ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮೮ ಶ್ರೀಮದ್ರಾಮಾಯಣವು [ಚರ್ಕ, ೧೫ ಅವನು ಎಚ್ಚರಗೊಂಡೊಡನೆ ನೀವು ಇಲ್ಲಿಗೆ ಬಂದಿರುವ ವಿಷಯವನ್ನು ತಿಳಿಸು ವೆನು.”ಎಂದು ಸಮಾಧಾನವನ್ನು ಹೇಳಿ,ಬಹುಕಾಲದ ಅನುಭವವುಳ್ಳವಯೋ ವೃದ್ಧನಾದ ಆಸುಮಂತ್ರನು, ಪುನಃ ಹಿಂತಿರುಗಿದನು. ತಡೆಯಿಲ್ಲದೆ ಒಳಕ್ಕೆ ಪ್ರವೇಶಿಸಿ, ದಶರಥನು ಮಲಗಿದ್ದ ಸ್ಥಳಕ್ಕೆ ಹೋಗಿ, ಇಕ್ಷಾಕುವಂಶದ ರಾಜ ರ ವೈಭವವನ್ನು ಮನಸ್ಸಿನಲ್ಲಿ ಕೊಂಡಾಡುತ್ತ, ಅಲ್ಲಿದ್ದ ತೆರೆಯ ಹೊರಗಾಗಿ ನಿಂತು, ತನ್ನ ಕುಲಧರಕ್ಕೆ ತಕ್ಕಂತೆ ಮೊದಲು ಆತನ ಶ್ರೇಯಃಪ್ರಾತ್ಯ ನೆಯನ್ನು ಮಾಡಿ, ಮೊದಲಿನಂತೆ ಅವನನ್ನು ಸ್ತೋತ್ರಮಾಡಲಾರಂ ಭಿಸಿದನು. ( ಓ ಕಕುತ್ಸ ವಂಶಶಿಖಾಮಣೀ ! ನಿನಗೆ ಚಂದ್ರಸೂರ್ ರೂ, ರುದ್ರನೂ, ಕುಬೇರನೂ, ವರುಣನೂ, ಇಂದ್ರಾಗ್ನಿಗಳೂ ಜಯ ವನ್ನು ಕೊಡಲಿ ! ಪೂಜ್ಯವಾದ ರಾತ್ರಿಯು ಕಳೆಯಿತು ! ನಿನ್ನ ಅಪ್ಪಣೆ ಯಂತೆ ನಡೆಯಬೇಕಾದ ಕಾರವೆಲ್ಲವೂ ಸಿದ್ಧವಾಗಿರುವುದು. ಎಲೈ ರಾಜ ಶ್ರೇಷ್ಠನೆ ! ಏಳು! ಮೇಲಿನ ಕಾವ್ಯವನ್ನು ನಡೆಸು! ಬ್ರಾಹ್ಮಣರೂ, ಸೇನಾ ಧಿಪತಿಗಳೂ, ವರಕರೂ ಬಂದು ಬಾಗಿಲಲ್ಲಿ ನಿಂತು ನಿನ್ನ ದರ್ಶನಕ್ಕಾಗಿ ಕಾದಿರುವರು. ಎಲೈ ರಘುವಂಶೋತ್ತಮನೆ! ಏಳು!” ಎಂದನು ಮಂತ್ರ ನಾದ ಸುಮಂತ್ರನು, ವನು ಹೀಗೆ ಸ್ತೋತ್ರಮಾಡುತ್ತಿರುವುದನ್ನು ಕೇಳಿ ದಶರಥನು 'ಎಲೈ ಸುಮಂತ್ರನೆ: ರಾಮನನ್ನು ಕರೆತರುವಂತೆ ಈಕೆಯು ನಿನ ಗೆ ಹೇಳಿದಳಲ್ಲವೆ ? ಇನ್ನೂ ಏಕೆ ಕರೆತರಲಿಲ್ಲ ? ಇದೇನು? ನನ್ನ ಆಜ್ಞೆಯನ್ನು ಇನ್ನೂ ನೀನು ನಡೆಸದೆ ಇರುವೆ ? ಅವಳು ಹೇಳುವಾಗ ನಾನು ನಿದ್ರಿಸುತ್ತಿ ದೈನೆಂದು ತಿಳಿಯಬೇಡ! ಅವಳು ಹೇಳಿದುದನ್ನು ನಾನು ನಿಷೇಧಿಸದೇ ಇದ್ಯಾ ಗಲೇ ಅದಕ್ಕೆ ನಾನೂ ಅನುಮತಿಸಿದೆನೆಂದು ನೀನು ತಿಳಿಯಬೇಡವೆ ? ಚಿಂತೆಯಿಲ್ಲ. ಈಗಲೂ ಹೋಗಿ ರಾಮನನ್ನು ಕರೆದುಕೊಂಡು ಬಾ !” ಎಂ ದು ಆ ಸಾರಥಿಗೆ ಅಪ್ಪಣೆಮಾಡಿದನು. ಸುಮಂತ್ರನು ಆ ರಾಜಾಜ್ಞೆಯನ್ನು ಶಿರಸಾವಹಿಸಿ, ಮಿತಿಮೀರಿದ ಸಂತೋಷದಿಂದ ಆತನನ್ನು ಗೌರವಿಸಿ, ಆಸ್ಥಳವನ್ನು ಬಿಟ್ಟು ಹೊರಟುಬರುತಿದ್ದನು.ಅಷ್ಟರಲ್ಲಿ ಬೀದಿಗಳೆಲ್ಲವೂ ಈ ಜಪತಾಕೆಗಳಿಂದ ಅಲಂಕರಿಸಲ್ಪಟ್ಟಿದ್ದುದನ್ನು ಕಂಡು, ಸಂತೋಷದಿಂದ ಅವನ ಮೈಯ್ಯಲ್ಲಿ ರೋಮಾಂಚಗಳುಂಟಾದುವು ! ವೇಗದಿಂದ ಮುಂದೆ