ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

“ ಶ್ರೀಮದ್ರಾಮಾಯಕರ {ಸರ್ಗ, ೨೧. ಸೃನ್ನು ಅನುವರ್ತಿಸಿನಡೆಯಬೇಕಾದುದೇ ಥರವೆಂದು ನಿಶ್ಚಯಿಸಿಕೊಂಡು, ಆ ಕೋಪವನ್ನು ಹೊರಬೀಳಿಸದೆ, ಮನಸ್ಸಿನಲ್ಲಿಯೇ ಅಡಗಿಸಿಕೊಂಡಿದ್ದನು. ಈಗ ಕೌಸಲ್ಯಯು ರಾಮನನ್ನು ಮುಂದಿಟ್ಟುಕೊಂಡು ಆಳುತ್ತಿ ರುವುದನ್ನು ನೋಡಿ, ಲಕ್ಷ್ಮಣನಿಗೆ ಆ ಕೋಪವು ಉದ್ರೇಕಹೊಂದಿತು. ಆಗ ಬಹಳಹೀನನಾಗಿ, ಅವಳ ದುಃಖವನ್ನು ಸಮಾಧಾನಪಡಿಸುವ ವ್ಯಾಜದಿಂದ ತನ್ನ ಕೋಪವನ್ನು ಹೊರಪಡಿಸುತ್ತ, *ಆ ಕಾಲಕ್ಕೆ ತಕ್ಕಂತೆಂ ಒಂದಾನೊಂ ದುಮಾತನ್ನು ಹೇಳುವನು.ಅಮ್ಮ ಕೌಸಲ್ಯ! ಒಬ್ಬ ಹೆಂಗಸಿನ ಮಾತಿಗಾಗಿ ರಾಮನು ರಾಜ್ಯವನ್ನು ಬಿಟ್ಟು ಕಾಡಿಗೆ ಹೋಗಬೇಕೆಂಬುದು ನನಗೂಕೂಡ ಸತ್ವಧಾ ಸಮ್ಮತವಲ್ಲ!ನಮ್ಮ ತಂದೆಯಾದರೋ ಬಹಳ ವೃದ್ಧನಾಗಿರುವನು. ಆತನಿಗೆ ಬುದ್ದಿಯೇ ಸೀಮಿತವಿಲ್ಲದೆ ವಿಪರೀತವಾಗಿ ಪ್ರವರ್ತಿಸಿರುವುದು. ಇಷ್ಟು ವಯಸ್ಸಾದರೂ ವಿಷಯಾಭಿಹಾಷೆಯೆಂಬುದು ಆತನನ್ನು ಇನ್ನೂ ಬಿಡಲಿಲ್ಲ. ಹೀಗೆ ಮೊದಲೇ ಮುಪ್ಪಿನಿಂದ ಬುದ್ಧಿಗೆಟ್ಟಿರುವ ಆತನು, ಕಾಮ ಪರವಶನಾಗಿಯೂ ಇದ್ದಮೇಲೆ, ಯಾವ ಮಾತನ್ನು ತಾನೇ ಆಡಲಾರನು ? ಆತನಿಗೆ ಈ ಅವಸ್ಥೆಯಲ್ಲಿ ಯುಕ್ಕಾಯುಕ್ತ ವಿವೇಚನೆಯೆಲ್ಲಿಯದು?ಈಗ, ಆತನ ಮಾತನ್ನು ನಾವು ಲಕ್ಷದಲ್ಲಿಯೇ ಇರಿಸಬಾರದು. ರಾಜ್ಯವನ್ನು ತಪ್ಪಿಸಿ ಕಾಡಿಗೆ ಕಳುಹಿಸುವಷ್ಟು ರಾಮನು ಮಾಡಿರುವ ಅಪರಾಧವೇನು ? ಈತನಲ್ಲಿ ಅಂತಹ ದೋಷವೇನೂ ನನಗೆ ತೋರಲಿಲ್ಲ! ಎಲೆ ಮಾತೆ! ಇಷ್ಟು ಮುಪ್ಪಿನಲ್ಲಿ ಯೂ ನಮ್ಮ ತಂದೆಯು ಕಾಮವಿಕಾರಕ್ಕೊಳಗಾಗಿ, ಹೆಂಗಸಿನಮಾತಿಗೆ ಮ ರುಳಾಗಿ, ನಾಚಿಕೆಯಿಲ್ಲದೆ ಹೀಗೆ ಆಕಾರಕ್ಕೆ ಪ್ರವರ್ತಿಸಿರುವನಲ್ಲವೆ ? ಅದಕ್ಕೆ ದಲ್ಲಿ ಬಿದ್ದ ರಾಜನನ್ನು ಪ್ರಜೆಗಳೇ ಕೊಲ್ಲುವಂತೆ ಈ ಕ್ಷಣದಲ್ಲಿಯೇ ಆತ ನನ್ನು ಕೊಂದುಬಿಡುವೆನು. ಆತನು ನನಗೆ ತಂದೆಯಾಗಿದ್ದರೂ ಚಿಂತೆಯಿಲ್ಲ.)

  • ಇಲ್ಲಿ ಕಾಲೋಚಿತವೆಂದರೆ, ಲಕ್ಷಕನು ಕಾಮಕ್ರೋಧಾದಿಗಳಿಗೆ ಸುಲಭ ವಾಗಿ ಅವಕಾಶಕೊಡದ ಜಿತೇಂದ್ರಿಯನಾಗಿದ್ದರೂ, ಆಗ ಕೌಸಲ್ಯಾದೇವಿಯ ಪ್ರಲಾಪ ವನ್ನು ಕೇಳಿ ಆತನಿಗೆ ಅವಳ ದುಃಖೋಪಶಮನಾರವಾಗಿ ಹಾಗೆ ಹೇಳಬೇಕಾದ ಸಂ ದರ್ಭವುಂಟಾಯಿತಂದರವು, ರಾಮನನ್ನು ಮುಂದಿಟ್ಟುಕೊಂಡು ಕಿಸಿಯು ಅ ಇದ್ದುದನ್ನು ನೋಡಿದರೆ, ಎಂತಹ ಜಿತೇಂದ್ರಿಯನಿಗೂ ಮನಸ್ಸು ಕಳವಳಿಸದೆ

ಬರದಂದೂ ಭಾವನ,