು, ಕೇವ ಲಕಾಮಪರವಶನಾಗಿ ಹೆಂಡತಿಯ ಮಾತಿಗಾಗಿ ತನ್ನ ಮುದ್ದು ಮಗನನ್ನು ಕಾಡಿಗೆ ಕಳುಹಿಸಿದನಲ್ಲಾ! ಇವನಷ್ಟು ಅವಿವೇಕಿಗಳೊಬ್ಬರೂ ಇಲ್ಲ” ಎಂದು ನನ್ನನ್ನು ನಿಂದಿಸುವರಲ್ಲಾ ? ರಾಮನು ಇದುವರೆಗೂ ಬ್ರ ಹ್ಮಚಯ್ಯಾವ್ರತಗಳಿಂದಲೂ, ಗುರುಶುಕ್ರೂಷೆಯಿಂದಲೂ, ಕಾಲವನ್ನು ಕಳೆಯುತಿದ್ದನೇಹೊರತು, ಸ್ವಲ್ಪ ಮಾತ್ರವಾದರೂ ರಾಜ್ಯಭೋಗಗಳನ್ನು ಅನುಭವಿಸಲಿಲ್ಲ. ಈಗ ಸುಖವನ್ನು ಅನುಭವಿಸುವಕಾಲದಲ್ಲಿ, ಅವನಿಗೆ ಇಂತಹ ಮಹಾವಿಪತ್ತು ಬಂದೊದಗಿತು! ಗುಣಾಡ್ಯನಾದ ಆ ರಾಮನು, ನನ್ನ ಮಾ ತನ್ನು ಸ್ವಲ್ಪವೂ ಮೀರಿ ನಡೆಯಲಾರನು. ಕಾಡಿಗೆ ಹೋಗೆಂದು ನಾನು ಹೇಳಿದೊಡನೆಯೇ ಬದಲುಮಾತನ್ನಾಡದೆ ಒಪ್ಪಿಕೊಳ್ಳುವುದರಲ್ಲಿ ಸಂದೇ ಹವೇ ಇಲ್ಲ ! ಈ ವಿಷಯದಲ್ಲಿ ಆತನು ನನ್ನ ಮಾತನ್ನು ಮೀರಿ ನಡೆದರೂ ನನಗೆ ಇಷ್ಟವೇಹೊರತು ಅಸಮಾಧಾನವಿಲ್ಲ. ಅವನು ಎಂದಿಗೂ ಹಾಗೆ ನಡೆ ಯಲಾರನು. ಆತನು ಕಪಟವನ್ನರಿಯದ ಋಜುಸ್ಪಭಾವವುಳ್ಳವನಾದುದ