ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೫೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪೦ ೪o ಶ್ರೀಮದ್ರಾಮಾಯಣವು [ಸರ್ಗ, ೧೬ಟಿತು. ಲಕ್ಷಣನು ರಾಮನ ಹಿಂದೆ ಕುಳಿತು, ಒಂದು ಕೈಯ್ಯಲ್ಲಿ ಛತ್ರವನ್ನೂ, ಮತ್ತೊಂದು ಕೈಯಲ್ಲಿ ಚಾಮರವನ್ನೂ ಹಿಡಿದು ತನ್ನಣ್ಣನನ್ನು ಸೇವಿಸು ತಿದ್ದನು. ಈ ರಥವು ವೇಗದಿಂದ ಹೊರಟುಬರುವಾಗ, ದಾರಿಯಲ್ಲಿ ಕಿಕ್ಕಿರಿಸಿ ನಿಂತಿದ್ದ ಜನಗಳು ಒಬ್ಬರಮೇಲೊಬ್ಬರು ಬಿದ್ದು ಕೋಲಾಹಲ ಧ್ವನಿಯನ್ನು ಮಾಡುತ್ತ ಆ ರಥವನ್ನೇ ಹಿಂಬಾಲಿಸಿ ಹೋಗುತ್ತಿದ್ದರು. ಉತ್ತಮಜಾತಿಯಲ್ಲಿ ಹುಟ್ಟಿದ ಕುದುರೆಗಳೂ, ಬೆಟ್ಟದಂತೆ ಮಹೋನ್ನ ತಗಳಾದ ಆನೆಗಳೂ, ಸಾವಿರಲೆಕ್ಕದಿಂದ ಆ ರಥವನ್ನು ಹಿಂಬಾಲಿಸಿ ಬರುತ್ತಿದ್ದುವು. ರಥದ ಮುಂಭಾಗದಲ್ಲಿ ಅನೇಕವೀರಭಟರು ಕತ್ತಿಗಳನ್ನೂ, ಬಿಲ್ಲುಗಳನ್ನೂ ಹಿಡಿದು, ಚಂದನಾದಿಗಳಿಂದ ಅಲಂಕರಿಸಿಕೊಂಡು, ರಾಮನ ಶ್ರೇಯಸ್ಸನ್ನೇ ಕೋರುತ್ತ ಸಿದ್ಧರಾಗಿ ಬರುತಿದ್ದರು. ಅನೇಕಮಂಗಳವಾದ್ಯ ಧ್ವನಿಗಳೂ, ಹೊಗಳುಭಟರ ಸ್ತುತಿವಾಕ್ಯಗಳೂ, ವೀರಭಟರ ಸಿಂಹನಾದ ಗಳೂ, ದಾರಿಯಲ್ಲಿ ದಿಕ್ಕುಗಳೆಲ್ಲವನ್ನೂ ತುಂಬುತ್ತಿದ್ದುವು. ರಾಮನು ಬರುತ್ತಿರು ವಾಗ, ಪುರಸ್ತ್ರೀಯರೆಲ್ಲರೂ ತಮ್ಮ ತಮ್ಮ ಮನೆಯ ಉಪ್ಪರಿಗೆಗಳನ್ನೇರಿ ಸಾಲಂಕಾರಭೂಷಿತರಾಗಿ ಗವಾಕ್ಷಗಳಲ್ಲಿ ನಿಂತು, ಪುಷ್ಟಗಳನ್ನೆ ರಚುತಿದ್ದ ರು. ಆಸ್ತಿಯರಲ್ಲಿ ಕೆಲವರು ಮನೆಯ ಬಾಗಿಲುಗಳಲ್ಲಿಯೂ, ಮತ್ತೆ ಕೆಲವರು ಉಪ್ಪರಿಗೆಯಮೇಲೂ ನಿಂತು ಆತನನ್ನು ಸ್ತುತಿಸಲಾರಂಭಿಸಿದರು. ಆವ ರಲ್ಲಿ ಕೆಲವರು ( ಎಲೈ ರಾಮನೇ ! ನಿನ್ನ ಈಗಿನ ಜಯಪ್ರಯಾಣವು ಸಾ ರಕವಾಗಲಿ ! ನಿನ್ನ ತಾಯಿಯಾದ ಕೌಸಲ್ಯಯು ಇನ್ನು ಸ್ವಲ್ಪ ಕಾಲದೊ ಳಗಾಗಿಯೇ ದಶರಥನಿಂದ ರಾಜ್ಯಾಧಿಕಾರವನ್ನು ಹೊಂದಿ ಬಂದ ನಿನ ನು ನೋಡಿ, ಸಂತೋಷಪಡುವುದರಲ್ಲಿ ಸಂದೇಹವಿಲ್ಲ ” ಎಂದು ಕೊಂಡಾ ಡುತ್ತಿದ್ದರು. ಮತ್ತೆ ಕೆಲವರು, ಸ್ತ್ರೀಯರಲ್ಲಿ ರತ್ನ ಪ್ರಾಯಳಾದ ಸೀತೆ ಯನ್ನು ದ್ವೇಶಿಸಿ ಭಲೆ ,ಸೀತೆಯು ಪೂರಜನ್ಮದಲ್ಲಿ ಯಾವ ಮಹಾತಪಸ್ಸ ನ್ನು ಮಾಡಿದ್ದಳೋ! ಚಂದ್ರನೊಡಗೂಡಿದ ರೋಹಿಣಿಯಂತೆ, ರಾಮನ ಕೈ ಹಿಡಿದು, ಆತನಿಗೆ ಪ್ರಾಣಪ್ರಿಯಳೆನಿಸಿಕೊಂಡಿರುವ ಈಕೆಗಿಂತಲೂ ಲೋ ಕದಲ್ಲಿ ಉತ್ತಮ ಸ್ತ್ರೀಯರು ಬೇರೊಬ್ಬರುಂಟೆ? ಆಃ! ಅವಳ ಭಾಗ್ಯವೇ ಭಾಗ್ಯ ವು?” ಎಂದು ಕೊಂಡಾಡುತಿದ್ದರು. ಇದಲ್ಲದೆ ದಾರಿಯಲ್ಲಿ ನೆರೆದಿದ್ದ ಪರ