ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೩೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಶ್ರೀಮದ್ರಾಮಾಯಕರು [ಸರ್ಗ, ೧೪ ರಡನ್ನೂ ಕಿತ್ತುಕೊಡಲಿಲ್ಲವೆ ? ಹಾಗೆಯೇ, ಸಮಸ್ತನದಿಗಳಿಗೂ ಒಡೆಯ ನಾವ ಸಮುದ್ರರಾಜನು ಸತ್ಯಕ್ಕೆ ಕಟ್ಟುಬಿದ್ದು, ಈಗಲೂ ತನ್ನ ಎಲ್ಲೆಯನ್ನು ಮೀರಲಾರದೆ ಇದ್ದಲ್ಲಿಯೇ ಇರುವನಲ್ಲವೆ? ಪಠ್ಯಕಾಲಗಳಲ್ಲಿ ಉಕ್ಕಿಬರು ವಾಗಲೂ ಅವನು ಎಲ್ಲೆಯನ್ನು ದಾಟುವುದಿಲ್ಲ. ಸತ್ಯವೆಂಬುದೇ ಬ್ರಹ್ಮ ವಾಚಕವಾದ ಪ್ರಣವಸ್ವರೂಪವು. ಸತ್ಯದಲ್ಲಿಯೇ ಸಮಸ್ಯಥರಗಳ ಆಡ ಗಿರುವುವು. ಸತ್ಯವೇ ಸಮಸ್ತ ವೇದಗಳೆನಿಸುವುವು. ಸತ್ಯವೇ ಸಮಸ್ತಫಲಗ ಳನ್ನೂ ಕೊಡತಕ್ಕುದು. ಸತ್ಯವೇ ಪರಬ್ರಹ್ಮವು, ನಿನಗೆ ಥ್ಯದಲ್ಲಿ ಬುದ್ದಿ ಯು ಪ್ರವರಿಸುವುದಾದರೆ, ಆ ಸತ್ಯವನ್ನೇ ಅನುಸರಿಸಿ ನಡೆ ! ನೀನು ಕೇಳಿದ ವರಿಗೆ ಕೇಳಿದ ವರಗಳನ್ನೆಲ್ಲಾ ಕೊಡುವವನೆಂದು ಖ್ಯಾತಿ ಹೊಂದಿದವನಲ್ಲವೆ ? ಈಗ ನಾನು ಕೇಳುವ ವರಗಳನ್ನೂ ಸಫಲಗೊಳಿಸು ! ಥರ ಪರಿಪಾಲನ 'ಕ್ಯಾಗಿಯೋ, ನನ್ನ ನಿರ್ಬಂಧಕ್ಕಾಗಿಯೇ, ರಾಮನನ್ನು ಹೊರಡಿಸಲೇಬೇಕು, ಇದೋ! ನಾನು ಸಾರಿಸಾರಿ ಹೇಳುವೆನು? ರಾಮನನ್ನು ಹೊರಡಿಸು! ಧವ ನ್ನು ಪಾಲಿಸು!! ನನ್ನ ಮಾತನ್ನು ನಡೆಸು !!! ಎಲೈ ರಾಜನೆ! ಈಗ ನೀನು ನನಗೆ ಶಪಥಮಾಡಿಕೊಟ್ಟಿರುವಂತೆ ನಡೆಸದಿದ್ದರೆ, ನಿನ್ನಿಂದ ತಿರಸ್ಕೃತಳಾದ ನಾ ನು ಈಗಲೇ ನಿನ್ನ ಕಣ್ಣಿಟರಿಗೆ ಪ್ರಾಣವನ್ನು ಬಿಡುವೆನು” ಎಂದಳು. ಹೀಗೆ ನಿ ರೈಯಳಾಗಿ ಕೈಕೇಯಿಯು ತನ್ನನ್ನು ನಿರ್ಬಂಧಿಸುತ್ತಿರಲು,* ಹಿಂದೆ ವಾಮನ ರೂಪಿಯಾದ ಮಹಾವಿಷ್ಣುವು, ಇಂದ್ರನ ಪ್ರಾರನೆಯಿಂದ ತನ್ನನ್ನು ವಂಚಿ ಸುವುದಕ್ಕಾಗಿ ಬಂದಾಗ, ಬಲಿಚಕ್ರವರಿಯು, ಕೊಟ್ಟ ಮಾತಿಗೆ ಕಟ್ಟುಬಿದ್ದು, ತಪ್ಪಿಸಿಕೊಳ್ಳಲಾರದೆ ಕಷ್ಟಕ್ಕೆ ಸಿಕ್ಕಿಕೊಂಡಂತೆ, ಈಗ ದಶರಥನು ಕೈಕೇಯಿ

  • ಹಿಂದೆ ಬಲಿಯೆಂಬ ರಾಕ್ಷಸನು, ಇಂದ್ರನನ್ನು ಓಡಿಸಿ ಸ್ವರ್ಗಾಧಿಪತ್ಯವನ್ನಾಕ್ರ ಮಿಸಿಕೊಳ್ಳಲು, ಇಂದ್ರನ ತಾಯಿಯಾದ ಅದಿತಿಯು, ತನ್ನ ಮಗನ ಕಷ್ಟವನ್ನು ಬಿಡಿಸ ಬೇಕೆಂದು ವಿಷ್ಣುವನ್ನು ಪ್ರಾರಿಸಿದಳು. ಆಗ ವಿಷ್ಣುವು ವಾಮನಾವತಾರವನ್ನೆತ್ರಿ, ಯಜ್ಞ ಮಾಡುತಿದ್ದ ಬಲಿಯ ಸಭಗೆ ಬಂದು, ಮೂರಡಿಯ ನೆಲವನ್ನು ಯಾಚಿಸಿದನು. ಬಲಿಯು ಅದಕ್ಕೊಪ್ಪಿ ವಾಗ್ದಾನಮಾಡಲು, ವಿಷ್ಣುವು ತನ್ನ ಎರಡಡಿಗಳಿಂದಲೇ ಮೂ ರುಲೋಕಗಳನ್ನೂ ಅಳೆದುಕೊಂಡನು. ಉಳಿದ ಮೂರನೆಯ ಅಡಿಗಾಗಿ ಬಲಿಯು ತನ್ನ ತಲೆಯನ್ನೊಡಲು, ಆ ವ್ಯಾಜದಿಂದಲೇ ವಾಮನನು ಆ ಬಲಿಯನ್ನು ಸೆರೆಯಲ್ಲಿಟ್ಟು ದಾ ಗಿಪುರಾಣಕಥೆಯು,