ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

m ಶ್ರೀಮದ್ರಾಮಾಯಣನ ಕರ್ಗ೧೮ ಪರೆಯಾಗಿ,ರಾಮನನ್ನು ಕುರಿತು ಎಲೆರಾಮನೆ! ಈಗ ರಾಜನಿಗೆ ವ್ಯಸ ಕಪೂಇಲ್ಲ; ಕೋಪವೂ ಇಲ್ಲ; ಆತನ ಮನಸ್ಸಿನಲ್ಲಿ ಏನೋ ಒಂದು ಉದ್ದೇ ಶವಿರುವುದು. ಅದು ನನಗೆ ಅಪ್ರಿಯವಾದ ಏಷಯವಾದುದರಿಂದ, ನಿನ್ನ ಭಯಕ್ಕಾಗಿ ಅದನ್ನು ಹೇಳದೆ ಬಚ್ಚಿಟ್ಟುಕೊಂಡಿರುವನು, ಪ್ರಿಯಪತ್ರ ನಾದ ನಿನ್ನೊಡನೆ ಅದನ್ನು ಹೇಳುವುದಕ್ಕೆ ಅವನಿಗೆ ಬಾಯಿಬರಲಿಲ್ಲ ವೆಂದು ತೋರುತ್ತಿದೆ. ನೀನು ಅದನ್ನು ಅವಶ್ಯವಾಗಿ ನಡೆಸುವೆನೆಂದು ಭರ ವಸವನ್ನು ಕೊಟ್ಟರೆ, ಆಗ ದೈತ್ಯವಾಗಿ ತಿಳಿಸಬಹುದು. ಈತನು ಹಿಂದೆ ನನಗೆ ಇವುವಿಷಯಗಳಲ್ಲಿ ಸತ್ಯಮಾಡಿಕೊಟ್ಟಿರುವರು. ಇವನು ಪೂತ್ವದಲ್ಲಿ ನನಗೆ ಎರಡುವರೆಗಳನ್ನು ಕೊಟ್ಟಿದ್ದನು. ಅವುಗಳನ್ನು ಪಯೋಗಿಸಿಕೊಳ್ಳುವುದಕ್ಕೆ ಇದು ನನಗೆ ಒಳ್ಳೆ ಸಮಯವಾಗಿದೆ. ಮೊದಲು ಇವನು ನನ್ನನ್ನು ಬಹಳವಾ ಗಿ ಮನ್ನಿಸಿ, ಅಭಯಕೊಟ್ಟು, ಈಗ ನಾನು ಆ ವರಗಳನ್ನು ಕೇಳಿದುದಕ್ಕಾಗಿ 'ಪಶ್ಚಾತ್ತಾಪಪಟ್ಟು, ಅಜ್ಜರಂತೆ ದುಃಖಿಸುತ್ತಿರುವನು.ಕ್ಷತ್ರಿಯಶ್ರೇಷ್ಟನಾದ ಈತನು ಮೊದಲು ನನಗೆ ವರವನ್ನು ಕೊಡುವುದಾಗಿ ಮಾತುಕೊಟ್ಟು, ಪ್ರವಾಹವು ಹೋದಮೇಲೆ ಸೇತುವನ್ನು ಕಟ್ಟುವವರಂತೆ, ಅದನ್ನು ತಪ್ಪಿಸಿ ಕೊಳ್ಳುವುದಕ್ಕೆ ಈಗ ನಿರರಕಗಳಾದ ಉಪಾಯಗಳನ್ನು ಹುಡುಕುತ್ತಿರು ವನು. ಸತ್ಯವೇ ಸಮಸ್ತಧರಗಳಿಗೂ ಮೂಲಾಧಾರವೆಂಬುದನ್ನು ವಿವೇಕ ವುಳ್ಳವರು ಯಾರುತಾನೇ ಒಪ್ಪಿಕೊಳ್ಳಲಾರರು? ಆದುದರಿಂದ ಇತನು ನಿನ್ನ ಮೇಲಿನ ವಾತ್ಸಲ್ಯದಿಂದ ನನಗೆ ಪ್ರತಿಕೂಲವಾಗಿ, ಸತ್ಯವನ್ನು ಬಿಡುವ ಪ್ರಯತ್ನದಲ್ಲಿರುವ ಹಾಗಿದೆ. ಆತನ ಸತ್ಯಕ್ಕೆ ಲೋಪ ಬಾರದಂತೆ ನೋಡಿ ಕೊಳ್ಳುವ ಭಾರವು ನಿನ್ನ ದಾಗಿದೆ. ನಿನಗೆ ಹಿತವಾಗಲಿ, ಅಥವಾ ಆಹಿತವಾಗ ರಿ, ಈಗ ರಾಜನು ಯಾವ ಕೆಲಸವನ್ನು ಹೇಳಿದರೂ ನೀನು ತಪ್ಪದೆ ನಡೆಸುವು ದಾದರೆ, ಮುಂದಿನ ವಿಷಯವನ್ನು ನಾನೇ ತಿಳಿಸುವೆನು. ರಾಜನು ಹೇಳಿದ ರಾತನ್ನು ನೀನು ನಡೆಸುವುದಾಗಿ ಪ್ರತಿಜ್ಞೆ ಮಾಡಿಕೊಡು! ನಾನೇ ಹೇಳು ಮನು. ಈತನು ಅಂಜಿಕೆಯಿಂದ ನಿನ್ನೊಡನೆ ಹೇಳುವುದಕ್ಕೆ ಹಿಂಜರಿಯವನು.” ಎಂದಳು. ಕೈಕೇಯಿಯ ಮಾತನ್ನು ಕೇಳಿ ರಾಮನು ಮನಸ್ಸಿನಲ್ಲಿ ಆತ್ಮ Hಯಿಂದ ಸಂಕಟಪಡುತ್ತಾ; ಭಾಜನ ಮುಂದೆಯೇ ಅವಳನ್ನು ಕುರಿತು,