ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

YO ಶ್ರೀಮದ್ರಾಮಾಯಣದ [ಸರ್ಗ: ೧೯. 'ರಾಜ್ಯಭಾರವನ್ನು ವಹಿಸಿ, ಈ ಭೂಮಿಯನ್ನು ಪಾಲಿಸುತ್ತಿರಲಿ! ಸಮಸ್ತರು ಗಳಿಂದ ಸಮೃದ್ಧವಾಗಿ, ರಥ, ಗಜ, ತುರಗಾದಿ ಸೈನ್ಯ ಸಮೃದ್ಧಿಯಿಂದ ಕೂಡಿದ ಈ ರಾಷ್ಟ್ರವನ್ನು ಭರತನೇ ಅನುಭವಿಸಲಿ ! ರಾಜನಿಗೆ ನಾನು ಇದೇ ವಿಷಯವನ್ನು ತಿಳಿಸಿದಾಗ, ನಿನ್ನಲ್ಲಿರುವ ಅಸಾಧಾರಣವಾತ್ಸಲ್ಯದಿಂದ ಈತನು ನಿನ್ನನ್ನು ಬಿಟ್ಟಿರಲಾರದೆ, ದುಃಖದಿಂದ ಕಂದಿದ ಮುಖವುಳ್ಳವನಾಗಿ ನಾಚಿಕೆಯಿಂದ ನಿನ್ನ ಮುಖವನ್ನು ನೋಡಲಾರದೆ ಇರುವನು. ಈಗ ದಶರ ಥನು ನಿನಗೆ ಹೇಳಬೇಕಾದ ಆಜ್ಞೆಯೇ ಇದು ! ರಾಜಶ್ರೇಷ್ಠನೆನಿಸಿಕೊಂಡಿ ರುವ ಆತನ ಸತ್ಯಕ್ಕೆ ಲೋಪವಿಲ್ಲದಂತೆ ಮಾಡು.” ಎಂದಳು. ಹೀಗೆ ಕೈಕೇ ಯಿಯ ಕ್ರೂರವಾಕ್ಯವನ್ನಾಡುತ್ತಿದ್ದರೂ, ರಾಮನ ಮನಸ್ಸಿನಲ್ಲಿ ದುಃಖ ವಾಗಲಿ, ವ್ಯಧೆಯಾಗಲಿ, ಸ್ವಲ್ಪವೂ ಉಂಟಾಗಲಿಲ್ಲ. ಮಹಾನುಭಾವನಾದ ಆತನ ಮುಖದಲ್ಲಿ ಯಾವುದೊಂದು ವಿಕಾರವಾಗಲಿ ಹುಟ್ಟಲಿಲ್ಲ. ಅತ್ತಲಾಗಿ ದಶರಥನು ಮಹಾತ್ಮನಾದ ರಾಮನ ಧೈಯ್ಯಸಾಹಸಗಳನ್ನು ನೋಡಿ ಮತ್ತೆ ಷ್ಟು ವ್ಯಸನದಿಂದ ಬೇಯುತಿದ್ದನು. ಇಲ್ಲಿಗೆ ಹದಿನೆಂಟನೆಯ ಸರವು. ತಾನು ಕಾಡಿಗೆ ಹೋಗುವುದಾಗಿ ರಾಮನು * ಕೈಕೇಯಿಗೆ ಹೇಳಿದುದು, }+++ ಶತ್ರುನಾಶಕನಾದ ರಾಮನು, ಮೃತ್ಯುವಿನಂತೆ ಅತಿಕ್ರೂರವಾದ ಈ ಮಾತನ್ನು ಕೇಳಿದರೂ, ಮನಸ್ಸಿನಲ್ಲಿ ಸ್ವಲ್ಪವಾದರೂ ವ್ಯಸನವನ್ನು ತಾಳದೆ ಉಲ್ಲಾಸದಿಂದ ಕೈಕೇಯಿಯನ್ನು ನೋಡಿ'ಎಲೆ ತಾಯಿ!ಅದಕ್ಕೆ ತಡೆಯೇನು? ಈ ಅಲ್ಪವಿಚಾರಕ್ಕಾಗಿ ಇಷ್ಟು ವ್ಯಸನವೇಕೆ? ಈ ರಾಜ್ಯವನ್ನು ಭರತನೇ ಅನು ಭವಿಸಲಿ! ತಂದೆಯು ನಿನಗೆ ಪ್ರತಿಜ್ಞೆ ಮಾಡಿಕೊಟ್ಟಿರುವಂತೆಯೇ ನಡೆಸಲಿ! ನಾನು ಜಲಾವಲ್ಕಲಗಳನ್ನು ಧರಿಸಿ ಕಾಡಿಗೆ ಹೋಗುವೆನು! ಅವೆಲ್ಲವೂ' ಹಾಗಿ ರಲಿ!ನಮ್ಮ ತಂದೆಯು ಈಗ ನನ್ನೊಡನೆ ಎಂದಿನಂತೆ ಸುಮುಖವಾಗಿಮಾತಾಡ ದಿರುವುದಕ್ಕೆ ಕಾರಣವೇನು ? ಮೊದಲು ಆ ವಿಷಯವನ್ನು ಯಥಾದ್ಧವಾಗಿ ನನಗೆ ತಿಳಿಸು! ಎಲೆಜನನಿ! ನೀನು ಯಾವಭಾಗದಲ್ಲಿಯೂ ಚಿಂತಿಸಬೇಕಾದು ನಿಲ್ಲ ! ಇದೋ ! ನಿನ್ನಿ ಗಿರಾಗಿಯೇ ಹೇಳುವೆನು. ಈಗ ನಿನ್ನ ಮುಂದೆಯೇ