ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫ ಶ್ರೀಮದ್ರಾಮಾಯಣವು - (ಸರ್ಗದಿ, d, ಆಹಾ ! ಕೇವಲಸೀಮೋಹಕ್ಕಾಗಿ, ಈ ರಾಜನು ತನ್ನ ಮುದ್ದು ಮಗನಾ ಹ ರಾಮನನ್ನು ಕಾಡಿಗೆ ಕಳುಹಿಸಿ, ಆತನಿಗೆ ಮಹಾವ್ಯಸನವನ್ನು ತಂದಿಟ್ಟ ” ನೆಂದು ನಿಂದಿಸಿದರೆ, ಅದನ್ನು ಕೇಳಿ ನಾನು ಹೇಗೆ ಸಹಿಸಲಿ! ಅವರು ಈವಿಷ ಯದಲ್ಲಿ ನನ್ನನ್ನೇ ಪ್ರಶ್ನೆ ಮಾಡಿದರೆ ಅವರಿಗೆ ನಾನು ಏನೆಂದು ಸಮಾ ಧಾನಹೇಳಲಿ! (ಕೈಕೇಯಿಯಲ್ಲಿ ಮಾತಿಗೆ ಕಟ್ಟುಬಿದ್ದು, ಅವಳ ಇಷಕ್ಕಾಗಿ ನಾನು ರಾಮನನ್ನು ತೊರೆದುಬಿಡಬೇಕಾಯಿತು” ಎಂಬ ಯಥಾರವಾದ ಅಂಶವನ್ನೇ ನಾನು ಅವರಿಗೆ ಹೇಳಬಹುದು.ಆಗಲೂ ನಾನು ಅಸತ್ಯವನ್ನೇ ನು ಡಿದಂತಾಗುವುದಲ್ಲವೆ? ನಿನ್ನೆ ನಾನು ರಾಮನನ್ನು ಕರೆದು, ಪ್ರತ್ಯಕ್ಷದಲ್ಲಿ ನಿಲ್ಲಿ ಸಿಕೊಂಡು, ಆತನೊಡನೆ « ನಾಳೆ ನಿನಗೆ ಪಟ್ಟವನ್ನು ಕಟ್ಟುವೆನು” ಎಂದು ಘುಂಟಾಘೋಷವಾಗಿ ಹೇಳಿದ ಮಾತಿಗೆ ತಪ್ಪಿದಂತಾಗುವುದಿಲ್ಲವೆ? ಎಲೆ ಕೈ ಕೇಯಿ ! ಬಹುಕಾಲದಿಂದ ಸಂತಾನವಿಲ್ಲದಿದ್ದ ನಾನು ಬಹುಶ್ರಮಪಟ್ಟು ವ್ರ ತೋಪವಾಸಗಳನ್ನೂ , ಯಜ್ಞಗಳನ್ನೂ ಮಾಡಿ, ಮಹಾತ್ಮನಾದ ಈ ರಾಮ ನೆಂಬ ಪುತ್ರರತ್ನ ವನ್ನು ಪಡೆದೆನು ಅಂತವನನ್ನು ಹೇಗೆ ಬಿಟ್ಟುಬಿಡಲಿ ! ಹಾ ಕಷ್ಟವೆ! ಮಹಾಶೂರನಾಗಿ, ಬಾಲ್ಯದಲ್ಲಿಯೇ ಸಮಸ್ತ ವಿದ್ಯೆಗಳನ್ನೂ ಓದಿತಿಳಿದವನಾಗಿ, ಬಹುಕಾಲದವರೆಗೆ ಯೋಗನಿದ್ದೆಯಲ್ಲಿದ್ದು ಜಿತೇಂದ್ರಿ ಯತ್ವವನ್ನು ಸಾಧಿಸಿದ ಮಹರ್ಷಿಗಳಂತೆ ಕೋಪವನ್ನು ನಿಗ್ರಹಿಸಿದವನಾಗಿ ಕಂದಾವರೆಯಂತೆ ಅಂದವಾದ ಕಣ್ಣುಗಳುಳ್ಳ ಮುದ್ದು ಮಗನಾದ ರಾಮನ ನ್ನು ನಾನು ಹೇಗೆ ಆಗಲಿರಲಿ! ನೀಲಮೇಘಶ್ಯಾಮನಾಗಿ, ಆಜಾನುಬಾಹುವಾ ಗಿ, ಮಹಾಬಲಾಡ್ಯನಾಗಿ, ಲೋಕೈಕಸುಂದರನಾದ ಆ ರಾಮನನ್ನು ನಾನು ಹೇಗೆ ಆಮಹಾರಣ್ಯಕ್ಕೆ ಕಳುಹಿಸಲಿ! ಅಯ್ಯೋ! ರಾಮನು ಹುಟ್ಟಿದಂದಿನಿಂದ "ರಾಜಭೋಗದಲ್ಲಿಯೇ ಬೆಳೆದವನು! ಕಷ್ಟವೆಂಬುದನ್ನು ಯಾವಾಗಲೂಕಂಡವ ನಲ್ಲ! ಇಂತಹ ಸುಕುಮಾರಾಂಗನಾದ ರಾಮನು ಕಷ್ಟಪಡುವುದನ್ನು ಕಂಡು ನಾನು ಹೇಗೆ ಸಹಿಸಲಿ!ಯಾವಾಗಲೂ ದುಃಖವೆಂಬುದನ್ನೇ ಕಂಡರಿಯದ ಆ 'ರಾಮನನ್ನು ಕರೆದು, ನನ್ನ ಬಾಯಿಂದ ನಾನೇ ಆತನಿಗೆ ಈಮಹಾಘೋರವಾದ ವ್ಯಸನಕಾರವನ್ನು ನಿಯಮಿಸಬೇಕೆ?ಅದಕ್ಕೆ ಮೊದಲೇ,ನನ್ನ ಈಪ್ರಾಣವುಹೂ - ಗಿಬಿಟ್ಟರೆ, ಅದೇ ನನಗೆ ಪರಮಸುಖವೆಂದಣಿಸಿರುವೆನು!”ಎಲೆ ಪೂತುಕಿ!ಎಲೆ