ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬.೨ ಶ್ರೀಮದ್ರಾಮಾಯಣವು (ಸರ್ಗ, ೨೧. ನನ್ನೂ ಕೊಂದುಬಿಡುವೆವು. ಅಥವಾ ಆತನನ್ನು ಹಿಡಿದು ಸೆರೆಯಲ್ಲಿ ಹಾಕು ವೆವು. ಇದನ್ನು ಥರ ವಿರುದ್ಧವೆಂದೆಣಿಸಬೇಡ.ಕಾಮಾದಿಗಳಿಗೆ ಪರವಶನಾಗಿ ಯುಕ್ತಾಯುಕ್ತವನ್ನರಿಯದೆ, ಉನ್ಮಾರ ಪ್ರವರ್ತಕನಾದವನು ಹೆತ್ತ ತಂದೆಯಾಗಿದ್ದರೂ, ಅಂತವನನ್ನು ಆಕ್ಷಣವೇ ದಂಡಿಸಬೇಕೆಂದು ಶಾಸ ಪ್ರಮಾಣವುಂಟು. ಅಣ್ಣ! ಇದೇನು ! ಯಾರಬಲದಿಂದ ನಮ್ಮ ತಂದೆಯು ನ್ಯಾಯವಾಗಿ ನಿನಗೆ ಸೇರಬೇಕಾದ ಈರಾಜ್ಯವನ್ನು ಕೈಕೇಯಿಗೆ ಕೊಡಬೇಕೆಂ ದಿರುವನು ? ಇದಕ್ಕೆ ಪ್ರಬಲವಾದ ಕಾರಣವೇನಿರಬಹುದು ? ನಿನ್ನೊಡ ನೆಯೂ, ನನ್ನೊಡನೆಯೂ ಇಷ್ಟು ದ್ವೇಷವನ್ನು ಬೆಳೆಸಿಕೊಂಡಾದರೂ, ಭರ ತನಿಗೆ ರಾಜ್ಯವನ್ನು ಕೊಡುವುದಕ್ಕೆ ಈತನಿಗೆ ಬೇರೆ ಯಾರಬಲವುಂಟ ? ಅಮ್ಮ ಕೌಸಲ್ಯ ! ಭರತನಂತೆ ನಾನೂ ಈ ರಾಮನಿಗೆ ದಾಯಾದ ನಾಗಿದ್ದರೂ,ನನ್ನ ಅಂತರಂಗಸಾಕ್ಷಿಯಾಗಿ, ನನಗೆ ಈತನಲ್ಲಿ ಅನುರಾಗವುಂಟು .ಈವಿಷಯದಲ್ಲಿ ನಾನು ನನ್ನ ಈ ಧನುಸ್ಸಿನ ಮೇಲೆಯೂ, ನನ್ನ ಸತ್ಯದಮೇಲೆಯೂ, ನನ್ನ ಸುಕೃತಗಳಮೇಲೆಯೂ, ಆಣೆಯಿಟ್ಟು ಶಪಥಮಾಡಿಕೊಡುವೆನು, ರಾಮನು ಉರಿಯುವ ಬೆಂಕಿಯನ್ನಾಗಲಿ,ಅಥವಾ ಘೋರವಾದ ಮಹಾರಣ್ಯವನ್ನಾಗ ತಿ, ಪ್ರವೇಶಿಸುವುದಾಗಿ ತೋರಿದರೆ, ಅವನಿಗೆ ಮೊದಲೇ ನಾನು ಆಕಾರವ ನ್ನು ನಡೆಸಿರುವೆನೆಂದು ತಿಳಿ! ಸೂರೈನು ಹುಟ್ಟಿದೊಡನೆಯೇ ಕತ್ತಲೆಯನ್ನು ನೀಗಿಸುವಂತೆ, ನಾನು ನನ್ನ ವೀರದಿಂದ ನಿನ್ನ ದುಃಖವನ್ನು ಈಗಲೇ ಹೋಗ ಲಾಡಿಸುವೆನು ? ನನ್ನ ಸಾಮರ್ಥ್ಯವನ್ನಾದರೂ ನೋಡು ? ರಾಮನೂ ನನ್ನ ಶಕ್ತಿಯನ್ನು ನೋಡಲಿ”ಎಂದನು, ಮಹಾತ್ಮನಾದ ಲಕ್ಷಣನು ಹೇಳಿದ ಈ ವಾಕ್ಯವನ್ನು ಕೇಳಿ, ಕೌಸಲ್ಯಯು ದುಃಖದಿಂದ ಗೋಳಿಡುತ್ತ, ರಾಮನನ್ನು ಕುರಿತು ವತ್ಸರಾಮಾ! ನಿನ್ನ ತಮ್ಮ ನಾದ ಲಕ್ಷಣನು ಹೇಳಿದ ಮಾತನ್ನು ಕೇಳಿದೆಯಾ ? ಇದು ನಿನಗೆ ಸಮ್ಮತವಾಗಿದ್ದ ಪಕ್ಷದಲ್ಲಿ, ಮುಂದಿನ ಕಾರ ವನ್ನು ನಡೆಸು ? ಥರದೃಷ್ಟಿಯಿಲ್ಲದ ನನ್ನ ಸವತಿಯಾದ ಕೈಕೇಯಿಯ ಮಾತನ್ನು ಕೇಳಿಕೊಂಡು, ನನ್ನ ಮಾತನ್ನು ತಿರಸ್ಕರಿಸಿ, ನನ್ನನ್ನು ಸಂಕಟಪಡಿಸಿ ಹೋಗುವುದು ನಿನಗೆ ಉಚಿತವಲ್ಲ! ನೀನು ಸಮಸ್ಥರಗಳನ್ನೂ ತಿಳಿದವನು. ಧರದಲ್ಲಿಯೇ ನಿರತನಾಗಿರುವವನು. ಆದುದರಿಂದ ಧರವನ್ನು ನಡೆಸ