ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೯೦ ಶ್ರೀಮದ್ರಾಮಾಯಣವು {ಸರ್ಗ, ೧೫ [ಸರ್ಗ. ೧೫ ದೇಶದಿಂದ ತಂದ ಕೈಕಾಣಿಕೆಯನ್ನು ಹಿಡಿದು ನಿಂತಿದ್ದರು. ಜನರೆಲ್ಲ ರೂ ಅತ್ಯುತ್ಸಾಹದಿಂದ ರಾಮಾಭಿಷೇಕವನ್ನೇ ಇದಿರುನೋಡುತ್ತ, ಬಾಗಿ ಲಲ್ಲಿ ಕಿಕ್ಕಿರಿಸಿ ತುಂಬಿದ್ದರು. ಹೀಗೆ ಜನಭರಿತವಾಗಿ, ಮಹಾಮೇಘದಂತೆ ಗಂಭೀರವಾಗಿ, ಅತ್ಯುನ್ನತವಾಗಿ, ನಾನಾವಿಧರತ್ನಗಳಿಂದಲಂಕರಿಸಲ್ಪಟ್ಟು, ಗುಜ್ಜಾರಿಗಳೇ ಮೊದಲಾದ ಅಂತಃಪುರಸೇವಕರಿಂದಲೂ, ಅಲ್ಪ ಶರೀರವುಳ್ಳ ಕಿರಾತಜಾತಿಜನರಿಂದಲೂ ತುಂಬಿದ ಆ ಅರಮನೆಯ ಅಂದವನ್ನು ಸುಮಂತ್ರ ನು ಎವೆಮುಚ್ಚದೆ ನೋಡುತಿದ್ದನು. ಪ್ರಶಸ್ತವಾದ ಕುದುರೆಗಳಿಂದಲೂ ವಿಚಿತ್ರವಾದಮೇಲುಹೊದ್ದಿಕೆಯಿಂದ ಕೂಡಿದ ತನ್ನ ರಥವನ್ನು ಮುಂದಕ್ಕೆ ನಡೆಸಿಕೊಂಡು ಆ ಅರಮನೆಗೆ ಅಭಿಮುಖವಾಗಿ ಬಂದನು. ಅಲ್ಲಿದ್ದ ಸಮಸ್ತ ಜನರೂ ಈತನನ್ನು ಅತ್ಯಾಹಾದದಿಂದ ನೋಡುತಿದ್ದರು. ಅತಿಸಂಭ್ರಮ ದಿಂದ ಅಲ್ಲಲ್ಲಿ ಸಂಚರಿಸುತ್ತಿರುವ ಜನಸಮೂಹದಿಂದಲೂ, ಸಾಕಿದ ಮೃಗ ಗಳಿಂದಲೂ, ನವಿಲುಗಳಿಂದಲೂ ಕೂಡಿ, ಇಂದ್ರಭವನದಂತೆ ಸಂಪತ್ಸಮೃ ವ್ಯವಾದ ಆ ಅರಮನೆಯನ್ನು ಪ್ರವೇಶಿಸುವಾಗ ಪರಮಸಂತೋಷದಿಂದ ಆ ಸುಮಂತ್ರನ ಮೈಯಲ್ಲಿ ರೋಮಾಂಚವುಂಟಾಯಿತು. ಹಾಗೆಯೇ ಆತನು ಹೊರಬಾಗಿಲನ್ನು ಬಾಟಿ, ಕೈಲಾಸಪತದಂತೆ ವಿಶಾಲವಾಗಿಯೂ, ಸರಾ ಲಂಕಾರ ಭೂಷಿತಗಳಾಗಿಯೂ ಇದ್ದ ಆ ಮನೆಯ ಮೂರು ಟೈಗಳನ್ನೂ ಕಳೆದು, ಅಲ್ಲಲ್ಲಿ ಅಭಿಷೇಕಕಾಲವನ್ನು ಅತ್ಯಾತುರದಿಂದ ಇದಿರು ನೋಡುತ್ತಾ ಗುಂಪುಗೂಡಿದ ಜನಗಳನ್ನು ಒತ್ತರಿಸಿಕೊಂಡು, ರಾಮನ ಅಂತಃಪುರದ ಸಮೀಪವನ್ನು ಸೇರಿದನು. ಅಲ್ಲಿಯೂ ಅನೇಕಜನರು ರಾಮನ ಪಟ್ಟಾಭಿಷೇಕದ ವಿಷಯಗಳನ್ನೇ ಸಂತೋಷದಿಂದ ಕೊಂಡಾಡುತಿದ್ದರು. ಎಲ್ಲರ ಬಾಯಿಂದಲೂ ಈ ಮಂಗಳಕಾರದ ವಿಚಾರಗಳೇ ಹೊರಡು ತಿದ್ದುವು. ಇವೆಲ್ಲವನ್ನೂ ಸುಮಂತ್ರನು ಸಂತೋಷದಿಂದ ಕೇಳುತ್ತಾ ಇಂದ್ರಭವನದಂತೆ ನೇತ್ರಾನಂದಕರವಾಗಿ, ಮೃಗಪಕ್ಷಿಗಳ ಇಂಪಾದ ಧ್ವನಿ ಯಿಂದ ಕರ್ಣಾಹ್ಲಾದಕವಾಗಿ, ಮೇರುಪರತದ ಶಿಖರದಂತೆ ಮಹೋನ್ನತ ವಾಗಿ, ನೋಡುವವರ ಕಣ್ಣುಗಳು ಕೋರೈಸುವಂತೆ ದಿವ್ಯ ತೇಜಸ್ಸುಳ್ಳುದಾ ಗಿರುವ ಆ ಅಂತಃಪುರದ ಅಂದವನ್ನು ಎಡೆಬಿಡದೆ ನೋಡುತ್ತಿದ್ದನು. ದೇಶ