ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಣ ಸ್ವಾತವನ್ನು }+ ಸರ್ಗ, ೨೦. ಅಯೋಧ್ಯಾಕಾಂಡವು. ರಾಮನು ಕೌಸಲ್ಯಗೆ ತನ್ನ ವನವಾಸವೃತ್ತಾಂತವನ್ನು ) 1 ಹೇಳಿದುದು. ಆಸಿಯ ವಿಲಾಪವ ) ಪುರುಷಶ್ರೇಷ್ಠನಾದ ರಾಮನು ಕೈಕೇಯಿಗೂ, ದಶರಥನಿಗೂ ನಮಸ್ತ ರಿಸಿದಾಗ, ಅಲ್ಲಿ ಜೋಡಿಸಿದ್ದ ಕೈಗಳೊಡನೆಯೇ ಹೊರಕ್ಕೆ ಹೊರಟುಬರಿ ದನು.ಒಡನೆಯೇ ಅತ್ತಲಾಗಿ ಅಂತಃಪುರದಲ್ಲಿ ದೊಡ್ಡ ಹಾಹಾಕಾರದಿಂದ ಸ್ತ್ರೀಯರ ಗೋಳಾಟವು ಕೇಳಿಸಿತು. ಅಲ್ಲಿನ ರಾಜಪತ್ನಿ ಯರು ರಾಮನಲ್ಲಿದ್ದ ಒಂದೊಂದು ಗುಣವನ್ನೂ ಹೇಳುತ್ಯ. ಅಯ್ಯೋ ! ರಾಮನು ನಮ್ಮ ಅಂತಃ ಪುರದ ಜನರ ವಿಷಯದಲ್ಲಿ ಎಷ್ಟೋ ಪ್ರೇಮವುಳ್ಳವನಾಗಿ, ತಂದೆಯ ಅಪ್ಪ ಣೆಯನ್ನೂ ನಿರೀಕ್ಷಿಸದೆ, ನಮಗೆ ಬೇಕಾದ ಕಾವ್ಯಗಳನ್ನು ತಾನೇ ಮಾಡುತ್ತ, ನಮಗೆ ದಿಕ್ಕಾಗಿ ರಕ್ಷಿಸುತ್ತಿದ್ದನು. ಆ ರಾಮನು ಈಗ ನಮ್ಮೆಲ್ಲರನ್ನೂ ತೊರೆದು ಕಾಡಿಗೆ ಹೋಗುವನೆ ? ಈತನು ಹುಟ್ಟಿದುದುಮೊದಲು ತನ್ನ ಹೆತ್ತ ತಾಯನ್ನು ಕಂಡಂತೆಯೇ, ನಮ್ಮ ಎಷ್ಟೋ ಅಭಿಮಾನದಿಂದ ಕಾಣುತಿದ್ದನು. ನಾವು ಎಷ್ಟೇ ಬಯ್ದರೂ ಕೋಪಿಸುತ್ತಿರಲಿಲ್ಲ. ನಮಗೆ ಯಾವುದಾದರೂ ವಿಷಯದಲ್ಲಿ ಕೋಪವುಂಟಾಗಬಹುದೆಂದು ತೋರಿದರೆ, ಆ ಕಾರವನ್ನು ಅಷ್ಟಕ್ಕೆ ಬಿಟ್ಟುಬಿಡುತ್ತಿದ್ದನು. ನಮಗೆ ಕೋಪಬಂದಾಗ ತಾನೇಬಂದು ಸಮಾಧಾನಪಡಿಸುತ್ತಿದ್ದನು. ಅಂತಹ ರಾಮನು ಈಗ ದೇಶಭ ವ್ಯನಾಗಿ ಹೋಗಬೇಕೆ ? ಅಯ್ಯೋ ! ನಮ್ಮ ದಶರಥನು ಸ್ವಲ್ಪವಾದರೂ ವಿವೇಕವಿಲ್ಲದೆ ಸಮಸ್ತಜೀವರಾಶಿಳಗಗೂ ದಿಕ್ಕಾಗಿರುವ ರಾಮನನ್ನು ಕಾಡಿಗೆ ಕಳುಹಿಸಿ, ಈ ಲೋಕವನ್ನೇ ಹಾಳುಮಾಡಬೇಕೆಂದೆಣಿಸಿರುವಹಾಗಿದೆ.”ಎಂದು ಅಲ್ಲಿದ್ದ ರಾಜಸ್ತೀಯರೆಲ್ಲರೂ, ಕರುವನ್ನು ಕಾಣದ ಹಸುಗಳಂತೆ ಕಳವಳಿಸಿ, ಪತಿಯಾದ ದಶರಥನನ್ನೇ ನಿಂದಿಸುತ್ತ, ಗಟ್ಟಿಯಾಗಿ ಅಳುತಿದ್ದರು. ಹೀಗೆ ಆ ತಃಪುರದಲ್ಲಿ ದೊಡ್ಡ ಗೋಳಾಟವು ಹೊರಟುದನ್ನೂ, ತನ್ನ ನಿಂದೆಯನ್ನೂ ದಶರಥನೂ ಕೇಳುತಿದ್ದನು. ಮೊದಲೇ ಪತ್ರಶೋಕದಿಂದ ಬೇಯುತಿದ್ದ ದಶ ರಥನಿಗೆ ಮತ್ತಷ್ಟು ವ್ಯಥೆಯೂ, ನಾಚಿಕೆಯೂ ಉಂಟಾಯಿತು. ಆ ಸಂಕಟ ವನ್ನು ತಡೆಯಲಾರದೆ ಪುನಃ ಪ್ರಜ್ಞೆ ತಪ್ಪಿ, ಹಾಗೆಯೇ ಹಾಸಿಗೆಯಮೇಲೆ ಒರಗಿ ಕೊಂಡನು. ಇತ್ತಲಾಗಿ ರಾಮನೂ,ಅಂತಃಪುರದ ಕಡೆಯಿಂದ ಹೊರಟುಬಂದ 27*