ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೪೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸರ್ಗ. ೧೬.} ಅಯೋಧ್ಯಾಕಾಂಡವು, ೩೪೦ ವಾಸಿಗಳೆಲ್ಲರೂ ಕೈಕಾಣಿಕೆಗಳೊಡನೆ ಬದ್ಧಾಂಜಲಿಗಳಾಗಿ ನಿಂತಿದ್ದರು. ಈ ಜನರು ಏರಿಬಂದ ರಥತುರಗಾದಿವಾಹನಗಳೆಲ್ಲವೂ ಕೋಟಿಕೋಟಿಸಂ ಶೈಗಳಿಂದ ದ್ವಾರದೇಶದಲ್ಲಿ ಸಾಲಾಗಿ ನಿಲ್ಲಿಸಲ್ಪಟ್ಟಿದ್ದುವು. ಮುಂಭಾಗ ದಲ್ಲಿ ಮಹಾಮೇಘದಂತೆಯೂ, ದೊಡ್ಡ ಪರತದಂತೆಯೂ ಅತ್ಯುನ್ನತವಾಗಿ, ಅಂಕುಶ ಅಡಗದ ಮಹಾಮದವುಳ್ಳುದಾಗಿ, ಇತರರಿಂದ ತಡೆಯಲಸಾ ಧ್ಯವಾದ ಮಹಾಬಲವುಳ್ಳದಾಗಿ, ಮನೋಹರವಾದ ಆಕಾರವುಳ್ಳ ಶತ್ರು ಜಯ” ವೆಂಬ ರಾಮನ ಪಟ್ಟದಾನೆಯು ನಿಲ್ಲಿಸಲ್ಪಟ್ಟಿತ್ತು. ಅಲ್ಲಲ್ಲಿ ರಾಮನಿಗೆ ಪ್ರೀತಿಪಾತ್ರರಾದ ಮಂತ್ರಿಶ್ರೇಷ್ಠರೆಲ್ಲರೂ ಚೆನ್ನಾಗಿ ಆಲಂಕರಿಸಿಕೊಂಡು ರಥಗಜ, ತುರಗಾದಿವಾಹನಗಳೊಡನೆ ಗುಂಪಾಗಿ ಸೇರಿ ನಿಂತಿದ್ದರು. ಇವೆ ಲ್ಲವನ್ನೂ ನೋಡುತ್ತಾ ಸುಮಂತ್ರನು, ಅಲ್ಲಲ್ಲಿದ್ದ ಜನರನ್ನು ಬಹುಪ್ರಯಾಸ ಬಂದೋತ್ತರಿಸಿಕೊಂಡು, ಸಕಲಸಂಪತ್ನ ಮೃದ್ಧವಾಗಿ, ದಿವ್ಯವಿಮಾನಗಳಿಂದ ಕೂಡಿದ ಅನೇಕಗೃಹಗಳುಳ್ಳದಾಗಿ, ಪ್ರತಶಿಖರದಂತೆ ಕಾಣಿಸುತಿದ್ದ ಆ ಅಂತಃಪುರದಬಾಗಿಲಿಗೆ ಬಂದನು. ಅನೇಕರತ್ರ ಸಮೂಹಗಳಿಂದ ಕೂಡಿದ ಸಮುದ್ರವನ್ನು ಪ್ರವೇಶಿಸುವ ಮಹಾಮಕರದಂತೆ ಅದರೊಳಗೆ ಪ್ರವೇಶಿಸಿ ದನು. ಇಲ್ಲಿಗೆ ಹದಿನೈದನೆಯ ಸರ್ಗವು. ... ಸುಮಂತ್ರನು ರಾಮನನ್ನು ಕರೆತಂದು ಕೈಕೇಯಿ }

  • ದಶರಥರ ಬಳಿಯಲ್ಲಿ ಬಿಟ್ಟುದು. * *

ಪೂರೈಸಂಪ್ರದಾಯಗಳೆಲ್ಲವನ್ನೂ ಚೆನ್ನಾಗಿ ಬಲ್ಲ ಆ ಸುಮಂತ್ರನು, ಅಭಿಷೇಕದರ್ಶನಾರವಾಗಿ ಬಾಗಿಲಲ್ಲಿ ನೆರೆದಿದ್ದ ಜನರನ್ನು ಒತ್ತರಿಸಿಕೊಂಡು, ರಾಮನ ಅಂತಃಪುರಸ್ಕಾರವನ್ನು ದಾಟಿ, ವಿಶೇಷವಾಗಿ ಜನರ ಗುಂಪಿಲ್ಲದ ಎರಡನೆಯ ತೊಟ್ಟಿಯನ್ನು ಸೇರಿದಾಗ, ಅಲ್ಲಿ ನಡುಪ್ರಾಯದ ಕೆಲವು ವೀರ ಪುರುಷರು, ಕತ್ತಿ, ಬಿಲ್ಲು ಮುಂತಾದ ಆಯುಧಗಳನ್ನು ಹಿಡಿದು,ಥಳಥಳಿಸು. ತಿರುವ ದಿವ್ಯಕುಂಡಲಗಳನ್ನಿಟ್ಟು, ಬಹುಜಾಗರೂಕತೆಯಿಂದ ಸಿದ್ಧರಾಗಿ ನಿಂತಿದ್ದರು. ಅವರ ಕಾಠ್ಯಶ್ರದ್ಧೆಯನ್ನು ನೋಡುವಾಗಲೇ, ಅವರಿಗೆ ರಾ ಮನಲ್ಲಿರುವ ರಾಜಭಕ್ತಿಯು ಚೆನ್ನಾಗಿ ಸ್ಪಷ್ಟವಾಗುತಿತ್ತು. ಮತ್ತು