ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ . ಶ್ರೀಮದ್ರಾಮಾಯಣವು (ಸರ್ಗ, ೧೯' ನಿಕ್ಷೇಪದಂತೆ ಕಾಪಾಡಿಟ್ಟಿದ್ದ ಆ ಎರಡುವರಗಳನ್ನು ಈಡುಮಾಡಬೇಕಾದ ಅವಶ್ಯಕವೇನಿತ್ತು? ನನ್ನಲ್ಲಿ ಇಷ್ಟು ಮಾತ್ರವಾದರೂ ಸದ್ಗುಣವಿರುವುದೆಂದು ನೀನು ಎಣಿಸಲಿಲ್ಲವೆಂದೂ ತೋರುತ್ತಿದೆ ! ಅದು ಹೇಗಾದರೂ ಹೋಗಲಿ ! ಈಗಲೇ ಕಾಡಿಗೆ ಹೊರಡೆಂದು ನೀನು ನನ್ನನ್ನು ತ್ವರೆಪಡಿಸಿದೆಯಲ್ಲವೆ? ನಿನ್ನ ಅಜ್ಞೆಯನ್ನು ತಿರಸಾವಹಿಸಿ ಈಗಲೇ ನಡೆಸುವೆನು. ಆದರೆ ನನ್ನ ಹೆತ್ತತಾಯಿ ಯಾದ ಕೌಸಲ್ಯಗೆ ಈ ವಿಷಯವನ್ನು ತಿಳಿಸಿ, ಅವಳ ಅನುಮತಿಯನ್ನು ಪಡೆದು, ನನ್ನ ಪ್ರಿಯಪತ್ನಿ ಯಾದ ಸೀತೆಯನ್ನೂ ಸಮಾಧಾನಪಡಿಸಿ ಬರ ಬೇಕೆಂದಿರುವೆನು. ಅಷ್ಟರವರೆಗೆ ನೀನು ನನ್ನನ್ನು ಬಿಟ್ಟು ಕೊಡಬೇಕು. ಆ ಮೇಲೆ ನಿಮಿಷ ಮಾತ್ರವೂ ಇಲ್ಲಿ ನಿಲ್ಲುವವನಲ್ಲ. ಒಡನೆಯೇ ದಂಡಕಾರಣ್ಯಕ್ಕೆ ಹೋಗುವೆನು. ಎಲೆ ಜನತೆ ! ಮುಖ್ಯವಾಗಿ ನಿನ್ನಲ್ಲಿ ನಾನು ಪ್ರಾರಿಸಿಕೇಳಿ ಕೊಳ್ಳಬೇಕಾದ ವಿಷಯವೊಂದಿರುವುದು ! ಭರತನು ರಾಜ್ಯವನ್ನು ವಹಿಸಿ ದಮೇಲೆ ಧರದಿಂದ ಪ್ರಜೆಗಳನ್ನು ಪಾಲಿಸುತ್ತಿರುವುದರೊಡನೆ, ವೃದ್ಧ ನಾದ ತಂದೆಗೆ ತಕ್ಕ ಶುಶ್ರತೆಗಳನ್ನೂ ಮಾಡುತ್ತಿರುವಂತೆ ನೀನು ನೋಡಿ ಕೊಳ್ಳಬೇಕು. ಪಿತೃಶುಕ್ರೂಷೆಯೆಂಬುದಕ್ಕಿಂತಲೂ ಅನಾದಿಯಾದ ಧರವು ಬೇರೊಂದೂ ಇಲ್ಲ.” ಎಂದನು. ರಾಮನುಹೇಳಿದ ಈ ಮಾತುಗಳು ಅತ್ಯ ಲಾಗಿ ದಶರಥನ ಕಿವಿಗೆ ಬಿದ್ದೊಡನೆ ಅತನಿಗೆ ದುಃಖವು ಮತ್ತಷ್ಟು ಹೆಚ್ಚಿ ತು, ತನ್ನ ಗಂಭೀರಸ್ವಭಾವಕ್ಕೆ ತಕ್ಕಂತೆ ಆತನು ಇದುವರೆಗೆ ದುಃಖವನ್ನು ಮ ರೆಸಿಕೊಂಡಿದ್ದರೂ, ರಾಮನು ಹೇಳಿದ ಆ ಮೃದುವಾಕ್ಯವನ್ನು ಕೇಳಿದಮೇ ಲೆ, ಅದನ್ನು ಮರೆಸಿಟ್ಟುಕೊಳ್ಳಲಾರದೆ, ಧಾರೆಧಾರೆಯಾಗಿ ಕಣ್ಣೀರನ್ನು ಬಿ ಟ್ಟು, ಗಟ್ಟಿಯಾಗಿ ಅಳುವುದಕ್ಟ್ರಾರಂಭಿಸಿ, ಮೂರ್ಛಬಿದ್ದನು.ಹೀಗೆದುಃಖದಿಂದ ಮೈಗಾಣದ ದಶರಥನನ್ನು ನೋಡಿ, ರಾಮನು ಆತನಬಳಿಗೆ ಬಂದು, ಮೂ ರ್ಛಹೋಗಿದ್ದ ಆತನ ಕಾಲುಗಳನ್ನು ಹಿಡಿದು ನಮಸ್ಕರಿಸಿ, ಕೈಕೇಯಿಗೂ ಪ್ರ ಣಮಮಾಡಿ, ಅವರಿಬ್ಬರನ್ನೂ ಪ್ರದಕ್ಷಿಣಮಾಡಿ, ಆಕ್ಷಣವೇ ಆ ಅಂತಃಪುರವ - “ದಂಡಕನೆಂಬವನು ಇಕ್ಷಾಕುವಿನ ಮಗನು, ಆತನ ರಾಷ್ಟ್ರಕ್ಕೂ ದಂಡಕವೆಂದು ಹೆಸರು. ಶುಕ್ರಶಾಪದಿಂದ ಆತನ ರಾಷ್ಟ್ರವೆಲ್ಲವೂ ಕ್ರಮವಾಗಿ ಅರಣ್ಯವಾಯಿತು, ಅದೇ ದಂಡಕಾರಣ್ಯವೆನಿಸುವುದು.