ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೭೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಇಂಥ ಶ್ರೀಮದ್ರಾಮಾಯಣವು (ಸರ್ಗ, ೨೦. ಆ ಪ್ರಲಾಪಧ್ವನಿಯನ್ನು ಕೇಳಿ, ದುಃಖಿತನಾಗಿ, ಆನೆಯಂತೆ ಗಟ್ಟಿಯಾಗಿ ನಿ ಬ್ಯುಸಿರನ್ನು ಬಿಡುತ್ತ,ಅಕ್ಷಣನೊಡಗೂಡಿ ತಾಯಿಯ ಅಂತಃಪುರಕ್ಕೆ ಬಂದನು. ಬಾಗಿಲಲ್ಲಿ ದ್ವಾರಪಾಲಕರಿಗೆಲ್ಲಾ ಪ್ರಧಾನನಾಗಿಯೂ, ವೃದ್ಧನಾಗಿಯೂ, ಪೂಜ್ಯನಾಗಿಯೂ ಇದ್ದ ಒಬ್ಬ ಪುರುಷನೂ, ಅವನೊಡನೆ ಇನ್ನೂ ಅನೇಕಜನ ರೂಕುಳಿತಿರುವುದನ್ನು ಕಂಡನು. ಅವರೆಲ್ಲರೂ ರಾಮನು ಬಂದುದನ್ನು ನೋ ಡಿ, ಥಟ್ಟನೆ ಇದಿರೆದ್ದು, ಜಯಜಯಧ್ವನಿಯನ್ನು ಮಾಡುತ್ತ ಅತೀದಿಸಿದರು. ಮೊದಲನೆಯ ತೊಟ್ಟಿಯನ್ನು ದಾಟಿ ಎರಡನೆಯ ತೊಟ್ಟಿಗೆ ಹೋದನು. ಅಲ್ಲಿ ವೇದವಿತ್ತುಗಳಾಗಿಯೂ, ತನ್ನ ತಂದೆಯಾದ ದಶರಥನಿಗೆ ಬಹಳ ಪೂಜ್ಯ ರಾಗಿಯೂ ಇದ್ದ ಕೆಲವು ವೃದ್ಧ ಬ್ರಾಹ್ಮಣರನ್ನು ಕಂಡನು. ಅವರಿಗೂ ಭಕ್ತಿ ಯಿಂದ ನಮಸ್ಕರಿಸಿ, ಅಲ್ಲಿಂದ ಮುಂದೆ ಹೊರಟು, ಮೂರನೇತೊಟ್ಟಿಯನ್ನು ಸೇರಿ, ಅಲ್ಲಿ ಬಾಗಿಲು ಕಾಯುತಿದ್ದ ವೃದಯರನ್ನೂ, ಬಾಲಿಕೆಯರನ್ನೂ ಕಂಡನು. ಅವರೂ ರಾಮನನ್ನು ಕಂಡೊಡನೆ ಜಯಜಯಧ್ವನಿಯನ್ನು ಮಾಡಿ, ಒಳಗೆ ಹೋಗಿ, ರಾಮನು ಬಂದಿರುವ ವಿಷಯವನ್ನು ಕೌಸಲ್ಯಗೆ ತಿಳಿಸಿದರು. ಕೌಸಿಯಾದರೋ ಹಿಂದಿನ ರಾತ್ರಿಯೆಲ್ಲವೂ ರಾಮನ ಶ್ರೇಯೋಭಿವೃದ್ಧಿಗಾಗಿ ನಿಯಮಗಳನ್ನು ನಡೆಸುತ್ತಿದ್ದು, ಬೆಳಗಾದಮೇಲೆ ವಿಷ್ಟು ಪೂಜೆಯನ್ನು ಮಾಡಿ, ಬಿಳೀದುಕೂಲವನ್ನು ಟ್ಯು, ಮಂಗಳಾಲಂಕಾರ ವನ್ನು ಮಾಡಿಕೊಂಡು, ಬ್ರಾಹ್ಮಣರಿಂದ ಮಂತ್ರೋಕ್ತವಾಗಿ ಹೋಮವನ್ನು ಮಾಡಿಸುತಿದ್ದಳು. ರಾಮನು ಹಿಗೆ ವ್ರತನಿಷ್ಠಳಾದ ತಾಯಿಯನ್ನೂ, ಮತ್ತು ಅಲ್ಲಿ ದೇವಕಾರಕ್ಕಾಗಿ ಸಿದ್ಧಪಡಿಸಲ್ಪಟ್ಟ ಮೊಸರು, ಅಕ್ಷತೆ, ತುಪ್ಪ, ಕಡುಬು, ಹವಿಸುಗಳು, ಅರಳು, ಬಿಳಿಹೂವಿನಹಾರಗಳು, ಪಾಯಸ. ತಿಲೋದನ, ಸಮಿತ್ತು, ಪೂರಕುಂಭಗಳೇ ಮೊದಲಾದ ಸಮಸ್ತಸಾಮಗ್ರಿ ಗಳನ್ನೂ ನೋಡಿದನು. ಬಿಳೀಪಟ್ಟೆ ಮಡಿಯನ್ನು ಮೈು, ವಿಷ್ಣು ತಕ್ಷಣವನ್ನು ಮಾಡುತ್ತ, ವ್ರತೋಪವಾಸಾದಿಗಳಿಂದ ಕೃಶವಾದ ಮೈಯುಳ್ಳವಳಾಗಿದ್ದಾ ಗಲೂ, ದೇವತೆಯಂತೆ ಪ್ರಕಾಶಿಸುತ್ತಿದ್ದ ತಾಯಿಯ ಬಳಿಗೆ ಬಂದನು. ಕೌಸಲ್ಯ ಯೂಕೂಡ ಬಹಳ ಹೊತ್ತಿನಿಂದ ಮಗನನ್ನು ಬಿಟ್ಟು, ವ್ರತೋಪ ವಾಸಗಳಲ್ಲಿಯೇ ನಿರತಳಾಗಿದ್ದುದರಿಂದ, ಈಗ ರಾಮನನ್ನು ಕಂಡೊಡನೆ, ಆಗ