ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨೨ ಶ್ರೀಮದ್ರಾಮಾಯಕನ [ಸರ್ಗ, ೨೦ ರೂ, ಇನ್ನು ಮೇಲೆ ನನಗಿಂತಲೂ ಹೀನರಾದ ನನ್ನ ಸವತಿಯರೆಲ್ಲರೂ ಬಾ ಗೆ ಬಂದಂತೆ ನನ್ನನ್ನು ಹೀಗಳೆದು, ನನ್ನ ಪತಿಯ ಮನಸ್ಸನ್ನೂ ಕೆಡಿಸಿ, ನನ್ನ ಮೇಲೆ ಅಧಿಕಾರವನ್ನು ಮಾಡತೊಡಗುವರು! ಆಹಾ ! ಅವರ ತಿರಸ್ಕಾರವಾ ಕೈಗಳನ್ನು ಕೇಳಿ ನಾನು ಹೇಗೆ ಸಹಿಸಲಿ ? ಲೋಕದಲ್ಲಿ ಹೆಂಗಸರಿಗೆ ಸವತಿ ಯರ ಬಾಯಿಗೆ ಸಿಕ್ಕಿ ಬದುಕಿರುವುಕ್ಕಿಂತ ಬೇರೆ ದುಃಖವೊಂದೂ ಇಲ್ಲ. ಆದುದರಿಂದ ನಾನು ಈಗ ಕೊನೆಕಾಣದ ದುಃಖಕ್ಕೆ ಸಿಕ್ಕಿಕೊಳ್ಳಬೇಕಾ ಯಿತು. ಇನ್ನು ಮೇಲೆ ನಾನು ಅನುಭವಿಸುವ ಸಂಕಟವು ಹೀಗೆಂದು ಹೇಳು ವುದಕ್ಕಿಲ್ಲ. ವತ್ಸ ರಾಮಾ ! ಮಹಾಬಲಶಾಲಿಯಾಗಿ, ಸತ್ವಲೋಕಪ್ರಿಯ ನಾದ ನೀನು ಸಮೀಪದಲ್ಲಿರುವಾಗಲೇ ನನ್ನ ಸವತಿಯರು ನನ್ನನ್ನು ತಿರಸ್ಕ ಹಿರಿಯ ಹೆಂಡಿತಿಯೆನಿಸಿಕೊಂಡಿರುವುದರಿಂದ, ಒಂದುವೇಳೆ ತಾನು ಬೇರೆ ಅಂತ:ಪುರಸ್ತಿ ಯರನ್ನು ಕುರಿತು ಬುದ್ದಿವಾದವನ್ನು ಹೇಳಿ ದಂಡಿಸಿದರೂ ದಂಡಿಸಬಹುದು. ಹಾಗಿಲ್ಲದ ತನ್ನಲ್ಲಿ ವಿಧೇಯರಾಗಿ ನಡೆದುಕೊಳ್ಳಬೇಕಾದ ಅಲ್ಪಸ್ತ್ರೀಯರೆಲ್ಲರೂ ತನ್ನನ್ನು ನಿಂದಿಸ ಲಾರಂಭಿಸುವರೆಂದು ಭಾವವು, (ಸಪನಾಂ ) ಸ್ತ್ರೀಯರಿಗೆ ಸವತಿಯರಿಂದ ಬಯ್ಕೆ ಕೊಳ್ಳುವುದಕ್ಕಿಂತಲೂ ಹೆಚ್ಚು ವ್ಯಸನವು ಬೇರೊಂದೂ ಇಲ್ಲ. ಹೀಗಿರುವಲ್ಲಿ ಅಂತಹ ಸವತಿಯದಲ್ಲಿಯೂ ತನಗಿಂತ ಹೀನರಾದವರು ತನ್ನನ್ನು ಬಾಯಿಗೆ ಬಂದಹಾಗೆ ಬೈ ಯುವಪಕ್ಷದಲ್ಲಿ ಅದನ್ನು ಹೇಗೆ ಸಹಿಸುವುದೆಂದು ಭಾವವು. (ಬಹೂನಿ) ಮೊದಲೇ ಸ್ವ ಲ್ಪ ಸ್ವಲ್ಪವಾಗಿ ಹೇಳುತ್ತಿದ್ದ ಕೂರವಾಕ್ಯಗಳನ್ನು ಇನ್ನು ಮೇಲೆ ತಡೆಯಿಲ್ಲದೆ ಬಾಯಿಗೆ ಬಂದಹಾಗೆ ಹೇಳುವರೆಂದರು. (ಅಮನೋಜ್ಞಾನಿ) ಇಂಪಲ್ಲದವುಗಳೆಂದರೆ, ಕಠಿನವಾ ದುವುಗಳೆ೦ದರವು. ಮೊದಲು ಅವರು ಕೂರವಾಕ್ಯಗಳನ್ನಾಡುತ್ತಿದ್ದರೆ, ಅವುಗಳಲ್ಲಿ ನಡುನಡುವೆ ಸಲ್ಪ ಮಟ್ಟಿಗೆ ಮಾರ್ದವವನ್ನಾದರೂ ತೋರಿಸುತ್ತಿದ್ದರು. ಇನ್ನು ಮೇಲೆ ಅದೂ ಇಲ್ಲವೆಂದು ಭಾವವು. (ವಾಕ್ಯಾನಿ) ಇದುವರೆಗೂ ಮೇಲೆ ಮೃದುವಾಕ್ಯಗಳನ್ನು ಹೇಳುವಂತೆ ನಟಿಸುತ್ತ, ನನಗೆ ಮರ್ಮಭೇದಕವಾಗುವಂತೆ ವ್ಯಂಗಾರವುಳ್ಳ ಪದಗಳ ನ್ನುಪಯೋಗಿಸುತ್ತಿದ್ದರು, ಇನ್ನು ಮೇಲೆ ಸ್ಪಷ್ಟವಾದ ವಾಕ್ಯಗಳಿಂದಲೇ ನನ್ನನ್ನು ತಿರ ಸ್ಮರಿಸುವರೆಂದು ಭಾವವು. (ವರಾಸತಿ) ನಾನು ಪಟ್ಟದರಾಣಿಯಾಗಿದ್ರೂ ಸಂಕಟಕ್ಕೆ ಗುರಿಯಾಗಬೇಕಾಯಿತೆಂದು ಭಾವವು, (ಸಪನಾಂ ) ಇಲ್ಲಿ ಬಹುವಚನವನ್ನು ಪಯೋಗಿ ಸಿದುದು ಕೇವಲ ಕೋಪದಿಂದಲೇ ಹೊರತು, ನಿಜವಾಗಿ ಕೈಕೇಯಿಯು ಹೊರತು ಬೇರೆಯವರ ವಿಷಯದಲ್ಲಿ ಕೇಸಿಗೆ ಈ ದುರಭಿಪ್ರಾಯವಿಲ್ಲ. ಅದುದರಿಂದ ಇಲ್ಲಿ ಏಕವಚನಾರ್ಥವನ್ನೇ ಮುಖ್ಯವಾಗಿ ಗ್ರಹಿಸಬೇಕು.