ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೭೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸರ್ಗ, ೨೦.! - ಅಯೋಧ್ಯಾಕಾಂಡವು. ೪w ತಿರಸ್ಕಾರಕ್ಕೊಳಗಾಗಿ ಇನ್ನು ಬಹುಕಾಲದವರೆಗೆ ನಾನು ಬದುಕಿರಲಾರೆನು. ಥನು ರಾಮನನ್ನು ವಿಶ್ವಾಮಿತ್ರನೊಡನೆ ಕಳುಹಿಸಿದ ಸಂವತ್ಸರದಲ್ಲಿಯೇ ರಾಮನು ಮಾ ರೀಚನೊಡನೆ ಯುದ್ಧ ಮಾಡಿರುವನು, ಆಮೇಲೆ ಮಾರೀಚನು ರಾವಣನೊಡನೆ, ರಾಮನ ಈ ಯುದ್ಧ ವಿಷಯವನ್ನು ಹೇಳಿದಾಗ (ಬಾಲೋ ದ್ವಾದಶವರ್ಷೆ ಯಮಕೃತಾಸ್ತ್ರ ರಾಘವ:) ಎಂದು, ರಾಮನನ್ನು ಹನ್ನೆರಡು ವಯಸ್ಸಿನವನೆಂದು ಹೇಳಿರುವನು. ಆದು ದರಿಂದ ವಿವಾಹಕಾಲದಲ್ಲಿ ಸೀತೆಯು, ಸಮಾ ದ್ವಾದಶ ತತ್ರಾಹಂ ರಾಘವಸ್ಯ ನಿವೇ ಶನೇ 1 ಭುಂಜಾನಾ ಮಾನುರ್ಷಾ ಭೋರ್ಗಾ' ಎಂದೂ, 'ಉಷಾ ದ್ವಾದಶಸಮಾ ಇಕ್ಷಾಕೊಣಾಂ ನಿವೇಶನೇ ಎಂದೂ, ತಾನೂ ಹನ್ನೆರಡು ಸಂವತ್ಸರಗಳವರೆಗೆ ಅಯೋ ಧೈಯಲ್ಲಿದ್ದುದಾಗಿ ಹೇಳಿರುವುದರಿಂದ, ಮಾರೀಚನ ವಾಕ್ಯದಂತೆ ವಿವಾಹಕ್ಕೆ ಪೂರ, ದಲ್ಲಿ ಹನ್ನೆರಡು ವರ್ಷಗಳನ್ನೂ, ಸೀತೆಯ ವಾಕ್ಯದಂತೆ ವಿವಾಹಾನಂತರದಲ್ಲಿ ಹನ್ನೆರ ಡುವರ್ಷಗಳನ್ನೂ ಸೇರಿಸಿದರೆ, ಕಾಡಿಗೆ ಹೊರಡುವುದಕ್ಕೆ ಮೊದಲು ಇಪ್ಪತ್ತು ನಾಲ್ಕು ವರ್ಷಗಳು ಕಳೆದುಹೋದುವೆಂದುಸಿದ್ದವು. 'ತತ್ರ ತ್ರಯೋದಶೇ ವರ್ಷೇ ರಾಜಾಮಂತ್ರಯತ ಪ್ರಭುಃ ||” ಎಂಬುದಾಗಿ, ರಾಮನ ಹದಿಮೂರನೆಯ ವರ್ಷದಲ್ಲಿ ದಶರಥನು ಆತನಿಗೆ ಪಟ್ಟವನ್ನು ಕಟ್ಟುವುದಕ್ಕಾಗಿ ಆಲೋಚಿಸಿದನೆಂದು ಸೀತೆಯು ಹೇಳಿ ರುವುದರಿಂದಲೂಕೂಡ, ರಾಮನು ಇಪ್ಪತ್ತು ನಾಲ್ಕು ವರ್ಷಗಳನ್ನು ಅಯೋಧ್ಯೆಯಲ್ಲಿ ಕಳೆದು ಇಪ್ಪದರಲ್ಲಿಯೇ ಕಾಡಿಗೆ ಹೊರಟನೆಂದು ಸಿದ್ಧವಾಗುವುದು. ಆದುದರಿಂ ದ, ದಶರಥನು ಹೇಳಿರುವ 'ಊನಷೋಡಶ ವರ್ಷ.” ಎಂಬುದಕ್ಕೆ, ಹದಿನಾರು ವರ್ಷಗಳಾಗಬೇಕಾದರೆ, ಇನ್ನೂ ಮೂರು ನಾಲ್ಕು ವರ್ಷಗಳು ಬೇಕೆಂಬ ಅರ್ಥವನ್ನಿಟ್ಟು ಕೊಂಡು, ಹನ್ನೆರಡು ವರ್ಷವೆಂದು ಗ್ರಹಿಸಿದರೆ, ದಶರಥನ ಲೆಕ್ಕವೂ ಸರಿಹೋಗವು ದು, ಇದರಿಂದ ರಾಮನಿಗೆ ಎಂಟನೆಯ ವರ್ಷವಾದಮೇಲೆ ಉಪನಯನವೂ, ಹನ್ನೆ ರಡ ನೆಯ ವರ್ಷವಾದ ಮೇಲೆ ವಿವಾಹವೂ, ಆಮೇಲೆ ಹನ್ನೆರಡುವರ್ಷಗಳವರೆಗೆ ಅಯೋಧ್ಯಾ ವಾಸವೂ, ಇಪ್ಪತ್ತೈದನೆಯ ವಯಸ್ಸಿನಲ್ಲಿ ವನಪ್ರವೇಶವೂ ನಡೆಯಿತೆಂದು ಸಿದ್ದವು. ಮತ್ತು 'ಮಮ ಭರ್ತಾ ಮಹಾತೇಜಾ ವಯಸಾ ಪಂಚವಿಂಚನ: 1 ಅಷ್ಟಾದಶಹಿ ವರ್ಷಾ ಣಿ ಮಮ ಜನ್ಮನಿ ಗಣ್ಯತೇ ||” ಎಂದು, ರಾಮನ ಇಪ್ಪತ್ತೈದನೆಯ ವರ್ಷದಲ್ಲಿ ಸೀತೆ ಯು ತನಗೆ ಹದಿನೆಂಟು ವಯಸ್ಸೆಂದು ಹೇಳಿರುವಳಾದುದರಿಂದ ರಾಮನಿಗಿಂತ ಸೀತೆಯು ಏಳುವರ್ಷಗಳು ಕಿರಿಯಳೆಂದು ತಿಳಿದುಬರುವುದು. ವಿವಾಹಕಾಲದಲ್ಲಿ ರಾಮನಿಗೆ ಹನ್ನೆ ರಡು ವರ್ಷಗಳಾಗಿದ್ದ ಪಕ್ಷದಲ್ಲಿ,ಸೀತೆಗೆ ಐದೇ ವಯಸ್ಸಿರಬೇಕು. ಸೀತೆಯು ಅರಣ್ಯಕ್ಕೆ ಹೋಗುವಾಗ ನಡೆದಿದ್ದ ಹದಿನೆಂಟುವರ್ಷಗಳಲ್ಲಿ, ಅಯೋಧಾ ವಾಸಿದಲ್ಲಿ ಕಳೆದ ಹನ್ನೆ