ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೫೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸನ: M] ಅಯೋಧ್ಯಾಕಾಂಡವು, ೪೫ ವಾಸಿಗಳೂ, ದೇಶವಾಸಿಗಳೂ ಸಂತೋಷದಿಂದ ತನ್ನ ವಿಷಯವನ್ನ ಹೇಳುತ್ತ, ಭಲೆ ! ! ಈಗ ರಾಮನು ದಶರಥನ ಅನುಗ್ರಹದಿಂದ ಸಾಮಾಜ್ಯಲಕ್ಷ್ಮಿಯನ್ನು ಕೈ ಹಿಡಿಯುವುದಕ್ಕಾಗಿ ಹೋಗುತ್ತಿದ್ದವನು ಈಗಲೀಗ ನಮ್ಮ ಕೋರಿಕೆಗಳೆಲ್ಲವೂ ಕೈಗೂಡಿದಂತಾಯಿತು. ಇನ್ನು ರಾಮ ನೇ ನಮಗೆ ಒಡೆಯನಾಗುವನು. ರಾಮನು ಸಮಸ್ತ ರಾಜ್ಯಭಾರವನ್ನು ವಹಿಸುವನೆಂಬುದಕ್ಕಿಂತಲೂ ಪ್ರಜೆಗಳಿಗೆ ಬೇರೆ ಲಾಭವೇನುಂಟು ? ಈತನು ರಾಜ್ಯಕ್ಕೆ ಬಂದಮೇಲೆ ಲೋಕದಲ್ಲಿ ಯಾರಿಗೂ, ಯಾವಾಗಲೂ, ಯಾವು ದೊಂದುದುಃಖವೂ ಉಂಟಾಗಲಾರದು” ಎಂದು ಶ್ಲಾಘಿಸುತ್ತಿದ್ದರು. ರಾಮನೂ ತನ್ನ ಸ್ತುತಿವಾಕ್ಯಗಳನ್ನು ಕೇಳುತ್ತ, ರಥದಮೇಲೆ ಕುಳಿತು ಬರು ತಿದ್ದನು. ಆನೆಕುದುರೆಗಳ ಕೂಗಿನಿಂದಲೂ, ಜಯಘೋಷವನ್ನು ಮಾಡು ತಿರುವ ಹೊಗಳುಭಟರ ಧ್ವನಿಯಿಂದಲೂ, ಚತುರರಾದ ವಾದ್ಯಗಾರರಿಂದ ನುಡಿಸಲ್ಪಡುವ ವಾದ್ಯಧ್ವನಿಗಳಿಂದಲೂ, ದಿಕ್ಕುಗಳೆಲ್ಲವೂ ತಂಬುತ್ತಿರಲು ಮಸ್ತಜನಗಳಿಂದ ಸ್ತೋತ್ರಮಾಡಲ್ಪಡುತ್ತಾ, ಕುಬೇರನಂತೆ ಬಹುವೆ. ಭವದಿಂದ ಬರುತ್ತಿದ್ದನು. ಆನೆಗಳಿಂದಲೂ, ಕುದುರೆಗಳಿಂದಲೂ ರಥಗಳಿಂ ದಲೂ ಅನೇಕಜನಸಮೂಹದಿಂದಲೂ ಸಿಬಿಡವಾಗಿ, ರತ್ನರಾಶಿಗಳಿಂದ ಕೂಡಿದ ಅಂಗಡಿಯ ಸಾಲುಗಳಿಂದ ಅತಿಮನೋಹರವಾಗಿದ್ದ ರಾಜಬೀರಿ ಯನ್ನು ಸೇರಿದನು. ಇಲ್ಲಿಗೆ ಹದಿನಾರನೆಯ ಸರ್ಗವು. --++ರಾಮನು ದಶರಥನಬಳಿಗೆ ಬಂದುದು, 4w ರಾಮನು ಹೀಗೆ ರಥವನ್ನೇರಿ, ತನ್ನ ಮಿತ್ರರೆಲ್ಲರೂ ಸಂತೋಷದಿಂದ ತನ್ನನ್ನು ಸುತ್ತಿಬರಲು, ಪುರವೀಧಿಯನ್ನು ಪ್ರವೇಶಿಸುವಷ್ಟರಲ್ಲಿ ಬೀದಿಬೀದಿ ಗಳಲ್ಲಿ ಧ್ವಜಪತಾಕೆಗಳು ಏರಿಸಲ್ಪಟ್ಟಿದ್ದವು. ಅಲ್ಲಲ್ಲಿ ಅಗರುಧೂಪಗಳು ಹೊ ಗೆಯಾಡುತ್ತಿದ್ದುವು. ನಾನಾಜಾತಿಯ ಜನರು ಬಂದು ಗುಂಪುಗೂಡಿದ್ದರು. ಶರಫುದಂತೆ ಬಿಳುಪಾದ ಉಪ್ಪರಿಗೆಯ ಮನೆಗಳು ನೇತ್ರಾವಂಕ ವನ್ನುಂಟುಮಾಡುತ್ತಿದ್ದುವು. ಅದರಲ್ಲಿಯೂ ಆಗ ರಾಮನು ಬರುವನೆ ಬುದಕ್ಕಾಗಿ, ಅಗರುಚಂದಗಳೆ, ಮುಂತಾದ ಸುಗಂಧದ್ರವ್ಯಗಳ ಥ' 26