ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೮೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪೨೮. ಶ್ರೀಮದ್ರಾಮಾಯಣವು (ಸರ್ಗ, ೨೦. ಪ್ರಕಾಶಿಸುವ ನಿನ್ನ ಮುಖವನ್ನು ಕಾಣದೆ ನಾನು ಹೇಗೆ ಜೀವಿಸುತ್ತಿರ ಬಲ್ಲೆನು ? ಅಥವಾ ಬದುಕಿದ್ದರೂ, ಆ ಕಾರ್ಪಣ್ಯದ ಜೀವನದಿಂದ ಫಲ ವೇನು? ಅಯ್ಯೋ ! ನೀನು ಭಾಗ್ಯಹೀನೆಯಾದ ನನ್ನ ಹೊಟ್ಟೆಯಲ್ಲಿ ಹುಟ್ಟಿ ಇದುವರೆಗೆ ಕಷ್ಟದಿಂದಲೇ ಬಳೆದುದಲ್ಲದೆ, ಮುಂದಕ್ಕೂ ಕಷ್ಟವನ್ನೇ ಅನುಭ ವಿಸಬೇಕಾಗಿ ಬಂದಿತು. ನಿನ್ನಿಂದ ನಾನು ಎಷ್ಟೋ ಉಪವಾಸಗಳನ್ನು ಮಾ ಡಿಸಿದೆನು. ಎಷ್ಟೋ ದೇವತಾಧ್ಯಾನಗಳನ್ನೂ ಮಾಡಿಸಿದನು. ಎಷ್ಟೊವ್ರತಗ ಳನ್ನು ಮಾಡಿಸಿ ನಿನ್ನ ದೇಹವನ್ನೂ ಬಳಲಿಸಿದೆನು. ಅದೆಲ್ಲವೂ ನಿಷ್ಪಲವಾ ಯಿತು! ಇಷ್ಟು ದುಃಖದಲ್ಲಿಯೂ ನನ್ನ ಎದೆಯು ಒಡೆದುಹೋಗದಿರುವುದ ಲ್ಲಾ! ಮಳೆಗಾಲದಲ್ಲಿ ದೊಡ್ಡಹೊಳೆಯು ಬಂದಾಗಲೂ ಒಡೆದುಹೋಗದಿರು ವ ನದಿಯ ದಡದಂತೆ, ಇನನ್ನ ಹೃದಯವು ಶಿಲಾಮಯವಾಗಿ ಬಹುಸ್ಥಿರವಾಗಿ ರುವುದೆಂದೆಣಿಸುವೆನು, ವತ್ಸರಾಮಾ!ನನಗೆ ಒಂದುವೇಳೆ ಬ್ರಹ್ಮನು ಮರಣವ ನೈ ಬರೆದಿರಲಾರನು, ಅಥವಾ ಭಾಗ್ಯಹೀನೆಯಾದ ನನಗೆ ಯಮನ ಮನೆಯಲ್ಲಿ ಯೂ ವಾಸಯೋಗ್ಯವಾದ ಸ್ಥಳವಿರಲಾರದು. ಹಾಗೆ ಯಮನು ಇಷ್ಟಾದ ರೂ ನನ್ನನ್ನು ಕೊಲ್ಲದೆ ಇಟ್ಟಿರಬೇಕಾದರೆ ಆತನಿಗೇನು ನನ್ನಲ್ಲಿ ಕರುಣೆಯೆ? ಗೋಳಿಡುತ್ತಿದ್ದ ಮಾತ್ರಕ್ಕೆ ಸಿಂಹವು ಜಿಂಕೆಗಳನ್ನು ಕೊಲ್ಲದಿರುವುದೆ ? ಮಹಾದುಃಖವುಂಟಾಗಿದ್ದರೂ ಈ ನನ್ನ ದೇಹವೂ, ಈ ನನ್ನ ಮನ ನ್ಯೂ ಭೇದಿಸಿ ಹೋಗದಿರುವುದರಿಂದ, ಇವುಗಳನ್ನು ಬ್ರಹ್ಮನು ಉಕ್ಕಿ ನಿಂದಲೇ ಮಾಡಿಟ್ಟಿರಬಹುದು ! ಈ ನನ್ನ ದೇಹಕ್ಕೆ ಯಾವಾಗಲೂ ನಾಶವಿ ಹನ್ನೊಂದನೆಯ ವಯಸ್ಸಿನಲ್ಲಿ ನಡೆಯಬೇಕಾದ ಉಪನಯನವನ್ನು ಮೊದಲುಮಾಡಿ ಕೊಂಡು ಎಣಿಸಿದರೆ, ಹದಿನೇಳು ವರ್ಷಗಳಾಗುವುವು. ಹುಟ್ಟಿದುದು ಮೊದಲು ಈ ವನವಾಸಕಾಲಕ್ಕೆ ಒಟ್ಟು ಇಪ್ಪತ್ತೆಂಟು ಸಂವತ್ಸರಗಳಾಗುವುವು' ಎಂದು ಕೆಲವರು ಸ್ಥಾಪಿಸುವರು, ಹಾಗಿದ್ದರೂ ಸೀತೆಯು ಸನ್ಯಾಸಿಯಾಗಿ ಬಂದ ರಾವಣನೊಡನೆ ವ ಯಸಾ ಪಂಚವಿಂಶಕ” ಇಪ್ಪತ್ತೈದು ವರ್ಷದವನೆಂದು ಹೇಳಿದ ಮಾತನ್ನು ಯಥಾ ಕ ವಾಗಿಯೇ ಗ್ರಹಿಸಬೇಕೇ ಹೊರತು, ಪಾಪಭಯವುಳ್ಳ ಸೀತೆಯು ಯಾವಕಾರಣ ದಿಂದಲೂ ಬೇರೆಏಧವಾಗಿ ಹೇಳುವ ಸಂಭವವಿಲ್ಲ. ಆದುದರಿಂದ ರಾಮನಿಗೆ ವನಪ್ರವೇಶ ಸಮಯದಲ್ಲಿ ಇಪ್ಪತ್ತೈದು ವರ್ಷವೆಂಬುದನ್ನೇ ಸಿದ್ಧಾಂತವಾಗಿ ಗ್ರಹಿಸಬೇಕು.