ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪a.. ಸರ್ಗ, ೧೬.] ಅಯೋಧ್ಯಾಕಾಂಡವು. ವರೆಗೆ ಮಾಡಿದುದೇ ಸಾಕು ! ಆತನು ಅಭಿಷಿಕ್ತನಾಗಿ ಹಿಂತಿರುಗಿ ಬರುವುದು ನ್ನು ಮನಸ್ಸಷ್ಟಿಯಾಗುವವರೆಗೆ ಕಣ್ಣಾರೆ ಕಂಡು, ಆಮೇಲೆ ನಾವು ಇತರ ಕಾಠ್ಯಗಳಿಗೆ ಹೋಗಬೇಕು. ರಾಮನ ರಾಜ್ಯಾಭಿಷೇಕಕ್ಕಿಂತಲೂ ನಮಗೆ ಪ್ರಿಯವಾದುದು ಬೇರೆ ಯಾವುದೂ ಇಲ್ಲ” ಎಂಬಿವೇ ಮೊದಲಾಗಿ ನಾನಾವಿಧ ಪ್ರಿಯವಾಕ್ಯಗಳನ್ನಾಡುತಿದ್ದರು. ರಾಮನು ಬಹಳ ಗಂಭೀರ ಸ್ವಭಾವವುಳ್ಳವನಾದುದರಿಂದ, ಈ ಸ್ತುತಿವಾಕ್ಯಗಳೆಲ್ಲವೂ ಚೆನ್ನಾಗಿ ತನ್ನ ಕಿವಿಗೆ ಬಿದ್ದಿದ್ದರೂ, ಕೇಳಿಯೂ ಕೇಳದಂತೆ ಉದಾಸೀನನಾಗಿ ಮುಂದೆಮುಂ ದ ದಾಟಿ ಹೋಗುತ್ತಿದ್ಮನು ಆತನು ಕಣ್ಮರೆಯಾಗಿ ಹೊರಟುಹೋದರೂ, ಅಲ್ಲಿದ್ದ ಜನರಲ್ಲಿ ಒಬ್ಬರಾದರೂ, ಆತನ ಮೋಹನಾಕಾರದಲ್ಲಿ ನೆಟ್ಟ ದೃಷ್ಟಿ ಯನ್ನಾಗಲಿ, ಮನಸ್ಸನ್ನಾಗಲಿ ಹಿಂತಿರುಗಿಸಿಕೊಳ್ಳಲಾರದೆ, ಆತನು ಹೋ ದ ದಾರಿಯನ್ನೇ ನೋಡುತ್ತಿದ್ದರು. * ಯಾವ ಮನುಷ್ಯನು ರಾಮನನು, ನೋಡಿದುದಿಲ್ಲವೋ, ಯಾವನು ರಾಮನ ಕಣ್ಣಿಗೆ ಗೋಚರಿಸಿಲ್ಲವೋ ಅಂತ ಕಾಮುಷ್ಟಿ ಕಭೋಗಗಳೇ ಸಾಕು! ಅಥವಾ, ಪರಪುರುಷಾರ ಸಾಧಕಗಳಾದ ಜಪ ಹೋಮಧ್ಯಾನಾದಿಗಳೂ ಸಾಕು! ಅವಾವುವೂ ಪ್ರಯೋಜನಕರಗಳಲ್ಲ, ಕಾಮ್ಯಗಳಾದ ಇವೆಲ್ಲವನ್ನೂ ಬಿಟ್ಟು, ಪರಮಾತ್ಮ ಪ್ರಾಪ್ತಿಹೇತುವಾದ ರಾಮಭಕ್ತಿಯೆಂಬ ಪ್ರಪತ್ತಿ ಯೊಂದನ್ನೇ ನಾವು ಆಶ್ರಯಿಸುವೆನೆದು ಭಾವವು ( ಗೋವಿಂದರಾಜರು.) * ಇಲ್ಲಿಯ ರಾಮಂ ನವಶ್ಚಿತ ಯಂಡ ರಾಮೋ ನಪಶ್ಯತಿ | ನಿಂದಿತಸವಸೇ ಲೈಕೇ ಸ್ನಾತ್ಕಾ ಪೈನಂ ವಿಗರ್ಹತೆ ||”ಎಂದು ಮೂಲವು. ಇದರಲ್ಲಿರುವ ಅರ್ಥಸ್ತಾ ರಸ್ಯಗಳೇನೆಂದರೆ:-(ಯ: ಯಾವನು,(ರಾಮಂಚ) ನೋಡುವಾಗಲೇ ಯಾವನು ತನ್ನ ಸೌಂದಯ್ಯಾಶಯವೆಂಬ ಅಮೃತಸರಸ್ಸಿನಲ್ಲಿ ಜನರ ಮನಸ್ಸನ್ನು ಮುಳುಗಿಸಿಬಿಡುವನೋ, ಅಂತಹ ರಾಮನನ್ನೂ ಕೂಡ (ನ ಪಶ್ವೇತ) ನೋಡುವುದಿಲ್ಲವೊ : ಒಂದುವೇಳೆ ಆತ ನನ್ನು ಸ್ತುತಿಸುವುದೂ, ಆತನೊಡನೆ ಸಲ್ಲಾಪಮಾಡುವುದೂ, ಅವನನ್ನು ಸತ್ಕರಿಸುವ ದೂ, ತನಗೆ ಪ್ರಾಪ್ತವಲ್ಲದಿದ್ದರೂ, ಕಣ್ಣಿಂದಲಾದರೂ ಯಾವನು ನೋಡದಿರುವನೋ ಅಂತವನೆಂದು ಭಾವವು. (ಯಂಚ ರಾಮೋ ನಪಶ್ಯತಿ) ಯಾವನನ್ನು ರಾಮನೂ ನೋಡುವುದಿಲ್ಲವೋ, ಎಂದರೆ, ತನಗೆ ಅಬಿಮುಖನಾದ ಮನುಷ್ಯನನ್ನೇ ಭಗವಂತನು ಕಟಾಕ್ಷಿಸಿ ಉದ್ಧರಿಸುವವನಾದುದರಿಂದ, ಯಾವನು ಆತನಿಗೆ ಅಭಿಮುಖನಾಗಿ ಶರಣಾ ಗತಿಯನ್ನು ಮಾಡುವುದಿಲ್ಲವೋ,ಅಂತವನನ್ನು ಆತನೂ ನೋಡುವುದಿಲ್ಲವೆಂದು ಸೂಚಿ