ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೪೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩೪೪ ಶ್ರೀಮದ್ರಾಮಾಯಣವು (ಸರ್ಗ. ೧೬ ಹೊದ್ದಿಕೆಯುಳ್ಳ ಚಿನ್ನದ ಮಂಚದಮೇಲೆ ಕುಬೇರನಂತೆ ಕುಳಿತಿದ್ದನು. ಹಂದಿಯ ಮಾಂಸದಂತೆ ಕೆಂಪಾಗಿ, ಬಹಳಸುವಾಸನೆಯುಳ್ಳ ಗಂಧವನ್ನು (ಉಪವಿಷ್ಟ೦)ಉಪಾಸನಾಪೂರಕವಾಗಿ ಕುಳಿತಿರುವವನು.ಎಂದರೆ, 'ಸಹಪಾವಿಶಾ ಲಾಕ್ಷ ನಾರಾಯಣಮುಖಾಗಮತಿ' ಎಂದು ಹೇಳಲ್ಪಟ್ಟಿರುವಂತೆ, ಭಗವಾನ ಪರನಾಗಿರುವವನೆಂದರು. (ಸ್ವಲಂಕೃತಂ) ಧ್ಯಾನಾನುಕೂಲವಾದ ಅಂಜಲಿಯಿಂದ ಅಲಂಕರಿಸಲ್ಪಟ್ಟವನು. ಅಥವಾ ದಿವ್ಯಮಾಲ್ಕಾಲಂಕೃತನಾಗಿರುವನೆಂದೂ ಹೇಳ ಬಹುದು. ಇಂತಹ ರಾಮನನ್ನು (ಸೂತೋ ದದರ್ಶ) ಕೇವಲಸೂತಜಾತಿಯವ ನೊಬ್ಬನು ಕಂಡನು. ಉತ್ತಮೋತ್ತಮನೆನಿಸಿಕೊಂಡ ಪರಸ್ಪರಪನಾದ ರಾಮನು, ಅತಿನಿಕೃಷ್ಟರಲ್ಲಿ ಸೇರಿದ ಸೂತನೊಬ್ಬನಿಗೆ ದರ್ಶನವನ್ನು ಕೊಟ್ಟನೆಂದು ಭಗವಂತನ ಸೌಲಭ್ಯವೂ, ಸುಮಂತ್ರನ ಭಾಗ್ಯಾತಿಶಯವೂ ವ್ಯಂಜಿತವಾಗುವುದು. ಭೋಗ್ಯವಸ್ತುಗ ಳಲ್ಲಿ ಪ್ರಧಾನಗಳಾದ ಪ್ರಕೃ೦ದನವನಿತಾದಿಗಳ (ಹಾರ,ಚಂದನ, ಸ್ತ್ರೀಯರು ಮೊದಲಾ ದುವುಗಳ) ಯೋಗವನ್ನು ರಾಮನಿಗೆ ಹೇಳಲಾರಂಭಿಸಿ, ಅವುಗಳಲ್ಲಿ ಮೊದಲು (ಸ್ವಲಂ ಕೃತ೦) ಎಂಬುದರಿಂದ ದಿವ್ಯಮಾಲಾಯೋಗವನ್ನು ಹೇಳಿ, ಇನ್ನು ಮೇಲೆ, ದಿವ್ಯಚಂದ ವನನ್ನು ವರಿಸುವರು. (ವರಾಹುರುಧಿರಾಭೇಣ ಚಂದನೇನ ಹಂದಿಯ ರಕ್ತವು ಬಹಳ ಕೆಂಪುಬಣ್ಣವಳುದೆಂದು ಪ್ರಸಿದ್ದಿಯುಂಟು. ಮೊದಲೇ ರಕ್ತಚಂದನವೆನಿಸಿಕೊಂಡಿದ್ದು, ಕುಂಕುಮಕೇಸರಿಯ ಸಂಯೋಗದಿಂದ ಮತ್ತಷ್ಟು ಕೆಂಪಾಗಿಸಲ್ಪಟ್ಟು, ಅದರಮೇಲೆ ಸೀತಾದೇವಿಯ ಕೈಯಿಂದ ಲೇಪಿಸಲ್ಪಟ್ಟು, ಆ ಹಸ್ತಕಮಲದ ಕಾಂತಿಯಿಂದ ಮತ್ತಷ್ಟು ಕೆಂಪಾಗಿರುವುದೆಂದು ಗಮ್ಯಾರವು. ಶುಚಿನಾಚ) ಸೀತಾಕರಸ್ಪರ್ಶದಿಂದ ಪವಿತ್ರವಾದುದು. ಇಲ್ಲಿ (ಚ) ಎಂಬ ಸಮುಚ್ಚಯದಿಂದ ಆ ಕರಪ್ಪರ್ಶಸಂಜನಿತವಾದ ಶೈತಾತಿಶಯವೂ ವ್ಯಂಜಿತವಾಗುವುದು. (ಸುಗಂಧಿನಾ) ಸರಗಂಧಃ” ಎಂಬಂತೆ ಸಮ ಸ್ತಪರಿಮಳವನ್ನೂ ಹೊಂದಿರುವುದು ಶ್ರೀದೇವಿಗಸಮಾನಗುಣವಾದುದರಿಂದ,ಶ್ರೀ ಪಳಾದ ಸೀತಾದೇವಿಯ ಕರಸ್ಪರ್ಶದಿಂದ ಮಿತಿಮೀರಿದ ವಾಸನೆಯನ್ನು ಹೊರಡಿ ಸುವುದೆಂದು ಭಾವವು (ಪರಾನ್ಲೈನ)ಸಾಕ್ಷಾಲಕ್ಷಿಸರಪಳಾದ ಸೀತೆಯ ಕರಸಂ ಬಂಧದಿಂದ ಬರತಕ್ಕ ಚಂದನವು, ಸಾಕ್ಷಾತ್ಪರಸ್ವರೂಪನಾದ ರಾಮನೊಬ್ಬನಿಗೇ ಸಲ್ಲತ ಕುದೆಂದೂ ಭಾವವು, (ಚಂದನೇನ, ಅನುಲಿಪ್ತ8) 'ಚಂದನದಿಂದ (ಅನು) ಆಮೇಲೆ, ಲೇಪಿಸಲ್ಪಟ್ಟವನು” ಎಂದರೆ, ರಾಮನು ಮೊದಲು ಸೀತೆಗೆ ಗಂಧವನ್ನು ಪೂಸಿ, ಅಮೇಲೆ ಅವಳ ಕೈಯಿಂದ ತಾನೂ ಲೇಪಿಸಲ್ಪಟ್ಟನೆಂಬ ಕ್ರಮವು ಸೂಚಿತವಾಗುವುದು. ಇನ್ನು ಮೇಲೆ ಅಪ್ರಾಕೃತಯೋಗವು ಹೇಳಲ್ಪಡುವುದು. (ತಯಾ ಪಾರ್ಶ್ವತಶ್ಯಾಪಿ)