ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܗ ಶ್ರೀಮದ್ರಾಮಾಯಕನ [ಸರ್ಗೆ: ೧. ಪ್ರಿಯನಾಗಿ, ಗಂಭೀರಸ್ವಭಾವವನ್ನೇ ತೋರಿಸುತ್ತಿದ್ದನು. ಹೀಗೆ ಧೀರನಾದ ರಾಮನು ಹೊರಟುಬರುವಾಗ, ಉಪಚಾರಾರ್ಥವಾಗಿ ತನಗೆ ತಂದು ಹಿಡಿದ ಛತ್ರಚಾಮರಗಳನ್ನು ತಿರಸ್ಕರಿಸಿದನು. ತನ್ನನ್ನು ಹಿಂಬಾಲಿಸಿ ಬರುತಿದ್ದ ಪುರಜನ ವನ್ನೂ ಪುಜನರನ್ನೂ ಹಿಂದಕ್ಕೆ ಕಳುಹಿಸಿಬಿಟ್ಟೆನು. ಸಿದ್ದವಾದ ರಥವನ್ನೂ ಏರಲಿಲ್ಲ. ತನಗೆ ಬಂದೊದಗಿದ ಈ “ಕಾಗಿ ತಾನು ಬಃಖಿಸದಿದ್ದರೂ, ತನ್ನನ್ನು ಪ್ರೀತಿಸುತಿದ್ದ ಪ್ರಜೆಗಳಿಗೆ ಇದರಿಂದುಂಟಾಗಬಹುದಾದ ವ್ಯಸನ ವನ್ನು ಕುರಿತು ಚಿಂತಿಸುತ್ತಿದ್ದನು. ಆದರೆ ಆ ದುಃಖವನ್ನೂ ಹೊರಕ್ಕೆ ಕಾಣಿ ಸಿಕೊಳ್ಳದೆ, ಇಂದ್ರಿಯಗಳನ್ನು ನಿಗ್ರಹಿಸಿ, ವ್ಯಸನಕರವಾದ ಈ ವಿಷಯವನ್ನು ತಾಯಿಗೆ ತಿಳಿಸುವುದಕ್ಕಾಗಿ ಕೌಸಲ್ಯಯ ಅಂತಃಪುರವನ್ನು ಪ್ರವೇಶಿಸಿದನು. ರಾಮಾಭಿಷೇಕವು ನಡೆ ಯುವುದೆಂಬ ಸಂತೋಷಕ್ಕಾಗಿ ಅಲ್ಲಲ್ಲಿ ಅಲಂಕರಿಸಿ ಕೊಂಡು ಸುತ್ತಲೂ ನೆರೆದಿದ್ದ ಜನರೆಲ್ಲರೂ, ಮಹಾಢೀರನಾದ ಈ ರಾಮನ ಮುಖದಲ್ಲಿ ಯಾವ ವ್ಯಸನಚಿಕ್ಕಗಳನ್ನೂ ಕಾಣದಿದ್ದುದರಿಂದ, ಸಂತೋಷಭರಿತರಾಗಿಯೇ ಇದ್ದರು. ಶರತ್ಕಾಲದ ಚಂದ್ರನಂತೆ ಸ್ವಾಭಾವಿ ಕವಾದ ತನ್ನ ಮುಖಕಾಂತಿಯನ್ನು ಕುಂದಿಸದೆ, ಸಂತೋಷವನ್ನೇ ಕಾಣಿ ಸುತ್ತ, ತನ್ನ ಸುತ್ತಲೂ ನೆರೆದಿದ್ದ ಜನರೆಲ್ಲರನ್ನೂ, ಮೃದುವಾದ ಮಾತಿ ನಿಂದ ಮನ್ನಿಸಿ, ತಾಯಿಯಬಳಿಗೆ ಬಂದನು. ಯಶಸ್ವಿಯಾದ ಆ ರಾಮನಿಗೆ ಸ.ಖದುಃಖಗಳಲ್ಲಿಯೂ, ಆತಗುಣಗಳಲ್ಲಿಯೂ ಸಮಭಾಗಿಯಾಗಿ, ಮಹಾ ಪರಾಕ್ರವಿಯೆನಿಸಿದ ಲಕ್ಷಣವೂಕೂಡ, ತನ್ನ ವ್ಯಸನವನ್ನು ತನ್ನಲ್ಲಿಯೇ ಮರೆಸಿಕೊಂಡು,ರಾಮನನ್ನು ಹಿಂಬಾಲಿಸಿಬಂದನು. ರಾಮನು ಬಂದುನೋಡಿ ದಾಗ, ಇತ್ತಲಾಗಿ ತನ್ನ ಅಭಿಷೇಕಾರವಾಗಿ ಅಂತಃಪುರವನ್ನು ಅಲಂಕ ಕಸಿಟ್ಟುಕೊಂಡು ಸಂಭ್ರಮದಿಂದ ಕೂಡಿದ್ದ ಜನಸಮೂಹವನ್ನೂ, ಅತ್ತ ಲಾಗಿ ತನಗೆರಾಜ್ಯವು ತಪ್ಪಿ ವನವಾಸಪ್ರಾಪ್ತಿಯಾಗಿರುವುದನ್ನೂ ಚಿಂತಿಸಿ, ಆದರಿಂದ ಹೀಗೆ ಪ್ರಜೆಗಳಿಗೆ ಉತ್ಸಾಹಭಂಗವಾದುದಕ್ಕಾಗಿ ತಾನು ವ್ಯಸನ ಪಡುತ್ತಿದ್ದರೂ, ಆ ವ್ಯಸನವನ್ನು ಹೊರಕ್ಕೆ ತಿಳಿಸಿದರೆ, ತನ್ನಲ್ಲಿ ಅನುರಕ್ಕೆ ರಾಗಿರುವ ಆ ಪ್ರಜೆಗಳು ಯಾವ ಅಪಾಯಕ್ಕೆ ಗುರಿಯಾಗುವರೋ ಎಂಬ ಶಂಕೆಯಿಂದ, ಆ ವ್ಯಸನವನ್ನೂ ಕಾಣಿಸಿಕೊಳ್ಳದೆ, ಉತ್ಸಾಹವನ್ನೇ ತೋರಿ ಸುತಿದ್ದನು. ಇಲ್ಲಿಗೆ ಹತ್ತೊಂಭತ್ತನೆಯ ಸರ್ಗವು.