ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧೯.] ಅಯೋಧ್ಯಾಕಾಂಡವು. ೪೧d ನಾನು ಜಡೆಯನ್ನೂ , ನಾರುಮಡಿಗಳನ್ನೂ ಧರಿಸಿ ವನಪ್ರಯಾಣಕ್ಕೆ ಸಿದ್ಧ ನಾಗುವೆನು. ತಂದೆತಾಯಿಗಳಾದ ನಿಮ್ಮ ಮನಸ್ಸನ್ನು ಸಂತೋಷಪಡಿಸುವು ದಕ್ಕಿಂತಲೂ ನನಗೆ ಬೇರೆ ಉತ್ತಮಧರವಾವುದು ? ಯಾವಾಗಲೂ ನನಗೆ ಶ್ರೇಯಃಕಾಂಕ್ಷಿಯಾಗಿ, ಗುರುವಾಗಿ, ತಂದೆಯಾಗಿ, ಪ್ರಭುವಾಗಿರುವ ಈ ತನು ಆಜ್ಞೆಯನ್ನು ಕೊಟ್ಟ ಪಕ್ಷದಲ್ಲಿ ಯಾವ ಕಾರವನ್ನು ತಾನೇ ನಾನು ಮಾಡದಿರುವೆನು? ನೀನು ಮಾಡಿದ ಉಪಕಾರವನ್ನು ಆತನು ಎಂದಿಗೂ ಮರೆಯಲಾಗದು. ಆದರೆ ಭರತನಿಗೆ ರಾಜ್ಯಾಭಿಷೇಕಮಾಡಬೇಕೆಂಬ ವಿಷಯ ವನ್ನು, ತಂದೆಯು ತನ್ನ ಬಾಯಿಂದಲೇ ನನಗೆ ತಿಳಿಸದೆ ವ್ಯಸನಪಡುತ್ತಿರುವು ದಕ್ಕಾಗಿ ನನ್ನ ಮನಸ್ಸು ಕಳವಳಿಸುತ್ತಿರುವುದು. ಪರಮಪ್ರೀತಿಗೆ ಪಾತ್ರ ನಾದ ನನ್ನಲ್ಲಿಯೂ ಈತನು ತನ್ನ ಮನೋಭಾವವನ್ನು ಸ್ಪಷ್ಟವಾಗಿ ತಿಳಿಸದೆ ಮರೆಸಿಟೈರವನೆಂಬುದೊಂದಕ್ಕಾಗಿಯೇ ನಾನು ಸಂಕಟಪಡುವೆನು, ಎಲೆ ಜನನಿ! ನನ್ನೊಡಹುಟ್ಟಿದ ಭರತನಲ್ಲಿ ನನಗೆ ಭೇದಬುದ್ಧಿಯುಂಟೆ?ಆತನಿಗೆ ಪ್ರಿಯವಾದ ಕಾವ್ಯವನ್ನು ನಡೆಸುವುದರಲ್ಲಿ ನನಗೆ ಇತರರು ಹೇಳಬೇಕಾದು ದೇನು ? ಅವನಿಗಾಗಿ ನಾನು ರಾಜ್ಯವನ್ನಾಗಲಿ, ಧನವನ್ನಾಗಲಿ, ಸೀತೆಯ ನ್ನಾಗಲಿ, ಕೊನೆಗೆ ನನ್ನ ಪ್ರಾಣಗಳನ್ನೇ ಆಗಲಿ, ಸಂತೋಷದಿಂದ ಕೊಡಲು ಸಿದ್ಧನಾಗಿರುವೆನು. ಈ ವಿಷಯದಲ್ಲಿ ಹೆತ್ತ ತಂದೆಯೇ ನನಗೆ ಪ್ರೇರಿಸುವುದಾ ದರೆ ಹೇಳತಕ್ಕುದೇನು? ಇದಲ್ಲದೆ ಇದರಿಂದ ನಿನ್ನ ಮನಸ್ಸಿಗೂ ತೃಪ್ತಿಯು ಟಾಗಿ, ನಮ್ಮಿಬ್ಬರ ಪ್ರತಿಜ್ಞೆಯೂ ಪರಿಪಾಲಿತವಾಗುವುದಾದರೆ, ನಾನು ಅದನ್ನು ನಡೆಸದಿರುವೆನೆ ? ಇದಕ್ಕಾಗಿ ನೀವು ಸ್ವಲ್ಪವೂ ಚಿಂತಿಸಬೇಡ! ತಂದೆ ಯನ್ನು ಸಮಾಧಾನಪಡಿಸು! ಎಲೆ ಮಾತೆ ! ಆಹಾ ! ಇದೇನು ? ತಂದೆ ಯ. ಈ ದುರವಸ್ಥೆಯನ್ನು ನೋಡಿಯೂ ನೀನು ಸುಮ್ಮನಿರಬಹುದೆ ? ಆದೆ ನೋಡು ! ರಾಜಾಧಿರಾಜನೆನಿಸಿದ ಆತನು, ತಲೆಯನ್ನು ತಗ್ಗಿಸಿಕೊಂಡು ನೆಲ ವನ್ನು ನೋಡುತ್ತ ಕಣ್ಣೀರನ್ನು ಸುರಿಸುತ್ತಿರುವನು : ಈಗಲೇ ರಾಜಾಜ್ಞೆ ಯಿಂದ ಒಳ್ಳೇವೇಗವುಳ್ಳ ಕುದುರೆಗಳಮೇಲೆ ದೂತರನ್ನು ಕಳುಹಿಸಿ ಭರತ ನನ್ನು ಮಾವನ ಮನೆಯಿಂದ ಕರೆತರಿಸು. ಇದೋ? ನಾನೂ ಈಗಲೇ ದಂಡ ಕಾರಣ್ಯದ ಕಡೆಗೆ ಹೊರಡುವೆನು. ತಂದೆಯ ಮಾತನ್ನೂ ನಿರೀಕ್ಷಿಸುತ್ತಿರ