ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೬೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಶ್ರೀಮದ್ರಾಮಾಯಣವು [ಸರ್ಗ. ೧೯. ಬೇಕಾದುದಿಲ್ಲ. ನಿನ್ನ ಇಷ್ಟದಂತೆ ಹದಿನಾಲ್ಕು ವರ್ಷಗಳವರೆಗೆ ಅಲ್ಲಿಯೇ ಇದ್ದು ಬರುವೆನು.”ಎಂದನು.ರಾಮನ ಈ ಮಾತನ್ನು ಕೇಳಿ ಕೈಕೇಯಿಗೆ ಪರಮ ಸಂತೋಷವುಂಟಾಯಿತು. ಆತನನ್ನು ವನಪ್ರಯಾಣಕ್ಕಾಗಿ ಮತ್ತಷ್ಟು ತ್ವರೆ ಪಡಿಸುತ್ತ, ಗಾಮಾ! ಹಾಗೆಯೇ ಆಗಲಿ' ಈಗಲೇ ಕುದುರೆಯಮೇಲೆ ದೂತ ರನ್ನು ಕಳುಹಿಸಿ ಮಾವನ ಮನೆಯಿಂದ ಭರತನನ್ನು ಕರತರಿಸುವೆನು. ಈ ವಿಷಯದಲ್ಲಿ ನೀನೇನೂ ನನಗೆ ಹೇಳಬೇಕಾದುದಿಲ್ಲ.” ಎಂದು ಹೇಳಿ, ತನ್ನ ಮನಸ್ಸಿನಲ್ಲಿ ತಾನುಭರತನಿಗಾದರೋ ಅಣ್ಣನಲ್ಲಿ ಬಹಳಭಕ್ತಿಯಿರುವ ದು. ಅವನು ಬರುವವರೆಗೂ ರಾಮನು ಇಲ್ಲಿಯೇ ಇದ್ದು ಬಿಟ್ಟರೆ,ಇವನನ್ನು ಕಾ ಡಿಗೆ ಕಳುಹಿಸುವುದಕ್ಕೆ ಭರತನು ಎಂದಿಗೂ ಒಪ್ಪಲಾರನು. ಆಗ ಕೆಲಸವೇ ಕಡುವುದು.” ಎಂದು ಯೋಚಿಸಿ, ರಾಮನನ್ನು ಕುರಿತು ಪುನಃ-ವತ್ಸರಾಮಾ ! ಕಾಡಿಗೆ ಹೋಗುವ ವಿಷಯದಲ್ಲಿ ನೀನೇ ಅತ್ಯಾತುರದಿಂದಿರುವಾಗ, ನಿನ್ನ ಆ ಅಭಿಲಾಷೆಯನ್ನು ತಪ್ಪಿಸುವುದು ನನಗೆ ಉಚಿತವಲ್ಲ. ಆದುದರಿಂದ ನಿನ್ನ ಕೆಲ ಸದಲ್ಲಿ ನೀನು ತ್ವರಪಡು! ನೀನು ಪುರುಷಶ್ರೇಷ್ಟನೆಂದೂ, ಪಿತೃಭಕ್ತಿಯುಳ್ಳ ವನೆಂದೇ ಖ್ಯಾತಿ ಹೊಂದಿರುವೆ ! ಹಾಗಿದ್ದರೂ ಹೇಳಿದ ಕೆಲಸವನ್ನು ನೀನು ನಡೆಸುವೆಯೋ ಇಲ್ಲವೋ ಎಂದು ದಶರಥನಿಗೆ ನಿನ್ನಲ್ಲಿ ಸಂದೇಹವು ಹುಟ್ಟಿರುವುದರಿಂದ,ನಿನ್ನೊಡನೆ ಬಾಯಿಬಿಟ್ಟು ಹೇಳುವುದಕ್ಕೆ ಸಂಕೋಚಪ ಹತ್ತಿರವನು. ಈತನಿಗೆ ಬೇರೆಪಿಧವಾದ ವ್ಯಸನವಾಗಲಿ, ಕೋಪವಾಗಲಿ, ಇಲ್ಲ! ಇದಕ್ಕಾಗಿ ನೀನು ವಿಚಾರಪಡಬೇಕಾದುದಿಲ್ಲ. ನಿನ್ನಷ್ಟಕ್ಕೆ ನೀನೇ ಇತ್ತಲಾಗಿ ಕಾಡಿಗೆ ಹೊರಟರೆ, ಆಗ ಆತನ ಮನಸ್ಸಿಗೆ ಸಮಾಧಾನವಾಗು ವುದು. ಎಲೆ ವತೃನೆ! ನೀನು ಈ ಪಟ್ಟಣವನ್ನು ಬಿಟ್ಟು ಹೊರಡುವವರೆಗೂ, ಆತನ ಸ್ನಾನಭೋಜನಾದಿಗಳೊಂದನ್ನೂ ಮಾಡಿಕೊಳ್ಳಲಾರನು”ಎಂದಳು ಈಕಪಟವಾಕ್ಯವನ್ನು ಕೇಳುತಿದ್ದ ರಾಜನು “ಹಾ! ಕಷ್ಟವೆ!”ಎಂದು ನಿಟ್ಟುಸಿ ರುಬಿಟ್ಟು,ದುಃಖದಿಂದ ಕಣ್ಣೀರನ್ನು ಸುರಿಸುತ್ತ, ತಾನು ಕುಳಿತಿದ್ದ ಚಿನ್ನದ ಮಂಚದಮೇಲೆಯೇ ಪ್ರಜ್ಞೆ ತಪ್ಪಿ ಬಿದ್ದನು.ರಾಮನಾದರೋ, ಕೈಕೇಯಿಯು ಹೇಳಿದ ಕ್ರೂರವಾಕ್ಯವನ್ನೂ, ದಶರಥನು ದುಃಖವನ್ನು ತಡೆಯಲಾರದೆ ಮೂರ್ಛಬಿದ್ದುದನ್ನೂ ನೋಡಿ, ಮುಂದೆ ಬಂದು ತಂದೆಯನ್ನು ಮೇಲಕ್ಕೆತ್ತಿ,