ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1೭೦ ಶ್ರೀಮದ್ರಾಮಾಯಣವು [ಸರ್ಗ, ೧೨: ನ ಕಾಡಿಗೆ ಹೊರಟುಹೋದಮೇಲೆ, ನೀನು ಗಂಡನಿಲ್ಲದ ಮುಂಡೆಯಾಗಿ, ನಿನ್ನ ಮಗನೊಡಗೂಡಿ ಇಷ್ಟಬಂದ ಭೋಗಗಳನ್ನು ಅನುಭವಿಸಬಹುದು, ಮನೆಗೆ ಮಾರಿಯಾದ ನೀನು,ರಾಜಕುಮಾರಿಯೆಂಬ ನೆಗೆ ಬಂದು ಸೇರಿದೆ ! ಇದರಿಂದ ನಾನು ಮಹಾಪಾತಕವನ್ನು ಮಾಡಿದವ ನಂತೆ ಮಹತ್ತಾದ ಅಪಕೀರ್ತಿಗೂ, ತಿರಸ್ಕಾರಕ್ಕೂ, ಅವಮಾನಕ್ಕೂ ಪಾತ್ರನಾಗಬೇಕಾಯಿತು ! ಅದೆಲ್ಲವೂ ಹೋಗಲಿ! ಆಗಾಗ, ರಥಗಜತುರಗಾ ಥವಾಹನಗಳಮೇಲೆ ಮಹಾವೈಭವದಿಂದ ಸಂಚರಿಸುತ್ತಿದ್ದ ಸುಕುಮಾ ರಾಂಗನಾದ ರಾಮನು, ಈಗ ಆ ಮಹಾರಣ್ಯದಲ್ಲಿ ಕಾಲುನಡೆಯಿಂದ ಸಂಚರಿಸಬೇಕೆಂದರೆ, ಹೇಗೆ ತಾನೇ ಸಾಧ್ಯವ? ಯಾವನ ಭೋಜನಕಾಲಗಳ ಕ್ಲಿ, ಪ್ರಶಸ್ತವಾದ ಅನ್ನ ಪಾನಗಳನ್ನು ಒದಗಿಸುವುದಕ್ಕಾಗಿ, ಅಡಿಗೆಯವರೆಲ್ಲ ರೂ ಕುಂಡಲಾದ್ಯಾಭರಣಗಳನ್ನಿಟ್ಟುಕೊಂಡು, ಸಾಲಂಕಾರಭೂಷಿತರಾ ಗಿ, ನಾನುತಾನೆಂದು ಮುಂದಾಗಿ ಬಂದು ಪಾಕಮಾಡುತಿದ್ದರೋ, ಅಂತಹ ರಾಮನು, ಈಗ ಕಾಡಿನಲ್ಲಿ ಸುತ್ತುತ, ಕಹಿ, ಒಗರು, ಕಾರ, ಮುಂತಾದುವು ಗಳನ್ನೆಣಿಸದೆ, ಅಲ್ಲಲ್ಲಿ ಸಿಕ್ಕಿದ ಆಹಾರಗಳನ್ನು ತಿಂದು ಹೇಗೆ ಜೀವಿಸಬಲ್ಲನು ? ಅಮೂಲ್ಯವಾದ ವಸ್ತ್ರಗಳನ್ನು ಟ್ಟು ಬಹುಕಾಲದಿಂದ ರಾಜೋಪಭೋಗದಲ್ಲಿ ಬಳೆದ ರಾಮನು, ಈಗ ಕಾಡಿನಲ್ಲಿ ಕಾವಿಬಟ್ಟೆಗಳನ್ನು ಟ್ಟು,ನೆಲದಮೇಲೆ ಮಲ ಗುವುದುತಾನೇ ಹೇಗೆ? ರಾಮನನ್ನು ಕಾಡಿಗೆ ಕಳುಹಿಸಿ ಭರತನಿಗೆ ಅಭಿಷೇಕವ ನ್ನು ಮಾಡಬೇಕೆ? ಹಾ ! ಮನಸ್ಸಿನಲ್ಲಿ ಚಿಂತಿಸುವುದಕ್ಕೂ ಯೋಗ್ಯವಲ್ಲದ ಈ ಕಠಿನವಾರೆಯು ನಿನ್ನ ಬಾಯಿಂದ ಹೇಗೆ ಬಂದಿತು? ಯಾವಾಗಲೂ'ಸ್ಕಾರ ಪರರಾಗಿ,ಬಹಳ ಮೂರ್ಖಸ್ವಭಾವವುಳ್ಳ ಈ ಸೀಜಾತಿಯನ್ನೇ ಸುಡಬೇಕು! ಈ ! ನಾನು ನಿಷ್ಕಾರಣವಾಗಿ ಸಾಮಾನ್ಯವನ್ನೇ ಏಕೆ ನಿಂದಿಸಲಿ ! ಮುಖ್ಯವಾಗಿ ಈಗ ಈ ಭರತನ ತಾಯಿಯನ್ನು ಹೇಳಬೇಕಾಗಿದೆ. ಎಲೆ ಕೇಡಾ ಳಿ ! ಎಲೆ ಸ್ವಾರಪರಳೆ ! ಎಲೆ ಫಾತುಕಿ ! ನನ್ನ ನ್ನು ಸಂಕಟಪಡಿಸೇಕೆಂ ದೇ ನೀನು ದೃಢಸಂಕಲ್ಪವನ್ನು ಮಾಡಿರುವಹಾಗೆ ಕಾಣುತ್ತಿದೆ ! ನಾನು ನಿನಗೆ ಯಾವವಿಧದಲ್ಲಿ ಅಪ್ರಿಯವನ್ನು ಮಾಡಿರುವೆನು? ಯಾವಾಗಲೂ ನಿನ್ನ `ಹಿತವನ್ನೇ ಬಯಸುತ್ತಿದ್ದ ರಾಮನಲ್ಲಿಯಾದರೂ ನೀನು ಯಾವ ತಪ್ಪನ್ನು