ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದ್ರಾಮಾಯನವು [ಸರ್ಗ, ೨೦ ಈಗಲೇ ನನ್ನ ದೇಹವೆಲ್ಲವೂ ಜೀರವಾಗಿ ಹೋಗಿರುವುದು. ಈಗ ನನಗೆ ರಡುವರ್ಷಗಳನ್ನು ತೆಗೆದು ಹಾಕಿದರೆ, ಆರು ವರ್ಷಗಳು ಮಿಗುವುವು. ಆದುದರಿಂದ ಸೀತೆಗೆ ವಿವಾಹಕ್ಕೆ ಮೊದಲೇ ಐದುವರ್ಷಗಳು ಕಳೆದು, ಆರನೆಯ ವರ್ಷವು ನಡೆಯು, ತಿತ್ತೆಂದು ಗ್ರಹಿಸಬೇಕು, ಆದರೆ ರಾಮನು ವಿವಾಹವಾದ ಕೂಡಲೇ “ರಾಮಸ್ತು ಸೀತಯಾ ಸಾರ್ಧಂ ವಿಜಹಾರ ಬಹೂರ್ತ” ಎಂಬುದಾಗಿ ಸೀತೆಯೊಡಗೂಡಿ ವಿಹರಿಸುತ್ತಿದ್ದು ದಾಗಿ ಹೇಳಲ್ಪಟ್ಟಿರುವುದು, ಇದರಿಂದಹ ನೈರಡುವರ್ಷದ. ರಾಮನು,ಐದಾರುವರ್ಷದ ಬಾಲೆಯೊಡಗೂಡಿ ವಿಹಾರ ಸುಖವನ್ನು ಅನುಭವಿಸುತ್ತಿದ್ದನೆಂಬುದು ಅಸಂಭವವೆಂದು ತೋರಬಹುದು, ಈ ಸೀತಾರಾಮರಿಬ್ಬರ ಬಾಲಕ್ರೀಡೆಗಳಲ್ಲಿಯಕೂಡ ನಾಚಿಕೆಯ ನ್ನು ಬಿಟ್ಟು ಸಲಿಗೆಯಿಂದ ಕಲೆತಿದ್ದರೆಂದಾಗಲಿ, ನಿರತಿಶಯವಾದ ರಾಜಭೋಗದಲ್ಲಿಯೇ ಬಳೆದವರಿಗೆ ಅಷ್ಟು ಸಣ್ಣ ವಯಸ್ಸಿನಲ್ಲಿಯೇ ಯೌವನಾರಂಭವಾಯಿತೆಂದಾಗಲಿ, ಈ ದಿವ್ಯವ್ಯಕ್ತಿಗಳಿಗೆ ಬಾಲ್ಯಯೌವನಗಳೆಂಬ ಅವಸ್ಟಾನಿಯಮವೇ ಇಲ್ಲವೆಂದಾಗಲಿ, ಸಾಮಂ ಜಸ್ಯವನ್ನು ಕಲ್ಪಿಸಬಹುದು. ಹೀಗಿದ್ದರೂ ಕೆಲವರು ಹನ್ನೆರಡು ವಯಸ್ಸಿನ ಬಾಲಕನು ಐದಾರುವಯಸ್ಸಿನ ಬಾಲೆಯೊಡನೆ ರತಿಸ್ಖ್ಯೆಗಳನ್ನನುಭವಿಸುತ್ತಿದ್ದನೆಂಬುದು ಸತ್ಯ ಛಾ ಅಸಂಭವವೆಂದು ಗ್ರಹಿಸಿ, ರಾಮನು ಕಾಡಿಗೆ ಹೊರಡುವಾಗ ಇಪ್ಪತ್ತೆಂಟುವಯಸ್ಸು ಕಳೆದು ಹೋಗಿತ್ತೆಂದೇ ಸಾಧಿಸುವರು.ಇದಕ್ಕಾಗಿ ಈ ಮತದವರು ಸಿದ್ಧಾಂತಪಡಿಸಿರುವ ರೀತಿಯೇನೆಂದರೆ - 'ಊವಷಡಶವರ್ಷ: ಎಂದು ಹೇಳಿರುವುದರಲ್ಲಿ, ರಾಮನು ವಿಶ್ವಾಮಿತ್ರನೊಡನೆ ಹೋಗುವುದಕ್ಕೆ ಮೊದಲು, ಆತನಿಗೆ ಹದಿನಾರು ವಯಸ್ಸು ತುಂ ಬುವುದಕ್ಕೆ ಕೆಲವು ತಿಂಗಳು ಮಾತ್ರವೇ ಕಡಿಮೆಯಾಗಿರಬಹುದೆಂದೂ, ಹಿಂದೆ ಹೇಳಿದಂತೆ ನಾಲ್ಕು ಸಂವತ್ಸರಗಳು ಕಡಿಮೆಯಾಗಿಲ್ಲವೆಂದೂ ಹೇಳುವರು. ಆದರೆ ಇದೇ ಸಂದರ್ಭ ದಲ್ಲಿ ದಶರಥನು ವಿಶ್ವಾಮಿತ್ರನೊಡನೆ ಹೇಳಿರುವ ಮುಂದಿನ ವಾಕ್ಯಗಳಲ್ಲಿ ಬಾಹ್ಯ ಕೃತವಿದಶ್ರ ನವೇಚ ಬಲಾಬಲಂ” “ರಾಮನು ಬಾಲನು, ಅಸ್ತವಿದ್ಯೆಯಲ್ಲಿ ಪರಿಚಯ ವಿಲ್ಲದವನು, ತನ್ನ ಮತ್ತು ಶತ್ರುಗಳ ಬಲಾಬಲವನ್ನು ತಿಳಿದುಕೊಳ್ಳಲಾರನು ಎಂದು ಹೇಳಿದನಲ್ಲವೆ? ಹದಿನಾರು ವಯಸ್ಸಿನ ಕುಮಾರನನ್ನು ಕುರಿತು ಹೀಗೆ ಹೇಳುತಿದನೆ? ಎಂದು ಆಕ್ಷೇಪಿಸುವಪಕ್ಷದಲ್ಲಿ, ಅದಕ್ಕೂ ಸಮಾಧಾನವಾಗಿ ಅವರು ಹೇಳುವುದೇನೆಂದರೆ: 'ಬಾಲಆಷಡಶಾದ್ಯರ್ಷಾ” ಹದಿನಾರುವರ್ಷದವರೆಗೆ ಬಾಲನೆಂಬವ್ಯವಹಾರ ವಿರುವುದರಿಂದಲೂ, ಬಾಲ್ಯಯೌವನಸಂಧಿಯಲ್ಲಿಯೂ ಬಾಲನೆಂದು ವ್ಯವಹರಿಸಲ್ಪಡು ಇದರಿಂದಲೂ,ಇಲ್ಲಿ ರಾಮನ ಯೌವನಾರಂಭದಲ್ಲಿ ಕೂಡ ಬಾಲನೆಂದೇ ಹೇಳಿರುವು ದಾಗಿ ಗ್ರಹಿಸಬೇಕು. ಆದರೆ ಇದೇಸ್ಥಿತಿಯನ್ನೇ ಮಾರೀಚನೂಕೂಡ, 'ಬಾಲೋದ್ಯಾದಶ ವರ್ಷ ಯಕೃತಾತ್ಮರಾಘವಃ | ಅಜಾತವನರ್ಮಾ ಪದ್ಮ ಪತ್ನಿಬ್ಬೆ