ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೬೬ ಸರ್ಗ: ೧೪.] ಅಯೋಧ್ಯಾಕಾಂಡವು. ದನು. ಪರಮಸಾಧುವಾದ ಆ ರಾಜನು, ನೋಡುವವರಿಗೆ ಭಯವಾಗು ವಂತೆ ದುಃಖಾತಿಶಯದಿಂದ ಆಗಾಗ ನಿಟ್ಟುಸಿರುಬಿಡುತ್ತ ಪರಿತಪಿಸುತ್ತಿದ್ದ ನು. ಹಾಗೆಯೇ ಆ ರಾತ್ರಿಯೆಲ್ಲವೂ ಕಳೆಯುತ್ತ ಬಂದಿತು. ಬೆಳಗಿನ ಜಾವ ದಲ್ಲಿ ವೈತಾಳಿಕರು ಬಂದು, ಎಂದಿನಂತೆ ರಾಜನನ್ನು ಎಚ್ಚರಗೊಳಿಸುವುದ ಕಾಗಿ ಸುಪ್ರಭಾತಸ್ತುತಿಗಳನ್ನು ಹೇಳಲಾರಂಭಿಸಿದರು. ಅಷ್ಟರಲ್ಲಿ ರಾಜನು ಬೇಡ” ಎಂದು ಅವರನ್ನು ತಡೆಯುವಂತೆ ಆಜ್ಞೆ ಮಾಡಿ ಕಳುಹಿಸಿದನು. ಇಲ್ಲಿಗೆ ಹದಿಮೂರನೆಯ ಸರ್ಗವು ( ದಶರಥನು ರಾಮನನ್ನು ಕಾಡಿಗೆ ಕಳುಹಿಸುವುದಾಗಿ ) + 3 ನಿಶ್ಚಯಿಸಿದುದು, ಸುಮಂತ್ರನು ದಶರಥನ ಬಳಿಗೆ (*ಬಂದುದು, ರಾಮನನ್ನು ಕರೆಯಿಸಿದುದು, ) ಹೀಗೆ ಪುತ್ರಶೋಕದಿಂದ ಪೀಡಿತನಾಗಿ, ಪ್ರಜ್ಞೆಯಿಲ್ಲದೆ ನೆಲದಮೇಲೆ ಬಿದ್ದು ಹೊರಳುತ್ತಿರುವ ರಾಜನನ್ನು ನೋಡಿ, ಪಾಪಬುದ್ದಿಯುಳ್ಳ ಕೈಕೇಯಿ ಯು ಪನಃ ಅವನನ್ನು ಕುರಿತು ಎಲೆ ರಾಜನೆ ! ಇದೀಗ ಬಹಳ ಚೆನ್ನಾ ಯಿತು! ನನಗೆ ಮೊದಲು ಸತ್ಯವನ್ನು ಮಾಡಿಕೊಟ್ಟು.ಈಗ ಅದನ್ನು ತಪ್ಪಿಸಿಕೊಳ್ಳಬೇ ಕೆಂದು ಪ್ರಯತ್ನಿ ಸುವ ಹಾಗಿದೆ? ಹೀಗೆ ಭಾಷೆಗೆ ತಪ್ಪಿದವನೆಂಬ ಮಹಾಪಾತ ಕಕೊಳಗಾಗಿಯೂ ನೀನು, ಏನೋ ಬಸಳ ದುಃಖಿತನಾದಂತೆ ನೆಲದಮೇಲೆ ಬಿದ್ದು ಹೊರಳುವೆಯಾ ? ದುರಾರ್ಗದಲ್ಲಿ ವರಿಸದೆ, ಉಚಿತವಾದ ದಾರಿ ಯಲ್ಲಿ ಹೋಗು ! ಝಜ್ಞರಾದವರು ಸತ್ಯಕ್ಕಿಂತಲೂ ಬೇರೆ ಧಕ್ಕವಿಲ್ಲವೆಂ ದು ಹೇಳಿರುವರಲ್ಲವೆ? ಆ ಸತ್ಯವನ್ನು ಬಿಡದೆ ಧರದಲ್ಲಿ ನಡೆಯುವಂತೆ ನಾನು ನಿನ್ನನ್ನು ನಿರ್ಬಂಧಿಸುವೆನೇ ಹೊರತು, ನಾನು ತಪ್ಪಬಾರಿಗೆ ಹೋದವಳಲ್ಲ. ಇಂತಹ ಪ್ರಾಣಸಂಕಟದಲ್ಲಿ ಸತ್ಯವನ್ನು ಹೇಗೆ ಮೀರದಿರಬಹುದೆಂದು ನೀನು ಕೇಳಬಹುದು ? ಹಿಂದೆ ಶೈಶ್ಯನೆಂಬ ರಾಜನು ತನ್ನ ಮಾತಿಗೆ ಕಟ್ಟುಬಿ ದ್ವು.ಜೀವದ ಮೇಲೆಯೂ ಆಶೆಯಿಡದೆ, ಒಂದುಗಿಡುಗನಿಗೆ ತನ್ನ ದೇಹವನ್ನೇ ಒಪ್ಪಿಸಿ, ಸರೋತ್ತಮವಾದ ಗತಿಯನ್ನು ಪಡೆಯಲಿಲ್ಲವೆ ? ಹಾಗೆಯೇ ಮಹಾತೇಜಸ್ವಿಯಾದ ಅಲರನೆಂಬ ರಾಜನು, ವೇದಪಾರಂಗತನಾದ ಒಬ್ಬ ಬ್ರಾಹ್ಮಣನು ಬಂದು ಕೇಳಿದಾಗ, ಸ್ವಲ್ಪವೂ ಹಿಂಜರಿಯದೆ ತನ್ನ ಕಣ್ಣುಗಳ