ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೫೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


1: Naa ಶ್ರೀಮದ್ರಾಮಾಯಣವು [ಸರ್ಗ' ೧೮. ಮೊದಲು ತಂದೆಯ ಪಾದಗಳಿಗೆ ನಮಸ್ಕರಿಸಿ, ಆಮೇಲೆ ಕೈಕೇಯಿಗೂ ನಮಸ್ಕರಿಸಿದನು. ತಡೆಯಲಾರದ ದುಃಖದಿಂದ ದಶರಥನು ಕಣ್ಣೀರನ್ನು ಸುರಿಸುತ್ತ, ರಾಮಾ !” ಎಂದು ಕೂಗಿ, ಆತನನ್ನು ನೋಡಲಾರದೆಯೂ, ಆತನಿಗೆ ಚೆನ್ನಾಗಿ ಮುಖಕೊಟ್ಟು ಮಾತಾಡಲಾರದೆಯೂ, ಪರಿತಪಿಸುತಿ ಹೃನು. ದಶರಥನು ಹೀಗೆ ದುಃಖದಿಂದ ಕೊರಗುತಿದ್ದುದನ್ನು ರಾಮನು ಹಿಂದೆ ಯಾವಾಗಲೂ ನೋಡಿದವನಲ್ಲ ಆತನ ಭಯಂಕರವಾದ ಈ ದುರ ವಸ್ಥೆಯನ್ನು ನೋಡಿದೊಡನೆ, ಸರ್ಪದಮೇಲೆ ಕಾಲಿಟ್ಟವನಂತೆ ರಾಮನು ಬೆಚ್ಚಿ ಬಿದ್ದನು. ಆಗ ದಶರಥನಿಗಿದ್ದ ದುರವಸ್ಥೆಯನ್ನು ಕೇಳಬೇಕೆ ? ಆತನ ಇಂದ್ರಿಯಗಳೊಂದಾದರೂ ಸ್ಪುಟವಾಗಿರಲಿಲ್ಲ ! ದೇಹವೆಲ್ಲವೂ ದುಃಖದಿಂದ ಬೆಂದು ಕೃಶವಾ ಗಿಹೋಗಿದ್ದುವು. ಆತನ ಮನಸೂ ಒಂದು ಸಿಮಿತವಾಗಿರ ಲಿಲ್ಲ. ಆಗಾಗ ನಿಟ್ಟುಸಿರನ್ನು ಬಿಡುತ್ತಿದ್ದನು. ಸ್ವಭಾವಗಂಭೀರವಾಗಿದ್ದು ಇದಕ್ಕಿದ್ದ ಹಾಗೆ ಕಲಗಿಹೋದ ಮಹಾಸಾಗರದಂತೆಯೂ, ಗ್ರಹಣಹಿಡಿದ ಸೂನಂತೆಯೂ, ಸುಳ್ಳಾಡಿ ಸಿಕ್ಕಿಬಿದ್ದ ಮಹರ್ಷಿಯಂತೆಯೂ, ಕಾಂತಿಹೀ ನನಾದ ಆತನು, ಎಂದೂ ಇಲ್ಲದ ಆ ದುರವಸೆಯನ್ನು ಹೊಂದಿ ದುಃಖದಿಂದ ತಪ್ಪಳಿಸುತ್ತಿರುವುದನ್ನು ನೋಡಿ, ರಾಮನೂ ಧೈತ್ಯಗುಂದಿದನು. ಪರಕಾ ಲದಲ್ಲಿ ಉಲ್ಲೋಲಕಲ್ಲೋಲವಾಗಿ ಕದಲಿಹೋದ ಸಮುದ್ರದಂತೆ ಆತನ ಮ ನನ್ನೂ ಕದಲಿತು. ತಂದೆಯ ಕ್ಷೇಮವನ್ನು ಯಾವಾಗಲೂ ಮನಸ್ಸಿನಲ್ಲಿ ಚಿಂತಿ ಸುತ್ತಿರುವ ಈ ರಾಮನು, ತನ್ನ ಮನಸ್ಸಿನಲ್ಲಿ ತಾನುಆಃ ಇದೇನು?ತಂದೆಯು ನನ್ನನ್ನು ಎಂದಿನಂತೆ ಪ್ರೀತಿಪೂಲ್ವಿಕವಾಗಿ ಮಾತಾಡಿಸದಿರುವನಲ್ಲಾ! ಈತನು ಹಿಂದೆ ಯಾವಾಗಲೂ ನನ್ನ ವಿಷಯದಲ್ಲಿ ಹೀಗಿದ್ದವನಲ್ಲ' ಕಾರಣಾಂತರಗಳಿಂ ದ ಈತನಿಗೆ ಎಷ್ಮೆಕೋಪವುಂಟಾಗಿದ್ದರೂ, ನನ್ನನ್ನು ಕಂಡೊಡನೆ ಹರ್ಷ ಪರವಶನಾಗಿ ಕೋಪವನ್ನು ಮರೆತುಬಿಡುತ್ತಿದ್ದನು. ಈಗ ನನ್ನ ನ್ನು ಕಂಡು, ಈ ತನು ಮತ್ತಷ್ಟು ದುಃಖಿಸುವುದಕ್ಕೆ ಕಾರಣವೇನು?” ಎಂದು ಸ್ವಲ್ಪ ಕಾಲದವ ರೆಗೆ ಚಿಂತಿಸುತ್ತಿದ್ದನು. ದುಃಖದಿಂದ ರಾಮನ ಮುಖವು ಬಿಳುಪೇರಿತು ! ಕೊನೆಗೆ ಕೈಕೇಯಿಯನ್ನು ನೋಡಿ ಆಕೆಗೆ ನಮಸ್ಕರಿಸಿ:ಎಲೆಮಾತೆ! ಇದೇನು? ನಾನು ತಂದೆಯ ವಿಷಯದಲ್ಲಿ ಯಾವ ಅಪರಾಧವನ್ನು ಮಾಡಿದೆನು? ನಾನು