ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧೦.] ಅಯೋಧ್ಯಾಕಾಂಡವು, ೩೭ ವೇಶ್ಯಾಸ್ತ್ರೀಯರು, ಸರಾಭರಣಭೂಷಿತರಾಗಿ ಬಂದು ನಿಂತಿದ್ದರು. ರಾಮನ ಅಭಿಷೇಕಕಾಲದಲ್ಲಿ ಬೀಸುವುದಕ್ಕಾಗಿ, ಚಂದ್ರಕಿರಣದಂತೆ ಬಿಳುಪಾಗಿ, ರತ್ನ ಖಚಿತವಾದ ಚಿನ್ನದ ಹಿಡಿಯಿಂದ ಶೋಭಿಸುವ ದಿವ್ಯಚಾಮರವೊಂದು ಸಿದ್ಧ ಪಡಿಸಲ್ಪಟ್ಟಿತ್ತು. ಆತನ ಅಭಿಷೇಕಕಾಲದಲ್ಲಿ ಹಿಡಿಯುವುದಕ್ಕಾಗಿ ಚಂದ್ರ ಬಿಂಬದಂತೆ ಶೋಭಿಸುವ ರಾಜ್ಯಚಿಹ್ನ ವಾದ ಶ್ವೇತಛತ್ರವನ್ನೂ ತರಿಸಿಟ್ಟರು. ಬಿಳಿಬಣ್ಣವುಳ್ಳ ಒಂದು ವೃಷಭವೂ, ಒಂದು ಬಿಳೀಕುದುರೆಯೂ, ಮೆರೆವ ಣಿಗೆಯ ಕಾಲದಲ್ಲಿ ರಾಮನು ಏರಿಬರುವುದಕ್ಕಾಗಿ ಮಂಗಳಕರವಾದ ಒಂದು ಮದದಾನೆಯೂ ಸಿದ್ಧಪಡಿಸಲ್ಪಟ್ಟಿತ್ತು. ಮಂಗಳಾರವಾದ ಅಷ್ಮಕನ್ಯಕೆಯ ರು, ಸರಾಭರಣಭೂಷಿತರಾಗಿ ನಿಂತಿದ್ದರು. ಸಮಸ್ತವಾದ್ಯಗಳೂ ಸಿದ್ಧವಾಗಿ ದ್ದುವು. ವಂದಿಮಾಗಧಾದಿಗಳೆಲ್ಲರೂ ಸಿದ್ಧರಾಗಿದ್ದರು. ಹಿಂದೆ ಇಕ್ಷಾಕುರಾಜ ಪರಂಪರೆಯಾಗಿ ಅಭಿಷೇಕವು ನಡೆದ ಕ್ರಮವನ್ನನುಸರಿಸಿ ಸಮಸ್ತವಸ್ತುಗ ಳೂ ಸಿದ್ಧಪಡಿಸಲ್ಪಟ್ಟಿದ್ದುವು.ಹಾಗೆಯೇ ಉತ್ತಮಜಾತೀಯವಾದ ಸಮಸ್ಯ ವಸ್ತುಗಳನ್ನೂ ಕೈಕಾಣಿಕೆಯಾಗಿ ತೆಗೆದುಕೊಂಡು, ಅನೇಕರಾಜರು ರಾಮಾ ಭಿಷೇಕಕ್ಕಾಗಿ ದಶರಥನ ಆಜ್ಞೆಯನ್ನನುಸರಿಸಿ, ಬಾಗಿಲಲ್ಲಿ ನಿಂತಿದ್ದರು. ಅವ ರೆಲ್ಲರೂ ತಮ್ಮೊಳಗೆ ಒಬ್ಬರಿಗೊಬ್ಬರು ಈಗ ನಾವು ಬಂದಿರುವ ವಿಷಯ ವನ್ನು ದಶರಥನಿಗೆ ಯಾರು ತಿಳಿಸುವರು ? ರಾಜನೆಲ್ಲಿರುವೆನೋ ತಿಳಿಯಲಿಲ್ಲ ! ಸೂರನು ಉದಿಸಿಬಿಟ್ಟನು. ರಾಮನ ರಾಜ್ಯಾಭಿಷೇಕಕ್ಕಾಗಿ ಸಮಸ್ಯ ಸನ್ನಾಹಗಳೂ ಸಿದ್ಧವಾಗಿರುವುವು. ಹೊತ್ತು ಮೀರುತ್ತಿರುವುದು. ಈಗ ಮಾಡುವುದೇನು?” ಎಂದು ಸಂಭ್ರಮದಿಂದ ಮಾತನಾಡುತ್ತಿರುವಾಗಲೇ, ದಶರಥರಾಜನಿಗೆ ಪ್ರೀತಿಪಾತ್ರನಾದ ಸುಮಂತ್ರನು ಅಲ್ಲಿದ್ದ ರಾಜಾಧಿರಾಜ ರನ್ನು ನೋಡಿ - ಎಲೈ ರಾಜರೆ ! ರಾಮನನ್ನು ಕರೆತರುವಂತೆ ರಾಜಾಜ್ಞೆ ಯಾಗಿರುವುದು. ಅದಕ್ಕಾಗಿಯೇ ನಾನು ಹೊರಟಿರುವೆನು.ನೀವೆಲ್ಲರೂ ನಮ್ಮ ದಶರಥರಾಜನಿಗೆ ಬಹಳ ಪ್ರೀತಿಪಾತ್ರರಾಗಿಯೂ,ಪೂಜ್ಯರಾಗಿಯೂ ಇರುವಿರಿ! ಅದರಲ್ಲಿಯೂ ಮುಖ್ಯವಾಗಿ ರಾಮನಿಗೆ ನಿಮ್ಮಲ್ಲಿ ವಿಶೇಷವಾದ ಗೌರವವುಂ ಟು! ಆಯುಷ್ಮಂತರಾದ ನೀವು ಆತನ ಕ್ಷೇಮಲಾಭಗಳನ್ನು ವಿಚಾರಿಸಿದುದಾ ಗಿನಾನೇ ಮಹಾರಾಜನಿಗೆ ತಿಳಿಸುವೆನು, ಆದರೆ ಆತನಿಗೆ :