ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೨೧.] ಅಯೋಧ್ಯಾಕಾಂಡನು. ೪೨೯ ರದು! ಅಥವಾ ಎಂತಹ ಮಹಾವಿಪತ್ತು ಸಂಭವಿಸಿದರೂ, ಬ್ರಹ್ಮನಿಂದ ಬರೆ ಯಲ್ಪಟ್ಟ, ಆಯುಃಪ್ರಮಾಣವು ತೀರಿದಹೊರತು, ಯಾರಿಗೂ ಸಾವುಂಟಾಗ ಲಾರದು. ಆದುದರಿಂದಲೇ ಈವ್ಯಸನದಲ್ಲಿಯೂ ನಾನು ಬದುಕಿರಬೇಕಾಗಿದೆ ನಾನು ಮಕ್ಕಳನ್ನು ಪಡೆಯಬೇಕೆಂದು ಮಾಡಿದ ವ್ರತಗಳೂ, ದಾನಗಳೂ, ದೇವತಾಧ್ಯಾನಗಳೂ ನಿಷ್ಮಲಗಳಾದುವು. ಉಪ್ಪನೆಲದಲ್ಲಿ ಬಿತ್ತಿದ ಬೀಜ ದಂತೆ ನಾನು ಮಾಡಿದ ತಪಸ್ಸೆಲ್ಲವೂ ವಿಫಲವಾಯಿತು. ಎಂದೂ ಕಾಣದ ಮಹಾವ್ಯಸನವು ಈಗ ಪ್ರಾಪ್ತವಾಗಿದೆ. ಇಂತಹ ದುಃಖಗಳು ಬಂದೊದಗಿ ದಾಗ ಮನುಷ್ಯನಾದವನಿಗೆ ತನ್ನ ಇಚ್ಛಾಮಾತ್ರದಿಂದಲೇ ಪ್ರಾಣವನ್ನು ಬಿಡುವ ಶಕ್ತಿಯಿರುವುದಾದರೆ,ನಾನು ಆ ಕೋರಿಕೆಯನ್ನು ಈಗಲೇ ಈಡೇ ರಿಸಿಕೊಳ್ಳುತಿದ್ದೆನು. ಕರುವನ್ನು ಕಾಣದ ಆಕಳಿನಂತೆ, ನಿಮಿಷಮಾತ್ರವಾ ದರೂ ನಾನು ನಿನ್ನನ್ನಗಲಿರಲಾರದೆ, ಈಗಲೇ ಯಮಪುರಿಯನ್ನು ಸೇರುತಿ ದ್ದೆನು. ಅದಕ್ಕೂ ಈಗ ಸಾಧ್ಯವಿಲ್ಲದಿರುವುದು. ಎಲೈ ರಾಮನೆ! ಈಗ ನಾನೇನು ಮಾಡಲಿ ! ಇನ್ನು ಮೇಲೆ ನನ್ನ ಜೀವನವೂ ಒಂದು ಜೀವನವೆ? ವಾತ್ಸಲ್ಯದಿಂದ ಕರುವನ್ನು ಹಿಂಬಾಲಿಸಿ ಹೋಗುವ ಹಸುವಿನಂತೆ, ನಾನೂ ನಿನ್ನೊಡನೆಯೇ ಕಾಡಿಗೆ ಬರುವೆನು. ಪೂರ್ಣಚಂದ್ರನಂತೆ ಪ್ರಕಾಶಿಸುವ ನಿನ್ನ ಮುಖವನ್ನು ಆಗಾಗ ನೋಡುತಿದ್ದಾದರೂ ಸಂತೋಷಪಡಬಹುದು.” ಎಂದಳು. ಹೀಗೆ ಕೌಸಲ್ಯಯು ರಾಮನ ಅಗಲಿಕೆಯನ್ನೂ, ಸವತಿಯರ ಪ್ರಾಬಲ್ಯವನ್ನೂ ಮನಸ್ಸಿನಲ್ಲಿ ನೆನೆಸಿಕೊಂಡಹಾಗೆಲ್ಲಾ, ಮನಸ್ಸಂಕಟವನ್ನು ತಡೆಯಲಾರದೆ, ರಾಮನು ಸತ್ಯಪಾಶದಲ್ಲಿ ಬದ್ಧನಾಗಿರುವುದನ್ನು ನೋಡಿ, ಪಾಶದಿಂದ ಬಿಗಿಯಲ್ಪಟ್ಟ ಮಗನನ್ನು ನೋಡಿದ ಕಿನ್ನರಸ್ತಿಯಂತೆ, ಆತನನ್ನು ನೋಡಿ ಬಹಳವಾಗಿ ಗೋಳಿಡುತಿದ್ದಳು. ಇಲ್ಲಿಗೆ ಇಪ್ಪತ್ತನೆಯ ಸರ್ಗವು. - (ಲಕ್ಷಣನು ಆಸಿಯನ್ನು ಸಮಾಧಾನಪಡಿಸಿದು ) w ತಿ ದು. ಸತ್ಯವನ್ನು ತೆಪ್ಪಕೂಡದೆಂದು ರಾಮನು ( ಲಕ್ಷಕನಿಗೆ ಬುದ್ದಿ ವಾದವನ್ನು ಹೇಳಿದುದು. ) . ಕೈಕೇಯಿಯ ಆಂತಃಪುರದಲ್ಲಿ ನಡೆದ ವೃತ್ತಾಂತವನ್ನು ಕೇಳಿದಾಗಲೇ ಲಕ್ಷಣನಿಗೆ ಕೋಪವು ಉಕ್ಕಿ ಬರುತ್ತಿತ್ತು. ಆದರೆ ಇವನು ರಾಮನ ಮನ