ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಘರ್ಗ, ೨೦.] ಅಯೋಧ್ಯಾಕಾಂಡವು. ಇನ್ ಲಿದ್ದ ಮರಿಯನ್ನು ಕಂಡ ಹೆಣ್ಣು ಕುದುರೆಯಂತೆ, ಬಹುಸಂಭ್ರಮದಿಂದಲೂ, ಸಂತೋಷದಿಂದಲೂ ಮುಂದೆ ಬಂದಳು. ಹೀಗೆ ತನ್ನನ್ನು ಇದಿರುಗೊಂಡು ಬರುತ್ತಿರುವ ತಾಯಿಗೆ ರಾಮನು ನಮಸ್ಕರಿಸಲು, ಕೌಸಿಯು ಅತ್ಯಾ ನಂದದಿಂದ ಆತನನ್ನು ಎರಡುತೋಳುಗಳಿಂದಲೂ ಅಪ್ಪಿಕೊಂಡು, ವಾತ್ಸಲ್ಯ ದಿಂದ ಆತನ ತಲೆಯನ್ನಾ ಫಾಣಿಸಿದಳು. ಆಮೇಲೆ ಪತ್ರವಲೆಯಾದ ಆಕೆಯು, ಆತನನ್ನು ಕುರಿತು, ತನ್ನ ವಾತ್ಸಲ್ಯಾತಿಶಯಕ್ಕೆ ತಕ್ಕಂತೆ ಪ್ರಿಯ ವಾಕ್ಯಗಳನ್ನು ನುಡಿಯುತ್ತ (ಎಲೆ ರಾಮನೆ ! ವೃದ್ಧರಾಗಿಯೂ, ಧಾತ್ಮಿಕ ರಾಗಿಯೂ, ಮಹಾತ್ಮರಾಗಿಯೂ ಇರುವ ರಾಜಋಷಿಗಳಂತೆ ನೀನು ಹೀರಾ ಯುಸ್ಸನ್ನೂ, ಸತ್ಕರಿಯನ್ನೂ ಹೊಂದಿ, ಕುಲಕ್ಕೆ ತಕ್ಕ ಧರವನ್ನು ನಡೆ ಸುವನಾಗು ! ವತ್ಸ ರಾಮಾ ! ಇದೇನು ? ನೀನು ಏನನ್ನೊ ಚಿಂತಿಸುವ ಹಾಗಿದೆ? ಈಗ ನಿನಗೆ ನಡೆಯಬೇಕಾದ ಪಟ್ಟಾಭಿಷೇಕಕಾರವು ಇನ್ನೂ ಆರಂಭಿ ಸಲಿಲ್ಲವೆಂದು ಶಂಕಿಸುವೆಯಾ ? ನಿನ್ನ ತಂದೆಯು ಎಂದಿಗೂ ಆಡಿದಮಾತಿ ಗೆ ತಪ್ಪತಕ್ಕವನಲ್ಲ. ಆಗಬೇಕಾದುದೆಲ್ಲವೂ ಸಿದ್ಧವಾಗಿರುವುದು. ಇನ್ನು ಸ್ವಲ್ಪ ಹೊತ್ತಿನೊಳಗಾಗಿ ನಿನಗೆ ರಾಜನು ಅಭಿಷೇಕವನ್ನು ನಡೆಸುವನು. ಇದಕ್ಕಾಗಿ ನೀನು ಶಂಕಿಸಬೇಕಾದುದಿಲ್ಲ.” ಎಂದು ಹೇಳಿ, ಆಮೇಲೆ ಅವನನ್ನು ಭೋಜನ ಕ್ಯಾಗಿ ಕರೆದು ಆಸನವನ್ನು ಕೊಟ್ಟಳು. ರಾಮನು ಆ ಆಸನವನ್ನು *ಕೈಯ್ಯಂ ದಮಾತ್ರ ಮುಟ್ಟಿ, ತನ್ನ ಅಭಿಷೇಕಕ್ಕಾಗಿ ಎಷ್ಟೋ ಉತ್ಸಾಹದಿಂದ ಸಂಭ, ವಿಸುತ್ತಿರುವ ತಾಯಿಗೆ, ಆ ಅಪ್ರಿಯವಾರೆಯನ್ನು ಹೇಗೆ ತಿಳಿಸುವುದೆಂದು ಸಂಕೋಚದಿಂದ ಸ್ವಲ್ಪ ಹೊತ್ತಿನವರೆಗೆ ಸುಮ್ಮನಿದ್ದು,ಕೊನೆಗೆ ಆಕೆಗೆ ಕೈಮು ಗಿಯುತ್ತ, ಲಜ್ಜೆಯಿಂದ ತಲೆಯನ್ನು ತಗ್ಗಿಸಿ,ತಾಯಿಯಲ್ಲಿ ತನಗಿರುವ ಗೌರವ ಕ್ಕೆ ತಕ್ಕಂತೆ, ಬಹಳ ನಮ್ರಭಾವವನ್ನು ತೋರಿಸುತ್ತ, ಮುಂದೆ ನಿಂತು (ಎಲೆ ಜನನಿ! ಹಿಂದುಮುಂದನ್ನರಿಯದೆ ಏಕೆ ಸಂಭ್ರಮಿಸುವೆ? ನಿನಗೆ ಈಗ ಮಹಾ ಭಯವೊಂದು ಬಂದೊದಗಿರುವುದು.ನಾನೇನೋ ಇಂತಹ ವಿಪತ್ತುಗಳಿಗೆ ಅಂ ಜುವವನಲ್ಲವಾದರೂ ಈಗಿನ ವಿಷಯವು ನಿನಗೂ, ಸೀತೆ, ಲಕ್ಷಣನಿಗೂ

  • ಇತರರು ಕೊಟ್ಟ ಆಸನದಲ್ಲಿ ಕುಲಿತುಕೊಳ್ಳದಿದ್ದರೂ ಅದನ್ನು ಕೈಯಿಂದ ಲಾದರೂ ಮುಟ್ಟಬೇಕೆಂಬ ಏದಿಯುಂಟು.