ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೪೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


“ಕಿಅt ಶ್ರೀಮದ್ರಾಮಾಯಣವು, [ಸರ್ಗ, ೧೫ + ರಾಮಾಭಿಷೇಕ ಸಂಭಾರ ವರ್ಕನವು, ++ * ಅತ್ತಲಾಗಿ ವೇದಪಾರಂಗತರಾದ ಬ್ರಾಹ್ಮಣರೆಲ್ಲರೂ ಆ ರಾತ್ರಿಯ ನ್ನು ಬಹುಪ್ರಯಾಸದಿಂದ ಕಳೆದು, ಬೆಳಗಾದಕೂಡಲೆ ರಾಜಪುರೋಹಿತ ರಾದ ವಸಿಷ್ಠರನ್ನು ಮುಂದಿಟ್ಟುಕೊಂಡು ಅಭಿಷೇಕಕಾರವನ್ನು ನಡೆಸು ವುದಕ್ಕಾಗಿ ಸಭೆಸೇರಿದ್ದರು. ಮಂತ್ರಿಗಳೂ, ಸೇನಾಧಿಪತಿಗಳೂ, ಪಟ್ಟ ಣದ ಅಧಿಕಾರಿಗಳೂ, ಅತ್ಯುತ್ಸಾಹದಿಂದ ಒಟ್ಟುಗೂಡಿದ್ದರು. ಸೂರ್ ನು ಸಂಪೂರವಾಗಿ ಉದಿಸಿಬಿಟ್ಟನು. ಪುಷ್ಯ ನಕ್ಷತ್ರವೂ ಸೇರಿತು ! ಕರಾ ಟಕಲಗ್ನವು ಪ್ರಾಪ್ತವಾಗಿ, ಪ್ರಶಸ್ತವಾದ ರಾಮನ ಜನನಲಗ್ನವೇ ಸಂಧಿಸಿತು. ರಾಮಾಭಿಷೇಕಕ್ಕಾಗಿ ಬ್ರಾಹ್ಮಣರೆಲ್ಲರೂ ಬೇಕಾದ ಸನ್ನಾ ಹಗ ಇನ್ನು ಸಿದ್ಧಪಡಿಸಿಟ್ಟರು. ಮುಂದುಗಡೆಯಲ್ಲಿ ಪುಣ್ಯತೀರಗಳಿಂದ ಶೋಭಿ ಸುತ್ತಿದ್ದ ಸುವ‌ ಕುಂಭಗಳು ಇಡಲ್ಪಟ್ಟಿದ್ದುವು. ನಡುವೆ ಸುವರಮಯ ವಾದ ಭದ್ರಪೀಠವು ಶೋಭಿಸುತಿತ್ತು. ಅಂದವಾದ ಹುಲಿಯ ಚರ ದಿಂದ ಹೊದೆಸಲ್ಪಟ್ಟ ರಥವು ಸಿದ್ಧಪಡಿಸಲ್ಪಟ್ಟಿತ್ತು. ಗಂಗಾಯಮುನೆ ಗಳ ಸಂಗಮಸ್ಥಳದಿಂದ ಪುಣ್ಯತೀರವನ್ನು ತರಿಸಿಟ್ಟರು. ಇದಲ್ಲದೆ ಲೋಕ ದಲ್ಲಿ ಯಾವಯಾವ ಪುಣ್ಯನದಿಗಳುಂಟೋ, ಯಾವಯಾವ ಪುಣ್ಯಸರಸ್ಸುಗ ಳುಂಟೋ, ಅವೆಲ್ಲವುಗಳಿಂದಲೂ ತೀರ ಜಲವನ್ನು ತರಿಸಿದ್ದರು. ಇನ್ನೂ ಲೋಕದಲ್ಲಿ ಪೂಣ್ಯ ತೀರಗಳೆಂದು ಪ್ರಸಿದ್ಧಿ ಹೊಂದಿದ ವಾಪೀಕೋಪ ತಟಾಕಗ ಳಿಂದಲೂ, ಪೂರೈದಕ್ಷಿಣಪತಿ ಮೋತ್ತರವಾಹಿನಿಗಳಾದ ಸಮಸ್ತನದಿಗಳಿಂ ದಲೂ, ಗಿರಿನದಿಗಳಿಂದಲೂ, ಮೇಲುಮುಖವಾಗಿ ಪ್ರವಹಿಸುವ ಬ್ರಹ್ಮಾ ವರ ರುದ್ರಾವರಾದಿಸರಸ್ಸುಗಳಿಂದಲೂ, ತೀರಗಳು ತರಿಸಿಡಲ್ಪಟ್ಟಿ ದ್ದವು. ನಾಲ್ಕು ಸಮುದ್ರಗಳಿಂದಲೂ ತೀರ ಗಳನ್ನು ತರಿಸಿದ್ದರು. ಬೆಳ್ಳಿ ಬಂಗಾರಗಳಿಂದ ಮಾಡಲ್ಪಟ್ಟ ಈ ಜಲಕುಂಭಗಳೆಲ್ಲವನ್ನೂ ಅರಳುಗ ಳಿಂದಲೂ, ಅರಳಿ, ಅತ್ತಿ, ಮುಂತಾದ ಎಲೆಗಳಿಂದಲೂ, ತಾವರೆ, ನೈದಿಲೆ, ಮೊದಲಾದ ಹೂಗಳಿಂದ ಅಲಂಕರಿಸಿದ್ದರು. ಜೇನು, ಮೊಸರು, ತುಪ್ಪ, ಅರಳು, ದರೆಗಳು, ಪುಷ್ಪಗಳು, ಹಾಲು, ಮುಂತಾದ ಸಾಮಗ್ರಿಗಳೆಲ್ಲವೂ ಸಿದ್ಧಪಡಿಸಲ್ಪಟ್ಟಿದ್ದು ವು.ತಮ್ಮ ಕುಲಧರದಲ್ಲಿ ನಿರ್ದುಷ್ಟವಾಗಿ ವರ್ತಿಸುವ