ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದ್ರಾಮಾಯಣವು {ಸರ್ಗ, ಇನ್ನೂ ಏಕೆ ಸಹಸ್ರಭಾಗವಾಗಿ ಸೀಳಿಹೋಗಲಿಲ್ಲ! ನಿನ್ನ ಹಲ್ಲುಗಳೇಕೆ ಪುಡಿ ಪುಡಿಯಾಗಿ ಉದಿರಿಹೋಗಲಿಲ್ಲ ? ರಾಮನು ನಿನ್ನೊಡನೆ ಯಾವಾಗಲೂ ಒಂ ದು ದುರಾಕ್ಯವನ್ನಾದರೂ ಆಡಿದವನಲ್ಲ. ಒಂದುದಿನವಾದರೂ ನಿನಗೆ ಅಪ್ರಿ ಯವನ್ನು ನುಡಿದವನಲ್ಲ. ಕೂರವಾಕ್ಯಗಳನ್ನು ನುಡಿಯುವುದು ಹೇಗೆಂಬು ದೇ ಆತನಿಗೆ ತಿಳಿಯದು. ಹೀಗೆ ಸಮಸ್ತ ಪ್ರಾಣಿಗಳೊಡನೆಯೂ ಪ್ರಿಯವನ್ನೇ ನುಡಿಯುವ ಸುಸ್ವಭಾವವುಳ್ಳ ಗುಣಾಡ್ಯನಾದ ಆ ರಾಮನಲ್ಲಿ, ನೀನು ಹೇಗೆ ತಾನೇ ದೋಷವನ್ನಾ ರೋಪಿಸಿದೆ? ಎಲೆ ಪಾಪ! ಕೇಕಯವಂಶಕ್ಕೆ ಕಳಂಕ ಪ್ರಾಯಳಾಗಿ ಹುಟ್ಟಿರುವೆಯಲ್ಲವೆ?ನೀನು ಅನ್ನ ಪಾನಗಳನ್ನೆಲ್ಲಾ ಬಿಟ್ಟು ದೇಹ ಕ್ಷಯವನ್ನು ಮಾಡಿದರೂ ಸರಿ!ದುಃಖಾಗ್ರಿ ಯಿಂದ ಹೀಗೆಯೇ ಬೆಂದುಹೋದ ರೂ ಸರಿ! ಸತ್ತರೂ ಸರಿ! ಸಹಸ್ರಭಾಗವಾಗಿ ತಲೆಯೊಡೆಯುವಂತೆ ಬೆಟ್ಟದ ಮೇಲಿಂದ ಬಿದ್ದರೂ ಸರಿ!ನಾನು ಅಂಜುವವನಲ್ಲ! ನಿನ್ನ ಮಾತಿನಂತೆ ನಾನು ಎಂದಿಗೂ ನಡೆಸಲಾರೆನು! ಈಗ ನೀನು ಅಪೇಕ್ಷಿಸಿರುವ ಕೋರಿಕೆಯು ಇವೆಲ್ಲ ಕ್ಕಿಂತಲೂ ಮಹಾನರಹೇತುವಾಗಿರುವುದು. ಕತ್ತಿಯ ಅಲಗಿನಂತೆ ಮಹಾತೀ ಕಸ್ವಭಾವಳಾಗಿ,ಯಾವಾಗಲೂ ಪರರಿಗೆ ಕೇಡನ್ನೇ ಬಯಸುವಳಾಗಿ,ಮೇಲೆ ಮಾತ್ರ ಮೃದುವಾಕ್ಯಗಳಿಂದ ಮೋಹಗೊಳಿಸುವ ಕಪಟಸ್ವಭಾವೆಯಾಗಿ, ನ ಮ್ಮ ಕುಲಕ್ಕೆ ಹಾನಿಯನ್ನು ತರುವ ನೀನುಬದುಕಿರುವುದಕ್ಕಿಂತಲೂ ಸಾಯು ವುದು ಮೇಲು ! ನೀನು ನನ್ನ ಮನಸ್ಸನ್ನು ತದಾಶ್ರಯವಾದ ಪ್ರಾಣದೊಡ ನೆಯೇ ಸುಡಬೇಕೆಂದಿರುವೆಯಾ ! ನನ್ನ ಜೀವದಲ್ಲಿಯೇ ನನಗೆ ಜಿಹಾಸೆಯುಂ ಟಾಗಿರುವಾಗ, ಇನ್ನು ಸುಖದಾಸೆಯೇನು? ಅಥವಾ ಒಂದುವೇಳೆ ಬದುಕಿದ್ದ ರೂ, ಮಗನನ್ನು ತೊರೆದುಬಿಟ್ಟಮೇಲೆ, ನನ್ನ ಮನಸ್ಸಿಗೆ ಹರ್ಷವೆಲ್ಲಿಯದು ! ಎಲೆ ಪ್ರಿಯೆ! ಬೇಡ! ನೀನು ನನ್ನ ಕೈಹಿಡಿದ ಪ್ರಿಯಪತ್ನಿ ಯಲ್ಲವೆ! ನನಗೆ ನೀನು ಕೇಡನ್ನು ಬಯಸಬಹುದೆ? ನಿನ್ನ ಹಠವನ್ನು ಬಿಡು!ಇದೋ!ನಿನ್ನ ಕಾಲಿಗೆ ಬಿಳು ವೆನು. ನನ್ನಲ್ಲಿ ಪ್ರಸನ್ನಳಾಗು !” ಎಂದು ಹೇಳಿ, ರಾಜನು ದಿಕ್ಕಿಲ್ಲದವನಂತೆ ಗಟ್ಟಿಯಾಗಿ ಗೋಳಿಡುತ್ತ,ಗರದಿಂದ ಉನ್ಮಾರ್ಗಗಾಮಿನಿಯಾದ ಆ ಕೈಕೇ ಯಿಗೆ ವಶ್ಯನಾಗಿ, ವ್ಯಾಧಿಗ್ರಸ್ತನಾದವನು ಶಕ್ತಿಗುಂದಿ ಪ್ರಜ್ಞೆ ತಪ್ಪಿ ಬಿಳು ವಂತೆ, ಅವಳ ಎರಡುಕಾಲುಗಳಮೇಲೆಯೂ ಬಿದ್ದನು. ಆದರೆ ಇವ