ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮ ಹರ್ಗ, ೧a. ಅಯೋಧ್ಯಾಕಾಂಡವು. ನಡೆಯುತಿದನು. ದಾರಿಯಲ್ಲಿ ಪ್ರತಿಯೊಬ್ಬರೂ ರಾಮನ ಗುಣಗಳನ್ನೂ, ಆತನ ಅಭಿಷೇಕದ ಸಂಭ್ರಮಗಳನ್ನೂ ಹೇಳಿ ಕೊಂಡಾಡುತಿದ್ದರು. ಅವೆಲ್ಲ ವನ್ನೂ ಕೇಳಿದಾಗ, ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ. ಈ ಕೊಂಡಾಟ ಗಳನ್ನು ಕೇಳುತ್ತ ಹೊರಟು,ಕೈಲಾಸಶಿಖರದಂತೆ ಮನೋಹರವಾದ ರಾಮನ ಅರಮನೆಯ ಬಾಗಿಲನ್ನು ಸೇರಿದನು. ಅದು ಇಂದ್ರಭವನದಂತೆ ಕಾಂತಿಯು ಕವಾಗಿ, ದೊಡ್ಡ ಕದಗಳಿಂದಲೂ, ನೂರಾರು ಜಗುಲಿಗಳಿಂದಲೂ, ಅನೇಕ ಸುವರ್ ಪ್ರತಿಮೆಗಳಿಂದಲೂ ಶೋಭಿಸುತ್ತಿತ್ತು. ರತ್ನಗಳಿಂದಲ, ಹವಳಗ ಳಿಂದಲೂ ಕೆತ್ತಲ್ಪಟ್ಟ ಹೊರಬಾಗಿಲುಗಳುಳ್ಳುದಾಗಿ, ಶರತ್ಕಾಲದ ಮೇ ಫುಗಳಂತೆ ಶುಭ್ರವರವಾಗಿ ಪ್ರಕಾಶಿಸುತಿತ್ತು. ಕೇವಲ ಸುವರಮಯವಾ ದುದರಿಂದ ಮೇರುಪರತದ ಗುಹೆಯಂತೆ ರಂಜಿಸುತಿತ್ತು. ಅಲ್ಲಲ್ಲಿ ಸುವಲ್ಲಿ ಪುಷದ ಮಾಲಿಕೆಗಳನ್ನು ಮಾಡಿ ನಡುನಡುವೆ ರತ್ನಗಳನ್ನು ಸೇರಿಸಿ ಕಟ್ಟಿದ್ದರು. ಮುತ್ತು ಮೊದಲಾದ ರತ್ನ ರಾಶಿಗಳನ್ನು ಅಲ್ಲಲ್ಲಿಟ್ಟು ಅಲಂಕರಿಸಿ "ರು. ಆ ಪ್ರದೇಶವೆಲ್ಲವೂ ಅಗರುಧೂಪಗಳಿಂದ ಸುವಾಸಿತವಾಗಿ, ಫುಮ ಫುಪಿಸುತಿತ್ತು. ಮಲಯಪರೂತದ ಸಮೀಪದಲ್ಲಿ, ಚಂದನವೃಕ್ಷಗಳಿಗೆ ಜನ್ಮ ಸ್ಥಾನವಾದ ದರ್ದರವೆಂಬ ಬೆಟ್ಟದ ಶಿಖರದಂತೆ, ಆದರೆ ನಾನಾಕಡೆಗೆ ಳಿಂದಲೂ ಸುವಾಸನೆಯು ಹೊರಡುತಿತ್ತು. ಅಲ್ಲಲ್ಲಿ ಸಾರಸಪಕ್ಷಿಗಳೂ,ನವಿಲು ಗಳೂ ಇಂಪಾದ ಧ್ವನಿಯನ್ನು ಮಾಡುತಿದ್ದುವು. ಗೋಡೆಗಳಲ್ಲಿಯೂ ಕಂ ಬಗಳಲ್ಲಿಯೂ, ಅಂದವಾದ ತೋಳಗಳ ಆಕೃತಿಯು ರಚಿಸಲ್ಪಟ್ಟಿತ್ತು. ಚತು ರರಾದ ಶಿಲ್ಪಿಗಳಿಂದ ಕೆತ್ತಲ್ಪಟ್ಟ ಅನೇಕಚಿತ್ರಕಾರೈಗಳು ಅಲ್ಲಲ್ಲಿ ಶೋಭಿ ಸುತಿದ್ದುವು. ತನ್ನ ತೀವ್ರವಾದ ತೇಜಸ್ಸಿನಿಂದ ಚಂದ್ರಸೂರರಂತೆ ಪ್ರಕಾಶಿಸುತ್ತಾ, ನೋಡುವವರ ಕಣ್ಣುಗಳನ್ನೂ, ಮನಸ್ಸನ್ನೂ ತನ್ನ ಕಡೆ ಗಾಗರ್ಷಿಸಿ, ಕುಬೇರಭವನದಂತೆ ಅತ್ಯಂತಮನೋಹರವಾಗಿಯೂ, ಇಂದ್ರನ ಆರಮನೆಯಂತೆ ಕಾಂತಿವಿಶಿಷ್ಟವಾಗಿಯೂ, ಮೇರುಪರತದ ಶಿಖರದಂತೆ ಮಹೋನ್ನತವಾಗಿಯೂ, ಬಗೆಬಗೆಯ ಪಕ್ಷಿಸಮೂಹಗಳಿಂದ ಅತಿಮನೋ ಹರವಾಗಿಯೂ ಇದ್ದ ಆ ಅರಮನೆಯ ಬಾಗಿಲಲ್ಲಿ, ಅನೇಕ ಪ್ರಜೆಗಳು ಗುಂಪು ಗೂಡಿ ವಿನಯದಿಂದ ಕೈಮುಗಿದು ನಿಂತಿದ್ದರು. ಅಲ್ಲಲ್ಲಿ ಕೆಲವರು ದೇಶ